ದಾವಣಗೆರೆ
ಬಸವಣ್ಣ ಅರ್ಥವಾಗಿದ್ದರೆ ಕರ್ನಾಟಕದಲ್ಲಿ ಕೋಮುಭಾವನೆ ಕೆರಳುತ್ತಿರಲಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಬಿ.ರಾಮಚಂದ್ರಪ್ಪ ಶನಿವಾರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿ.ಜಿ.ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ‘ಲಿಂಗಾಯತ ಮಠಗಳು ಬಸವಣ್ಣನನ್ನು ಅರ್ಥ ಮಾಡಿಕೊಂಡಿದಿದ್ದರೆ, ಕೋಮುವಾದಿ ರಾಜಕಾರಣ ಕಾಲಿಡುತ್ತಿರಲಿಲ್ಲ’ ಎಂದರು.
“ನಾಗರ ಪಂಚಮಿ ಮೂಲಕ ಬಸವಣ್ಣನ ಚಿಂತನೆ ಮರೆಮಾಚಿ ಮೌಢ್ಯಗಳನ್ನು ಬಿತ್ತುವ ಪ್ರಯತನ ನಡೆಯುತ್ತಿದೆ ಎಂದರು. ರಾಜ್ಯಾದ್ಯಂತ ಬಡ ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ ಮಾನವ ಬಂಧುತ್ವ ವೇದಿಕೆ ಬಸವ ಪಂಚಮಿ ಆಚರಿಸಲಿದೆ. ಮಠಾಧೀಶರೂ ಕೈ ಜೋಡಿಸುತ್ತಿದ್ದಾರೆ” ಎಂದರು.
(ಕೃಪೆ ಪ್ರಜಾವಾಣಿ )
ಲಿಂಗಾಯತ ಮಠಗಳು ಬಸವಣ್ಣನನ್ನು ಅರ್ಥ ಮಾಡಿಕೊಂಡಿದಿದ್ದರೆ, ಕೋಮುಭಾವನೆ ಕೆರಳುತ್ತಿರಲಿಲ್ಲ: ಎ. ಬಿ.ರಾಮಚಂದ್ರಪ್ಪ
Leave a comment