ದಾವಣಗೆರೆ
ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಚನ ಸಂರಕ್ಷಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ರುದ್ರೇಗೌಡರು ವಚನಗಳನ್ನು ನಾವು ಚನ್ನಾಗಿ ತಿಳಿದುಕೊಂಡರೆ ನಮ್ಮ ಜೀವನ ಬದಲಾಗುತ್ತದೆ ಎಂದು ಹೇಳಿದರು.
ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂಬ ವಚನ ಎಲ್ಲರಿಗೂ ಅರ್ಥಆದರೆ ಜಗತ್ತಿನಲ್ಲಿ ಅಶಾಂತಿಯೇ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ನೈತಿಕತೆ ಭ್ರಷ್ಟಾಚಾರ ಈ ದೇಶದ ಇಂದಿನ ಸಾಮಾಜಿಕ ಪಿಡುಗು ಆಗಿದೆ ಇವುಗಳಿಗೆ ವಚನಸಾಹಿತ್ಯ ಪರಿಹಾರ ನೀಡುತ್ತದೆ, ಮಕ್ಕಳಲ್ಲಿ ನೈತಿಕತೆ ಮಾಡುವುದು ಈಗಿನ ಅತೀ ಅಗತ್ಯ ಎಂದು ಮುಖ್ಯ ಅತಿಥಿಯಾಗಿ ಮಾತನಾಡಿ ಶರಣ ವಿಶ್ವೇಶ್ವರಯ್ಯ ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಇಂಥಹ ಅಮೂಲ್ಯ ವಚನ ಸಾಹಿತ್ಯ ಕಾಲಗರ್ಭದಲ್ಲಿ ಮುಚ್ಚಿ ಹೋಗಿತ್ತು. ಅವುಗಳನ್ನು ಸಂಶೋಧನೆ ಮಾಡಿ ಮನುಕುಲಕ್ಕೆ ಮಹತ್ವದ ಕೊಡುಗೆ ನೀಡಿದ ವಚನ ಪಿತಾಮಹ ಪಾಗು ಹಳಕಟ್ಟಿ ಅವರ ಜೀವನ ಸಾಧನೆ ವಿವರಿಸಿದರು.
ಇನ್ನೊರ್ವ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶರಣೆ ಬಿಂದ ಆರ್ ಡಿ ರಾಂಪುರ ಅವರು ಬಸವಣ್ಣನವರು ಮನುಕುಲಕ್ಕೆ ಕೊಟ್ಟ ಕೊಡುಗೆ ಅತ್ಯಂತ ಮಹತ್ವವಾದುದು, ಇಂಥಹ ಮಹಾನ್ ವ್ಯಕ್ತಿ ನಿಜವಾದ ಸಾಂಸ್ಕೃತಿಕ ನಾಯಕ, ಎಂದು ಹೇಳಿದರು
ವಚನ ಕಂಠಪಾಠ ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಶರಣೆ ಶೋಭಾ ಎ ಅವರು ಮಕ್ಕಳಲ್ಲಿ ಧನಾತ್ಮಕ ಬದಲಾವಣೆ ಅತಿ ಅಗತ್ಯ, ಕಳಬೇಡ ಕೊಲಬೇಡ ಎಂಬ ವಚನ ಒಂದೇ ಸಾಕು ಮನುಷ್ಯನ ಸಂಪೂರ್ಣ ವ್ಯಕ್ತಿತ್ವದ ನಿರ್ಮಾಣ ಮಾಡಲು ಎಂದು ವಿಶ್ಲೇಷಣೆ ಮಾಡಿದರು
ಶರಣ ಟಿ ಎಂ ಶಿವಮೂರ್ತಯ್ಯ ಪ್ರಾಸ್ತಾವಿಕ ನುಡಿಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಇತಿಹಾಸ ಮತ್ತು ದತ್ತಿ ದಾನಿಗಳ ಪರಿಚಯ ತಿಳಿಸಿದರು
ಶರಣ ಷಣ್ಮಖಪ್ಪ ಸಾಲಿ ಅವರು ಸಭೆಗೆ ಎಲ್ಲರನ್ನೂ ಸ್ವಾಗತಿಸಿದರೆ ಶರಣ ನಾಗರಾಜ್ ಅವರು ಎಲ್ಲರಿಗೂ ಶರಣು ಸಮರ್ಪಣೆ ಮಾಡಿದರು.
ಸಭೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ಯ ಅಧ್ಯಕ್ಷರಾದ ಶರಣ ಆವರಗೆರೆ ರುದ್ರಮುನಿ ಉಪಸ್ಥಿತರಿದ್ದರು