ಲಿಂಗಾಯತ ಧರ್ಮ: ಜಗದೀಶ ಶೆಟ್ಟರ್ ಚರ್ಚೆಗೆ ಬರಲಿ

ಲಿಂಗಾಯತ ಧರ್ಮ ಅಲ್ಲ ಎಂದು ಹೇಳುವ ಶೆಟ್ಟರ್ ಯಾವ ಮೂಲೆಯ ಪಂಡಿತ?

ಬೀದರ

ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಲಿಂಗಾಯತ ಧರ್ಮವೇ ಅಲ್ಲ ಎಂದು ಹೇಳಿದ್ದನ್ನು ಖಂಡಿಸುತ್ತೇನೆ.

ಇಲ್ಲಿ ಪುರಾವೆ ಸಹಿತ ಸ್ಪಷ್ಟೀಕರಣ ನೀಡಿದ್ದೇನೆ, ತೃಪ್ತಿ ಇಲ್ಲಾಂದರೆ ಚರ್ಚೆಗೂ ಸಿದ್ಧ, ಜಾಗ ನೀವು ನಿರ್ಧರಿಸಿ ನಾವು ಬರುತ್ತೇವೆ, ಲಿಂಗಾಯತರು ನ್ಯಾಯ ನಿಷ್ಠುರಿಗಳು ಯಾರಿಗೂ ಅಂಜುವವರಲ್ಲ:

ಲಿಂಗಾಯತ ಧರ್ಮದ ಹೆಸರಿನ ಮೇಲೆ ಟಿಕೆಟ್ ತಗೊಂಡು, ಲಿಂಗಾಯತ ಧರ್ಮದ ಹೆಸರಿನ ಮೇಲೆ ಮಂತ್ರಿ ಆಗಿ, ಲಿಂಗಾಯತ ಹೆಸರಿನ ಮೇಲೆ ಮುಖ್ಯಮಂತ್ರಿ ಆಗಿ, ಲಿಂಗಾಯತ ಧರ್ಮವೇ ಅಲ್ಲ ಎಂದು ಹೇಳಲು ನಾಚಿಕೆ ಆಗಬೇಕು.

ಆರ್ ಎಸ್ ಎಸ್ ಮುಖಂಡರ ಓಲೈಸಲು ಸ್ವಂತ ಧರ್ಮವನ್ನು ಹೀಯಾಳಿಸುವುದು ಹಡೆದ ತಾಯಿ ಹೀಯಾಳಿಸಿದ ಹಾಗೆ:

ಶೆಟ್ಟರ ಕಾಂಗ್ರೆಸ್ ಸೇರಿದ್ದಾಗ ಶ್ರೀ ರಣದೀಪ ಸಿಂಗ್ ಸೂರ್ಜೆವಾಲ ನನಗೆ ಹೇಳಿದ್ದರು, ಔರ್ ಏಕ್ ಬಡಾ ಲಿಂಗಾಯತ ಲೀಡರ್ ಜಾಯಿನ್ ಕಿಯಾ ಅಂದಿದ್ದರು.

ನಾನು ಶೆಟ್ಟರ ಲಿಂಗಾಯತ ನಹಿ ನಕಲಿ ಹೈ, ಕರ್ನಾಟಕ ಮೇ ಉನಕಾ ಲಿಂಗಾಯತ ಮೇ ಕೋಯಿ ಇಜ್ಜತ ನಹಿ. ಎಂದು ಅಂದಿದ್ದೆ.

ಶೆಟ್ಟರ, ಲಿಂಗಾಯತ ಧರ್ಮವೆ ಇಲ್ಲ, ಲಿಂಗಾಯತ ಧರ್ಮ ಅನ್ನುವವರ ಜೊತೆ ಚರ್ಚೆ ಮಾತಾಡಲು ಸಿದ್ದ ಎಂದು ಫರ್ಮಾನು ಮಾಡಿದ್ದಾರೆ.

ಮೊದಲು ರಾಷ್ಟ್ರೀಯ ಬಸವ ದಳದ ಮಾತಾಜಿ ಅಭಿಮಾನಿಗಳ 18 ವರ್ಷದ ಎಳೆಯ ಯುವಕ ಯುವತಿಯರ ಜೊತೆ ಚರ್ಚೆ ಮಾಡಿ, ನಿಮಗೆ ತಿಳುವಳಿಕೆ ಕೊಟ್ಟು ಅವರೇ ನಿಮ್ಮ ನೀರು ಇಳಿಸುತ್ತಾರೆ.

