ಆಳಂದ :
ದಿನಾಂಕ 28ರಂದು ಕಲ್ಬುರ್ಗಿಯಲ್ಲಿ ರಾಜೇಶ್ ಮತ್ತು ದೀಪ ವಿಶಿಷ್ಟ ರೀತಿಯಲ್ಲಿ ಮದುವೆಯಾದರು.
ಅವರು ಬುದ್ದ ಬಸವ ಅಂಬೇಡ್ಕರ್ ಹಾಗೂ ಇನ್ನೂ ಅನೇಕ ಮೂಲನಿವಾಸಿ ಮಹಾಪುರುಷರ ಸಂದೇಶ ಸಾರುವ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ನೇಹಿತರಿಗೆ ಬಂಧು-ಬಳಗಕ್ಕೆ ವಿತರಿಸಿದ್ದರು.
ಬಹುಜನ ಮೂಲನಿವಾಸಿ ವಿಚಾರವಾದಿಯಾದ ರಾಜೇಶ್ ತಮ್ಮ ವಿಚಾರಗಳನ್ನು ಮದುವೆಯಾಗಲಿರುವ ಯುವತಿಗೆ ತಿಳಿಸಿದಾಗ ಅವರು ಸಹ ಸಂತೋಷದಿಂದ ಒಪ್ಪಿಗೆಯನ್ನು ನೀಡಿದ್ದರು.
ಕುಟುಂಬದವರೊಂದಿಗೆ ಸಾಕಷ್ಟು ವಾದ ವಿವಾದ ನಡೆದು ವಿರೋಧದ ನಡುವೆಯೂ ವೈದಿಕ ಮಧ್ಯಸ್ಥಿಕೆ ಇಲ್ಲದೆಯೇ ಸರಳವಾಗಿ ಮದುವೆಯನ್ನು ಮಾಡಿಕೊಂಡರು.
ನಮ್ಮ ಭಾರತೀಯ ಸಂಸ್ಕೃತಿ ಅಳಿದು ಹೋಗುತ್ತಿರುವ ಇಂಥ ಒಂದು ಸಮಯದಲ್ಲಿ ಯುವಕರಿಗೆ ಈ ದಂಪತಿಗಳು ಮಾದರಿಯಾಗಿದ್ದಾರೆ. ಇವರ ಈ ಹೊಸ ಪ್ರಯತ್ನವನ್ನು ಜನರು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದಾರೆ.
ಬಸವಾದಿ ಶರಣರ ವಚನಗಳ ಪಠಣ,
ಪ್ರಾರ್ಥನೆ ಹಾಗೂ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂಥ ಆಡಂಬರವಿಲ್ಲದ ಸರಳವಾದ ಮದುವೆಗಳು ಇನ್ನು ಹೆಚ್ಚು ಹೆಚ್ಚು ನಡೆಯಬೇಕೆಂದು ಮದುಮಗ ರಾಜೇಶ್ ತಮ್ಮ ಅಭಿಪ್ರಾಯವನ್ನು ಬಸವ ಮೀಡಿಯಾದೊಂದಿಗೆ ಹಂಚಿಕೊಂಡರು.