ಭಾಷಣ ಮೊಟಕುಗೊಳಿಸಿ, ಪೊಲೀಸ್ ರಕ್ಷಣೆಯಲ್ಲಿ ನಿರ್ಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ
ಬಸವಕಲ್ಯಾಣ
ನಾವೆಲ್ಲ ಹಿಂದೂ, ಧರ್ಮ ಒಡೆಯಬೇಡಿ, ಎಂದು ಭಾಷಣ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಭೆಯಲ್ಲೇ ತೀವ್ರ ಪ್ರತಿಭಟನೆ ಎದುರಾದ ಘಟನೆ ನಡೆದಿದೆ.
ವೇದಿಕೆ ಮೇಲೆಯೇ ಭಾರಿ ಗಲಾಟೆಯಾದ ಬಳಿಕ ವಿಜಯೇಂದ್ರ ಭಾಷಣ ಮೊಟಕುಗೊಳಿಸಿ ಪೊಲೀಸ್ ರಕ್ಷಣೆಯಲ್ಲಿ ನಿರ್ಗಮಿಸಿದರು.
ಇಂದು ಪಟ್ಟಣದಲ್ಲಿ ನಡೆದ ’47ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ’ದಲ್ಲಿ ಈ ಘಟನೆ ನಡೆದಿದೆ.
ಉದ್ಘಾಟನೆಗೆ ಬೆಳಗ್ಗೆ 11 ಗಂಟೆಗೆ ಬರಬೇಕಿದ್ದ ವಿಜಯೇಂದ್ರ ತಡವಾಗಿ ಬಂದಿದ್ದರಿಂದ ಕಾರ್ಯಕ್ರಮ ಮಧ್ಯಾಹ್ನ 1.30 ಶುರುವಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದೇವರು ಲಿಂಗಾಯತ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸ್ವತಂತ್ರ ಧರ್ಮ ಮಾನ್ಯತೆ ದೊರೆಯಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ವಿಜಯೇಂದ್ರ ಅದನ್ನು ನೇರವಾಗಿ ವಿರೋಧಿಸಿದರು. “ನಾವೆಲ್ಲ ಹಿಂದೂ ನಾವೆಲ್ಲ ಒಂದು, ಸರ್ಕಾರದ ಅನುಕೂಲಗಳಿಗೆ (ಪ್ರತ್ಯೇಕ ಧರ್ಮದ) ಚಿಂತನೆ ಮಾಡಬೇಡಿ…” ಎಂದು ಹೇಳುತ್ತಿದ್ದ ಹಾಗೆಯೇ ವೇದಿಕೆ ಮುಂದೆ ಕುಳಿತ್ತಿದ್ದವರು ಎಂದ್ದು ನಿಂತು ವಿರೋಧಿಸಿದರು.

ಗೋ ಬ್ಯಾಕ್, ಧಿಕ್ಕಾರ ಎಂದು ಘೋಷಣೆ ಹಾಕಿಕೊಂಡು ವೇದಿಕೆಗೆ ಘೇರಾವ್ ಹಾಕಲು ಬಸವಾಭಿಮಾನಿಗಳು ಪ್ರಯತ್ನಿಸುತ್ತಿದ್ದಂತೆಯೇ ಶಾಸಕ ಶರಣು ಸಲಗಾರ ಮುಂದೆ ಬಂದು ಪ್ರತಿಭಟನೆಕಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸಲಗಾರ ಅವರ ಹಿಂಬಾಲಕರು ಹಾಗೂ ಬಸವಾಭಿಮಾನಿಗಳ ನಡುವೆ ತಳ್ಳಾಟ ಶುರುವಾದಾಗ, ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರೂ ಕೈ ಕೈ ಮಿಲಾಯಿಸುವುದನ್ನು ತಪ್ಪಿಸಿದರು.
