‘ಮಹಿಳೆಯರ ಸ್ವತಂತ್ರ ವ್ಯಕ್ತಿತ್ವಕ್ಕೆ ಮಾದರಿಯಾದ ಶರಣೆಯರು’

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ವಿಜಯೋತ್ಸವದ ೩ನೇ ದಿನ : ಮಹಾಶಕ್ತಿಕೂಟಗಳ ಸಮಾವೇಶ

ಬಸವಕಲ್ಯಾಣ :

೧೨ನೇ ಶತಮಾನದ ಶರಣ ಚಳುವಳಿಯಲ್ಲಿ ಅಕ್ಕಮಹಾದೇವಿ, ಅಕ್ಕನಾಗಮ್ಮ ಇತರೆ ಶರಣೆಯರು ತಮ್ಮ ವಿಚಾರ ಸ್ವಾತಂತ್ರ್ಯ, ಆತ್ಮಗೌರವ ಹಾಗೂ ಆಧ್ಯಾತ್ಮಿಕ ಸಾಧನೆಯ ಮೂಲಕ ಮಹಿಳೆಯರ ಸ್ವತಂತ್ರ ವ್ಯಕ್ತಿತ್ವಕ್ಕೆ ಮಾದರಿಯಾದರು ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ಅಂರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಮೂರನೇ ದಿನ ಮಹಾಶಕ್ತಿಕೂಟಗಳ ಸಮಾವೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮೂಲಕ ಮಹಿಳಾ ಸಬಲೀಕರಣ ಗೋಷ್ಠಿಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.

ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳು ಸಮಾನತೆ, ದುಡಿಮೆಯ ಗೌರವ ಹಾಗೂ ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರುತ್ತವೆ. ಮಹಿಳೆಯರಿಗೆ ಪರಮಾತ್ಮನ ಸ್ಥಾನ ನೀಡಿದವರು ಶರಣರು. ಎಲ್ಲರ ಅಂತರಂಗದಲ್ಲಿ ಅರಿವಿನ ರೂಪದಲ್ಲಿ ಪರಮಾತ್ಮನಿದ್ದಾನೆ.

ಮಹಿಳೆಯರ ಸಾಮರ್ಥ್ಯಕ್ಕೆ ಅವಕಾಶ ನೀಡಬೇಕು. ವೈಜ್ಞಾನಿಕ ವೈಚಾರಿಕವಾಗಿ ಮಹಿಳೆಯರು ಬೆಳೆಯಬೇಕು. ಅವರ ಸಾಧನೆಗೆ ಗೌರವ ಸಲ್ಲಿಸಬೇಕು ಇದೇ ನಿಜವಾದ ಮಹಿಳಾ ಸಬಲೀಕರಣ ಎಂದು ಅಕ್ಕ ಅವರು ನುಡಿದರು.

ಯರಬಾಗ ನೀಲಗಂಗಾ ಆಯುರ್ವೇದ ಮೇಡಿಕಲ್ ಕಾಲೇಜಿನ ಅಧ್ಯಕ್ಷ ಡಾ. ಅನಿತಾ ಮಹಾಜನ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮಗಳಿಂದ ಕ್ರಿಯಾಶೀಲತೆ ಹೆಚ್ಚುತ್ತದೆ. ಮಹಿಳೆಯರಿಗೆ ಸಮಾನ ಕ್ಷೇತ್ರಗಳಲ್ಲಿ ಸಮಾನ ಅವಕಾಶ ನೀಡಿದರೆ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.  

ಹಿರಿಯ ಪತ್ರಕರ್ತೆ ಶೋಭಾ ಎಚ್.ಜಿ. ಶರಣ ಸೇವಾ ನಾಯಕ ಪ್ರಶಸ್ತಿ ಸ್ವೀಕರಿಸಿ ವಚನಗಳು ಮನ ಮನೆಗೂ ತಲುಪಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ವಚನ ಪಸರಿಸಬೇಕು. ಸಮಯ ಸಂದರ್ಭ ಬಂದಾಗ ದುಷ್ಟಶಕ್ತಿಗಳನ್ನು ಎದುರಿಸಲು ಸಿದ್ಧರಾಗಬೇಕು.

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಅಸಾಧ್ಯವಾದುದ್ದನ್ನು ಸಾಧಿಸಬಹುದು. ಕುಟುಂಬಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೌಟುಂಬಿಕ ನ್ಯಾಯಾಲಯದಿಂದ ದೂರವಿರಬೇಕೆಂದರೆ ಮಕ್ಕಳನ್ನು ಸಂಸ್ಕೃತಯುತವಾಗಿ ಬೆಳೆಸಲು ಪ್ರಯತ್ನಿಸಬೇಕು ಎಂದರು.

