ರಾಣೆಬೆನ್ನೂರು:
‘ವಚನಕಾರರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಿದರೆ ವಚನ ಸಾಹಿತ್ಯಕ್ಕೆ ಕಳಂಕ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಸ್ಟೇಶನ್ ರಸ್ತೆಯ ವರ್ತಕರ ಸಮುದಾಯ ಭವನದಲ್ಲಿ ಪರಿವರ್ತನ ರಾಣೆಬೆನ್ನೂರು ಮತ್ತು ಕರ್ನಾಟಕ ವೈಭವ ಸಂಸ್ಥೆಯಿಂದ ಈಚೆಗೆ ನಡೆದ ‘ವಚನ ದರ್ಶನ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು, ಎಂದು ಪ್ರಜಾವಾಣಿ ವರದಿ ಮಾಡಿದೆ.
‘ವಚನ ದರ್ಶನ ಸತ್ಯದ ದರ್ಶನವಾಗಿದೆ. ರಾಷ್ಟ್ರ ಕಟ್ಟಲು ವಚನಗಳನ್ನು ಬಳಸಿಕೊಳ್ಳಬೇಕು. ಶರಣರು ಪ್ರತಿ ಕಾಯಕದಲ್ಲೂ ಕೈಲಾಸ ಕಂಡಿದ್ದರು. ವಚನಗಳು ಸಮಾಜವನ್ನು ಒಗ್ಗೂಡಿಸಿದ್ದವು. ವೀರಶೈವ, ಲಿಂಗಾಯತ ಬೇರೆ ಬೇರೆ ಎಂದು ಒಡೆಯಲು ಹೊರಟಿದ್ದೇವೆ. ಸಮಾಜ ಒಗ್ಗೂಡಿಸುವ ಕೆಲಸವಾಗಬೇಕು. ವಚನಗಳು ಬದುಕುವ ರೀತಿ ಹೇಳಿಕೊಡುತ್ತವೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಹರಿಹರ ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಕಟ್ಟಿ ಅವರು ವಚನಗಳನ್ನು ಬರೆದ ಸಾಧನೆಗಳ ಬಗ್ಗೆ ತಿಳಿಸಿದರು.
ಇವರಿಗೆ ಈ ಬಾರಿ ಚುನಾವಣೆಯಲ್ಲಿ ಲಿಂಗಾಯತರು ನಾವು ವೀರಶೈವರಲ್ಲ ಅಂತ ಮನವರಿಕೆ ಮಾಡಿಕೊಟ್ಟಿದ್ದರೂ ಮತ್ತೆ ಅದೇ ಮಾತನಾಡುತ್ತಿದ್ದಾರೆ.