ನಂತರ ಮಾತಾಜಿ ಬೆಳೆಸಿದ ಪೂಜ್ಯರ, ಸಂಘಟನೆ ಪದಾಧಿಕಾರಿಗಳ, ಬಸವಪರ ಸಂಘಟನೆಗಳ ಪೂಜ್ಯರ, ಮಠಾಧಿಪತಿಗಳ, ಮುಖಂಡರ ಚರ್ಚೆಗೆ ಬನ್ನಿ.

ಲಿಂಗಾಯತ ಧರ್ಮ ಹನ್ನೆರಡನೆ ಶತಮಾನದಲ್ಲಿ ಬಸವಾದಿ ಶರಣರು 770 ಮಹಾಗಣಂಗಗಳು ಸೇರಿ ಸ್ಥಾಪನೆ ಮಾಡಿದ್ದು ಇತಿಹಾಸ:

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಭಾಷಣ ಮತ್ತು ಕೃತಿಗಳ 22ನೆ ಸಂಪುಟದ 541-42 ಪುಟದಲ್ಲಿ: ‘ಬಸವೇಶ್ವರರು ಸನಾತನ ವೈಧಿಕ ಧರ್ಮದಲ್ಲಿ ಇಂದಿನ ಹಿಂದೂ ಧರ್ಮದಲ್ಲಿ ಮೂಢನಂಬಿಕೆ, ಮೌಢ್ಯಾಚರಣೆ, ಜಾತಿ ಲಿಂಗ ವರ್ಗ ವರ್ಣಭೇದ, ಅಸ್ಪೃಶ್ಯತೆ ವಿರುದ್ಧ ಹೊಸ ಧರ್ಮ ಸ್ಥಾಪನೆ ಮಾಡಿದ್ದಾರೆ,’ ಎಂದು ಬರೆದಿದ್ದಾರೆ.

ಬ್ರಾಹ್ಮಣರು ಸೇರಿ ಅಂತ್ಯಜರವರೆಗೆ ಎಲ್ಲರೂ ಜಾತಿ ಲಿಂಗ ವರ್ಗ ವರ್ಣ ಭೇದ ಮರೆತು ಲಿಂಗಾಯತ ಧರ್ಮ ಸ್ವೀಕರಿಸಿದ್ದಾರೆ ಎಂದು ನಮೂದಿಸಿದ್ದಾರೆ. ಜಗತ್ತಿನ ಶ್ರೇಷ್ಠಜ್ಞಾನಿ ಎಂದು ಹೆಸರು ಪಡೆದ ಬಾಬಾಸಾಹೇಬ ಅಂಬೇಡ್ಕರ್ ಅವರೇ ಲಿಂಗಾಯತ ಧರ್ಮ ಎಂದು ಬರೆದಿದ್ದಾಗ, ಲಿಂಗಾಯತ ಧರ್ಮ ಅಲ್ಲ ಎಂದು ಹೇಳುವ ಈ ಶೆಟ್ಟರ ನೀವು ಯಾವ ಮೂಲೆಯ ಪಂಡಿತ?

ಭಾರತದ ಹಿಂದೂ ಕಾಯ್ದೆಯ ಪ್ರಾಸ್ತಾವಿಕ ಬರಹದಲ್ಲಿ ಹಿಂದೂ ಕಾನೂನು ಯಾರ್ಯಾರಿಗೆ ಸಂಬಂಧ ಪಟ್ಟಿದ್ದು ಎಂದು ವಿವರಿಸುತ್ತದೆ. ಅದು ಹಿಂದೂ, ಬೌದ್ಧ, ಕ್ರಿಶ್ಚಿಯನ್, ಜೈನ, ಸಿಖ್, ಪಾರ್ಸಿ, ಲಿಂಗಾಯತ, ವೀರಶೈವದವರಿಗೆ ಸಂಬಂಧಪಟ್ಟಿದ್ದು ಎಂದು ಹೇಳಲಾಗಿದೆ.

1881ರವರೆಗೆ ಬ್ರಿಟಿಷರು ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದೇ ಅಧಿಕೃತವಾಗಿ ಪರಿಗಣಿಸಿದ್ದು, ನಂತರ ಆದ ಬದಲಾವಣೆ ಗೊಂದಲ ಎಲ್ಲರಿಗೂ ಗೊತ್ತಿರುವ ವಿಷಯ.

ಈ ಇತಿಹಾಸ ಬೇಕಿದ್ದರೆ ಶೆಟ್ಟರ ಅವರಿಗೆ ಸರಿಯಾದ ಪುಸ್ತಕಗಳನ್ನು ಓದಲು ಕಳಿಸುತ್ತೇವೆ.

ಲಿಂಗಾಯತ ಧರ್ಮ ಎನ್ನಲು ವಚನಗಳಲ್ಲಿ ನೂರಾರು ಸಾಕ್ಷ್ಯ ಸಿಗುತ್ತವೆ.

ಯಾವುದೇ ಧರ್ಮ ಎಂದು ಹೇಳಲು ಸ್ಥಾಪಕರು ಬೇಕು. ಬಸವಣ್ಣ ನಮ್ಮ ಧರ್ಮದ ಸಂಸ್ಥಾಪಕರು. ಸ್ಥಳ ಬೇಕು, ಅದು ಬಸವಕಲ್ಯಾಣ. ಧರ್ಮಗ್ರಂಥ ಬೇಕು, ಅದು ವಚನ ಸಾಹಿತ್ಯ (ಜಗತ್ತಿನಲ್ಲಿ ಬಸವಣ್ಣನವರನ್ನು ಬಿಟ್ಟರೆ ಯಾವುದೇ ಧರ್ಮದ ಧರ್ಮಗುರು ಸ್ವತಃ ಕೈಯಿಂದ ಸಾಹಿತ್ಯ ರಚನೆ ಮಾಡಿಲ್ಲ).

ಧರ್ಮದ ದೇವರು ಬೇಕು, ಅದು ಸೃಷ್ಟಿಕರ್ತ ಲಿಂಗದೇವರು/ಪರಶಿವ, ನಮ್ಮ ಧರ್ಮದ ಧ್ಯೇಯ ಸಮ ಸಮಾಜ, ಪ್ರಜಾಪ್ರಭುತ್ವ, ನಮ್ಮ ಸಿದ್ಧಾಂತ ಕಾಯಕ ಮತ್ತು ದಾಸೋಹ.

ಲಿಂಗಾಯತ ಧರ್ಮಕ್ಕೆ ವಚನಗಳ ಆಧಾರ

ಬಸವಣ್ಣ

ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು,
ಅವರೆಂತಿದ್ದಡೇನು ಹೇಗಿದ್ದಡೇನು #ಲಿಂಗವಂತರವರು,
ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು

ಬಸವಣ್ಣ

ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ

ಬಸವಣ್ಣ

ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು,
ಲಿಂಗವಂತರು ತಾವು ಅಂಜಲದೇಕೆ
ಲಿಂಗವಿರಿಸಿದಂತಿಪ್ಪುದಲ್ಲದೆ,
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ

ಸಿದ್ಧರಾಮೇಶ್ವರ

ಭಕ್ತಿಯುಕ್ತನುಮಲ್ಲ ಮುಕ್ತಿಗ್ರಾಹಕನಲ್ಲ
ಪಥದ ವೇದ್ಯನುವಲ್ಲದೆಂತೆಂತೋ?
ಕರ್ಮಕಾಯನಲ್ಲ ಕಾಲಾಗ್ನಿಯಲ್ಲ
ತನ್ನ್ಲ ತಾನೆ ಆಕಾರಂ ಬೊ
ಆಗಮವಾಯವೋನ್ನಮಃ ನಾ ದೇವದೇವ
ಲಿಂಗಾಯತ್ತಂಬೊ ಸ್ವತಂತ್ರಶೀಲ
ಕಪಿಲಸಿದ್ಧಮಲ್ಲಿನಾಥಾ,
ಆತನೆ ಅಚ್ಚಶರಣಂ ಬೊ

ಚನ್ನಬಸವಣ್ಣ

ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ #ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ

ಬಸವಣ್ಣ

ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ
ಕಾರಣ ಬಹುಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು.
ಎನಗೆ ಗುರುಪಥವ ತೋರಿದವರಾರು,
ಲಿಂಗಪಥವ ತೋರಿದವರಾರು,
ಜಂಗಮಪಥವ ತೋರಿದವರಾರು,
ಪಾದೋದಕ ಪ್ರಸಾದಪಥವ ತೋರಿದವರಾರು,
ತೋರುವ ಮನವೆ ನೀವೆಂದರಿತೆ.
ಎನಗಿನ್ನಾವ ಭವವಿಲ್ಲ,
ಕೂಡಲಸಂಗಮದೇವಾ.