ಪ್ರಾಧ್ಯಾಪಕಿ ಡಾ. ಸವಿತಾ ದಂಡೆ ಮಾತನಾಡಿ, ಜಗತ್ತಿನಲ್ಲಿ ಮೊಟ್ಟ ಮೊದಲು ಅನುಭವ ಮಂಟಪದ ಮೂಲ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದು ಬಸವಕಲ್ಯಾಣ. ಅಕ್ಕಮಹಾದೇವಿಯವರು ತಮ್ಮ ಬದುಕಿನ ಮೂಲಕ ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಬದುಕುವ ಹಕ್ಕನ್ನು ಪ್ರತಿಪಾದಿಸಿದರು.

ಶರಣೆಯರು ಜ್ಞಾನ ಮತ್ತು ಅನುಭವದ ಕ್ಷೇತ್ರದಲ್ಲಿ ಪರುಷರಿಗೆ ಸಮಾನವಾಗಿ ನಿಂತು, ಮಹಿಳೆಯರು ಸಮಾಜದ ಪರಿವರ್ತನೆಯ ಶಕ್ತಿಯಾಗಬಲ್ಲರು ಎಂಬದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಸ್ತ್ರೀ ರೋಗತಜ್ಞ ಡಾ.ಜ್ಯೋತಿಲಕ್ಷ್ಮಿ ಹಂಚಾಟೆ ಧ್ವಜಾರೋಹಣಗೈದರು.  ಡಾ. ಪ್ರಿಯಾಂಕಾ ವರವಟ್ಟೆ ಮಾತನಾಡಿದರು.

ಪೂಜ್ಯ ಸತ್ಯಕ್ಕತಾಯಿ, ಪೂಜ್ಯ ಇಂದುಮತಿ ತಾಯಿ, ನಿವೃತ್ತ ಪ್ರಾಧ್ಯಾಪಕಿ ಡಾ. ಭಾಗಿರಥ ಕೊಂಡಾ, ವಿದ್ಯಾವತಿ ಅಷ್ಟೂರೆ, ಮಹಾದೇವಿ ಬಿರಾದಾರ, ಪ್ರೊ. ಮಲ್ಲಮ್ಮ ಆರ್. ಪಾಟೀಲ, ಬಿ.ಎಂ. ಶಶಿಕಲಾ, ಶಿವಮ್ಮಾ ಹೊಳಕುಂದೆ, ಚಂಪಾವತಿ ಮಹಾಜನ, ಸಪ್ನಾ ಜಾಧವ, ರೇಣುಕಾ ಬಿರಾಜದಾರ, ಆಶಾರಾಣಿ ಮಡಿವಾಳ, ಶಶಿಕಲಾ ಸಲಗರೆ, ಜಗದೇವಿ ಸಜ್ಜನಶೆಟ್ಟಿ, ಮಹಾನಂದ ಕಿರುಣಗೆ, ನಾಗಮ್ಮಾ ಕೌಡಾಳೆ, ಸುಮಿತ್ರಾ ಡಾವಣಗಾಂವೆ, ಈರಮ್ಮ ಘಾಳೆ ಮಹಶಕ್ತಿಕೂಟಗಳ ಪ್ರತಿನಿಧಿಗಳಾಗಿ ಭಾಗವಹಿಸಿದರು.

ರೇಣುಕಾ ಹೋಗ್ತಾಪೂರೆ ಮಹಾಶಕ್ತಿಕೂಟಗಳ ಕಾರ್ಯಗಳ ವರದಿ ವಾಚಿಸಿದರು. ಡಾ. ಪ್ರಿಯಾಂಕಾ ಮಂಠಾಳೆ, ಶಾಮಾ ರಗಟೆ ಉಪಸ್ಥಿತರಿದ್ದರು.

ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಭೋಸಗಾ ವಚನ ಸಂಗೀತ ನಡೆಸಿಕೊಟ್ಟರೆ, ತರಂಗಿಣಿ ಮಹಾಶಕ್ತಿ ಕೂಟದವರಿಂದ ಕೋಲಾಟ ಅದ್ಭುತವಾಗಿ ಮೂಡಿ ಬಂತು. ಕದಳಿ ವೇದಿಕೆ ಅಧ್ಯಕ್ಷರಾದ ನಿರ್ಮಲಾ ಶಿವಣಕರ ಸ್ವಾಗತಿಸಿದರೆ ವಿಜಯಲಕ್ಷ್ಮಿ ಹೂಗಾರ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *