ಕೆಲವು ವರ್ಷಗಳ ಹಿಂದೆ ಹೆಸರು ಬದಲಿಸಿಕೊಂಡು ಅಖಿಲ ಭಾರತ ವೀರಶೈವ ಮಹಾಸಭಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಗಿತ್ತು ಅನ್ನೋ ಸುದ್ದಿಯಿತ್ತು.
ಆದರೆ ಇತ್ತೀಚೆಗೆ ನಡೆದ ಮಹಾಸಭಾದ ಚುನಾವಣೆಯಲ್ಲಿ “ಲಿಂಗಾಯತ” ಪದ ಮಾಯವಾಗಿದ್ದು ಮತ ಪತ್ರದಲ್ಲಿ ನಲ್ಲಿ ಕೇವಲ “ಅಖಿಲ ಭಾರತ ವೀರಶೈವ ಮಹಾಸಭಾ (ರಿ) ಬೆಂಗಳೂರು” ಅಂತ ಮಾತ್ರ ಇದೆ.
ಈ ಮತ ಪತ್ರಗಳು ಈಗ ವೈರಲ್ ಆಗಿ ಅನೇಕರು “ಲಿಂಗಾಯತ” ಪದ ಮಾಯವಾಗಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಅದಕ್ಕೆ ಮಹಾಸಭಾ “ಲಿಂಗಾಯತ” ಪದವನ್ನು ಅಧಿಕೃತವಾಗಿ ತನ್ನ ಹೆಸರಿನಲ್ಲಿ ಸೇರಿಸಿಕೊಂಡಿಲ್ಲ, ಬರೀ ಬಳಕೆಗೆ ಮಾತ್ರ ಸೀಮಿತಗೊಳಿಸಿದೆ ಅನ್ನೋ ಉತ್ತರವೂ ದೊರೆತಿದೆ.