ಸರ್ವಜ್ಞ

ಬಸವ ಗುರುವಿನ,
ಹೆಸರು ಬಲ್ಲವರಾರಿಲ್ಲ,
ಲಿಂಗಾಯತಕ್ಕೆ ಬಸವಣ್ಣನೇ ಕರ್ತೃ ಸರ್ವಜ್ಞ

ಲಿಂಗಾಯತ ಧರ್ಮ ಜಗತ್ತಿನ ಎಲ್ಲಾ ಧರ್ಮಕ್ಕೂ ವಿಭಿನ್ನ.

ಜಗತ್ತಿನ ಧರ್ಮಗಳು ಸಾಮಾನ್ಯವಾಗಿ ಸ್ವರ್ಗ ನರಕ, ಪುಣ್ಯ, ಪಾಪ, ಪರಲೋಕ ಇಹಲೋಕ, ಕರ್ಮಸಿದ್ಧಾಂತ, ಪುನರ್ಜನ್ಮ ಒಪ್ಪುತ್ತವೆ. ಆದರೆ ಇವ್ಯಾವೂ ಒಪ್ಪದ ಜಗತ್ತಿನ ಧರ್ಮ ಲಿಂಗಾಯತ.

ಬಸವಣ್ಣ

ಪುಣ್ಯವೆಂದರಿಯೆ, ಪಾಪವೆಂದರಿಯೆ,
ಸ್ವರ್ಗವೆಂದರಿಯೆ ನರಕವೆಂದರಿಯೆ,
ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ,
ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ.

ಬಸವಣ್ಣ

ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ,
‘ಅಯ್ಯಾ ಎಂದಡೆ ಸ್ವರ್ಗ, ‘ಎಲವೊ ಎಂದಡೆ ನರಕ.
ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ
ಕೈಲಾಸವೈದುವುದೆ ಕೂಡಲಸಂಗಮದೇವಾ

ಬಸವಣ್ಣ

ಪುಣ್ಯಪಾಪವೆಂಬ ಉಭಯಕರ್ಮವನಾರು ಬಲ್ಲರಯ್ಯಾ,
ಇವನಾರುಂಬರು,
ಕಾಯ ತಾನುಂಬಡೆ ಕಾಯ ತಾ ಮಣ್ಣು,
ಜೀವ ತಾನುಂಬಡೆ ಜೀವ ತಾ ಬಯಲು,
ಈ #ಉಭಯನಿರ್ಣಯವ ಕೂಡಲಸಂಗಮದೇವಾ,
ನಿಮ್ಮ ಶರಣ ಬಲ್ಲ

ಬಸವಣ್ಣ

ಸುಖ ಬಂದಡೆ ಪುಣ್ಯದ #ಫಲವೆನ್ನೆನು,
ದುಃಖ ಬಂದಡೆ ಪಾಪದ ಫಲವೆನ್ನೆನು.
ನೀ ಮಾಡಿದಡಾಯಿತ್ತೆಂದೆನ್ನೆನು,
ಕರ್ಮಕೆ ಕರ್ತುವೆ ಕಡೆಯೆಂದೆನ್ನೆನು,
ಉದಾಸೀನವಿಡಿದು ಶರಣೆನ್ನೆನು.
ಕೂಡಲಸಂಗಮದೇವಾ, ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ-
ಸಂಸಾರವ ಸವೆಯೆ ಬಳಸುವೆನು

ಬಸವಣ್ಣ

ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ ಉಂಡಲ್ಲದೆ ಮಾಣದು,
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು
ಶ್ರುತಿ ಸಾರುತ್ತೈದಾವೆ ನೋಡಾ.
ತಾನಾವಾವ ಲೋಕದೊಳಗಿದ್ದಡೆಯೂ ಬಿಡದು,
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವಮಾಡಿದವನೆಧನ್ಯ

ಅಲ್ಲಮಪ್ರಭುದೇವರು

ಅರಿತು ಜನ್ಮವಾದವರಿಲ್ಲ , #ಸತ್ತು ಮರಳಿ ತೋರುವರಿಲ್ಲ.
ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ

ಬಸವಣ್ಣ

ಭಕ್ತಿಯೆಂಬ ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು ಎನ್ನ ಮನ ನಾಚಿತ್ತು, ನಾಚಿತ್ತು. ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ, ಆ ಪೃಥ್ವಿಗೆ ಲಯವುಂಟು, ಆ ಮೊರಡಿಗೆಯು ಲಯವುಂಟು, ಅಲ್ಲಿರ್ಪ ಗಂಗೆವಾಳುಕಸಮರುದ್ರರಿಗೂ…

ಬಸವಣ್ಣ

ಶರಣ ನಿದ್ರೆಗೈದಡೆ ಜಪ ಕಾಣಿರೊ, ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಶರಣ ನಡೆದುದೆ ಪಾವನ ಕಾಣಿರೊ, ಶರಣ ನುಡಿದುದೆ ಶಿವತತ್ವ ಕಾಣಿರೊ, ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ.

