ಬೆಳಗಾವಿ
ಬೆಳಗಾವಿ ಶ್ರೀ ಬಸವೇಶ್ವರ ಉದ್ಯಾನದಲ್ಲಿ ವಿಶ್ವಗುರು ಬಸವಣ್ಣನವರ 50 ಅಡಿ ಎತ್ತರದ ಮೂರ್ತಿಯನ್ನು ಸ್ಥಾಪಿಸಬೇಕು ಎಂದು ವಿವಿಧ ಬಸವಪರ ಸಂಘಟನೆಗಳ ನಾಯಕರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದವು.
ನಗರದಲ್ಲಿ ಸರ್ಕಾರದ ಮತ್ತು ಶಾಸಕರ ಅನುದಾನದಲ್ಲಿ ಅನೇಕ ಮಹಾತ್ಮರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಆದರೇ ಅತ್ಯಂತ ಹಳೆಯದಾದ ನಗರದ ಗೋವಾವೇಸನಲ್ಲಿರುವ ಬಸವೇಶ್ವರ ಉದ್ಯಾನದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಬಸವಾಭಿಮಾನಿಗಳು ಅಸಮಾಧಾನ ತೋಡಿಕೊಂಡರು.
ಬೆಂಗಳೂರು ಮಾದರಿಯಲ್ಲಿ ಸರಕಾರ ಬಸವೇಶ್ವರ ಉದ್ಯಾನದ ಅಭಿವೃದ್ಧಿ ಮಾಡಬೇಕೆಂದು ಅವರು ಆಗ್ರಹಪಡಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ಯುವ ಘಟಕ ಜಾಗತಿಕ ಲಿಂಗಾಯತ ಮಹಾಸಭಾ, ಚನ್ನಬಸವ ಫೌಂಡೇಶನ್, ಬಸವೇಶ್ವರ ಯುವಕ ಮಂಡಳಿ, ಸಡರ್ ಸಂಸ್ಥೆ, ಲಿಂಗಾಯತ ಸೇವಾ ಸಮಿತಿ, ಹಡಪದ ಅಪ್ಪಣ್ಣ ಸಮಾಜ, ಹರಳಯ್ಯ ಸಮಾಜ, ಕಾರ್ಯನಿರತ ಗುತ್ತಿಗೆದಾರರ ಸಂಘ, ಮತ್ತು ಇತರ ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.