ಆದರೆ ಗಲಾಟೆ ಮುಂದುವರೆದಂತೆ ವಿಜಯೇಂದ್ರ ಭಾಷಣ ಅರ್ಧಕ್ಕೆ ನಿಲ್ಲಿಸಿ, ಸುಮ್ಮನೆ ಕುಳಿತರು. ಬಸವಲಿಂಗ ಪಟ್ಟದೇವರು, ಮಲ್ಲಿಕಾರ್ಜುನ ಖುಬಾ ಮುಂತಾದವರು ಪ್ರತಿಭಟನಾಕಾರರಿಗೆ ಶಾಂತವಾಗಲು ಮನವಿ ಮಾಡಿದರೂ ಪರಿಸ್ಥಿತಿ ತಿಳಿಯಾಗದ ಕಾರಣ 10 ನಿಮಿಷದ ನಂತರ ವಿಜಯೇಂದ್ರ ಪೊಲೀಸ್ ರಕ್ಷಣೆಯಲ್ಲಿ ನಿರ್ಗಮಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಷ್ಟ್ರೀಯ ಬಸವದಳದ ರವೀಂದ್ರ ಕೋಳಕೂರ ನಾವು ಮೊದಲು ಶಾಂತವಾಗಿಯೇ ‘ಲಿಂಗಾಯತ ಧರ್ಮಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದೆವು.
ಆಗ ಅಲ್ಲಿದ್ದ ಹಿಂದುತ್ವದ ಕಾರ್ಯಕರ್ತನೊಬ್ಬ ‘ಜೈ ಶ್ರೀರಾಮ್, ಜೈ ಸನಾತನ ಧರ್ಮ’ ಎಂದು ಕೂಗಿ ಪ್ರಚೋದಿಸಿದ. ಅದರಿಂದ ಎಲ್ಲರೂ ಕೆರಳಿ ಪ್ರತಿಭಟನೆ ತೀವ್ರಗೊಳಿಸಿದರು,” ಎಂದು ಹೇಳಿದರು.

“ರವಿ ಹಂಜ್ ವಿವಾದದ ನಂತರ ಆರೆಸ್ಸೆಸ್ ಪರ ಹೇಳಿಕೆ ನೀಡಿದ್ದ ವಿಜಯೇಂದ್ರರ ಮೇಲೆ ಮೊದಲೇ ಜನ ಸಿಟ್ಟಾಗಿದ್ದರು. ಅವರು ಭಾಷಣ ಚೆನ್ನಾಗಿಯೇ ಶುರು ಮಾಡಿದರು, ಆದರೆ ಮಧ್ಯ ತಮಿಳುನಾಡಿನ ದೀಪೋತ್ಸವದ ಬಗ್ಗೆ ಮಾತನಾಡುತ್ತಾ ಹಿಂದುತ್ವದ ವಿಷಯಕ್ಕೆ ಬಂದರು. ಆಗ ಅಸಮಾಧಾನ ಸ್ಫೋಟಗೊಂಡಿತು, ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೂಜ್ಯರೊಬ್ಬರು ಹೇಳಿದರು.
ಪ್ರತಿಭಟನೆಯ ವಿಡಿಯೋ, ಫೋಟೋಗಳು ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಜಯೇಂದ್ರರಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಈ ಪ್ರತಿಕ್ರಿಯೆಯೂ ಈಗ ಎಲ್ಲೆಡೆ ಹರಿದಾಡುತ್ತಿದೆ:
“ಲಿಂಗಾಯತ ಹೆಸರಿನ ಮೇಲೆ ನೀನು ನಿಮ್ಮಪ್ಪ ಎಲ್ಲವನ್ನು ಅನುಭವಿಸಿದ್ದೀರಿ. ಈಗ ಲಿಂಗಾಯಿತರಿಗೆ ಸೌಲತ್ತು ಬೇಕು ಎಂದಾಗ ನಿಮಗೆ ಬೇಡ ಎಂದು ಎನಿಸುವುದು ವೈದಿಕತೆಯ ಗುಲಾಮಿತನದ ಸಹಜ ಸ್ವಭಾವ. ನಿಮ್ಮ ಮಕ್ಕಳು ಮನೆಯಲ್ಲಿ ಬಂಗಾರ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿದ್ದಾರೆ, ಅದು ಲಿಂಗಾಯತರು ಹಾಕಿದ ಭಿಕ್ಷೆ. ಇಲ್ಲಿ ಲಿಂಗಾಯತ ಕೂಲಿ ಕಾರ್ಮಿಕರ ಮಕ್ಕಳಿಗೆ ತಟ್ಟೆನೂ ಇಲ್ಲ ರೊಟ್ಟಿನೂ ಇಲ್ಲ. ಅದು ನೀವು ಈ ಲಿಂಗಾಯತರಿಗೆ ಮತ್ತು ಲಿಂಗಾಯತ ಧರ್ಮಕ್ಕೆ ಮಾಡಿದ ಮಹಾದ್ರೋಹ.”

ಇದು 47ನೇ ಅನುಭವ ಮಂಟಪ್ಪ ಕಾರ್ಯಕ್ರಮ. 1947ಸ್ವತಂತ್ರ ಭಾರತ ಹಾಗೇ ಲಿಂಗಾಯತ ಧರ್ಮ ಎಂದು ಒಪ್ಪಿಗೆ ನೀಡಿದ ಜನರು ಬಿಜೆಪಿ ಜನಕ್ಕೆ ಸರಿಯಾಗಿ ಭುದ್ಧಿ ಗುದ್ಧಿ ಹೇಳಿದ್ದು ಜನರಿಗೆ ಧನ್ಯವಾದಗಳು 💐💐👏🏻👏🏻ಶರಣು 👏🏻👏🏻
ಸಮಾಜ ಎಲ್ಲವನ್ನು ಸೂಕ್ಷ್ಮ ಕಣ್ಣಿನಿಂದ ನೋಡುತ್ತದೆ.
ಈ ಸಂದರ್ಭದಲ್ಲಿ ತೇಪೆ ಹಚ್ಚುವ ಕೆಲಸ ಮಾಡುವ ಯಾವುದೇ ರಾಜಕೀಯ ನಾಯಕರ ಮಾತಿಗೆ ಮಣಿಯುವ, ಅವರು ಬಿಸಾಕುವ ಎಂಜಲು ಕಾಸಿಗೆ ಮನಸೋಲಬೇಡಿ. ಪ್ರತೀ ಸಲ ಏನಾದರೊಂದು ಸಬೂಬು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾರೆ ಅಷ್ಟೇ.
ಹಿಂದಿನಿಂದ ರವಿ ಹಂಜ್ ನಂತಹ ಕೊಳಕು ಜೀವಿಗಳನ್ನು ಮುಂದೆ ಬಿಟ್ಟು ನಮ್ಮಲ್ಲಿರುವ ಬಲಾ ಬೆಲೆ ಪರೀಕ್ಷೆ ಮಾಡುತ್ತಾರೆ.