ಬಸವಣ್ಣ

ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ‍ಈ ಲೋಕದೊಳಗೆ ಮತ್ತೆ ಅನಂತಲೋಕ ‍‍ಶಿವಲೋಕ, ಶಿವಾಚಾರವಯ್ಯಾ. ‍‍‍ಶಿವಭಕ್ತನಿದ್ದ ಠಾವೆ ದೇವಲೋಕ, ‍‍ಭಕ್ತನಂಗಳವೆ ವಾರಣಾಸಿ, ಕಾಯಕವೆ ಕೈಲಾಸ, ಇದು ಸತ್ಯ, ಕೂಡಲಸಂಗಮದೇವಾ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
6 Comments
  • ಜಗದೀಶ್ ಶೆಟ್ಟರ್ ದೇವರೇ ನೀವು ಗೆದ್ದು ಬಂದು ಕರ್ನಾಟಕದ ಮುಖ್ಯಮಂತ್ರಿ ಆದ್ರಲ್ಲ ಇದು ಯಾವ ಕೆಟೆಗೇರಿ ಮೇಲೆ ಬೇಳೆ ಬೇಯಿಸಿಕೊಂಡಿರಲ್ಲ, ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಥೂ ಉಂಡ ಮನೆಗೆ ಎರಡು ಬಗೆಯುವ ಚಾಳಿ.

  • Most appropriate answer to an ignorant person about Lingayat religion. But many people make such irrelevant statement not because of their ignorance but simply to misguide the innocent people.

  • ಲಿಂಗಾಯತ ಒಂದು ಜಾಗತಿಕ ಧರ್ಮವಾಗುವ ಎಲ್ಲಾ ಲಕ್ಷಣಗಳನ್ನು ಪಡೆದಿದೆ ಆದರೆ ನಮ್ಮ ಜಗದೀಶ್ ಶೆಟ್ಟರ್ ನಂತಹ ಆಷಾಢಭೂತಿಗಳಿಂದ ಈ ಧರ್ಮ ಇಂತಹ ಪರಿಸ್ಥಿತಿ ಬಂದಿದೆ.

  • The staunch supporters of Lingayat religion should boycott him and teach a lesson by defeating in the next elections. Belagavi and Dharwad district people particularly should keep in mind his anti linayat stand.

  • ಬಸವ ಪರ ಸಂಘಟನೆಗಳ ಸದಸ್ಯರು ಜಗದೀಶ್ ಶೆಟ್ಟರ್ ರವರ ಮನೆ ಮುಂದೆ ಸಾಂಕೇತಿಕವಾಗಿ ಧರಣಿ ಮಾಡಿ, ಈ ಪ್ರತಿಭಟನೆಯ ಸುದ್ದಿಯನ್ನು ಪತ್ರಿಕಾ ಮಾಧ್ಯಮ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಚಾರವಾಗುವಂತೆ ಕಾರ್ಯಕ್ರಮ ಕೈಗೊಳ್ಳಬೇಕು. ಅಂದಾಗ ಇಂತಹ ಅಪ್ರಬುದ್ಧ ನಾಯಕರ ಉದ್ಧಟತನದ ಹೇಳಿಕೆಗಳಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಬೀಳುತ್ತದೆ.

    • ಶಿವಾನಂದ ಶರಣರು ಹೆಳಿದಮತು ಸತ್ಯ ಅವರಿಗೆ ಲಿಂಗಾಯತರು ಬುದ್ದಿ ಕಲಿಸಬೇಕು ಇಲ್ಲಾಅಂದರೆ ಹಿಂತವರು ಮುಂದೆ ಬಹಳ ಜನರಾಗುತ್ತಾರೆ ಆದಕಾರಣ ಇವರಿಗೆ ಇಗಲೆ ಎಲ್ಲ ಬಸವಪರ ಸಂಘಟನೆಗಳು ಅವರ ಮನೆಗೆ ಹೂಗೊಣ

Leave a Reply

Your email address will not be published. Required fields are marked *

ಕರ್ನಾಟಕ ರಾಜ್ಯ ಸಂಚಾಲಕರು, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