ತುಂಬಾ ಒಳೆಯ ಕೆಲಸ ಲಿಂಗಾಯತರು ಆರ ಎಸ ಎಸ ಗುಲಾಮರಿಗೆ ಇನ್ನೂ ಕಠೊರ ಪಾಠಗಳನ್ನು ಕಲಿಸಬೆಕು. ಅವರ ಗುಲಮಗಿರಿ ಬಿಡಿಸಲೇ ಬೇಕು
ವಿಜಯೇಂದ್ರಗೆ ಬುದ್ದಿ ಇಲ್ಲ. ಅವರ ತಂದೆಯನ್ನ ಮುಖ್ಯ ಮಂತ್ರಿಯಿಂದ ಕೆಳಗೆ ಇಳಿಸಿದು ಆರ್ ಎಸ್ ಎಸ್. ಸಂತೋಷ ಹೆಗ್ಡೆ.ನಮಗೆ ಬೇಕಾಗಿರುವುದು ಲಿಂಗಾಯತ ಧರ್ಮದ ಮಾನ್ಯತೆಯನ್ನು. ನಾವು ಕಾಯಕ ಯೋಗಿಗಳು. ಸಮಾನತೆ ಸಹೊದರತ್ವ ಮತ್ತು ಒಳ್ಳೆಯ ಜೀವಿಗಳು. ಜೈ ಬಸವ ಶರಣು ಶರಣಾರ್ಥಿ
ಲಿಂಗಾಯತದ ಹೆಸರಿನಲ್ಲಿ ಎಲ್ಲವನ್ನು ಅನುಭವಿಸಿದ ಇವರಿಗೆ ಲಿಂಗಾಯತರ ಅಭಿವೃದ್ಧಿ ಆಗುವುದು ಬೇಡವಾಗಿದೆ. ಎಂತಹ ವಿಪರ್ಯಾಸ? ರಾಜ್ಯದಲ್ಲಿ ಮೂಲೆ ಗುoಪಾಗಿದ್ದ ಇವರು ಲಿಂಗಾಯತ ಧರ್ಮದವರ ಸಹಕಾರದಿಂದ ರಾಜ್ಯದ ಎಲ್ಲ ಸವಲತ್ತು ಅನುಭಿವಿಸಿ ಈಗ ಲಿಂಗವoತರ ಸವಲತ್ತು ಕೊಡಿಸಲು ಧರ್ಮದ ಪರ ನಿಲ್ಲದೆ ಇವರೊಬ್ಬರ ಅನುಕೂಲಕ್ಕಾಗಿ ಲಿಂಗಾಯತರ ನಾಶ ಮಾಡಲು ಹೊರಟಿರುವುದು ವಿಪರ್ಯಾಸವಲ್ಲವೇ.. ಲಿಂಗವಂತರು ಎಚ್ಛೆತ್ತಿದ್ದಾರೆ, ಲಿಂಗವಂತರಿಗೂ ಅರಿವಾಗಿದೆ ನಿಮ್ಮಂತವರ ಬೂಟಾಟಿಕೆ ಇನ್ನು ಮುಂದೆ ನಡೆಯುವುದು ಕಷ್ಟ.
ಲಿಂಗಾಯತ ಧರ್ಮಕ್ಕೆ ಜಯ ಸಿಗಲಿದೆ
ಲಿಂಗಾಯತರಿಗೆ ಧರ್ಮ ಬೇಡ ಎನ್ನಲು ಇವ್ರು ಯಾರು? ಇಂತವರು ಲಿಂಗಾಯತರಿಗೆ ಬೇಕಾಗಿಲ್ಲ.
ಲಿಂಗಾಯತರಿಂದ ಇವರು ರಾಜಕೀಯವಾಗಿ ಬದುಕುತ್ತಿರುವುದು. ಇವರಿಂದ ಲಿಂಗಾಯತರು ಬದುಕುತ್ತಿಲ್ಲ. ಇವರ ಅವಶ್ಯಕತೆ ಲಿಂಗಾಯತರಿಗೆ ಬೇಕಾಗಿಲ್ಲ
👌👏👍🙏💐
ಇದು ತುಂಬ ಉಪಯುಕ್ತ ಕೆಲಸ. ಬಸವ ಅಭಿಮಾನಿಗಳು ವಿಜೇಂದ್ರರ ವಿರುದ್ಧ ಪ್ರತಿಭಟಿಸಿದ್ದು ಶ್ಲಾಘನೀಯ ಕಾರ್ಯ. ಇದೇ ರೀತಿ ಲಿಂಗಾಯತ ಧರ್ಮ ವಿರುದ್ಧ ಮಾತನಾಡುವವರನ್ನು ಎಚ್ಚರಿಸುತ್ತಿರ ಬೇಕು.