‘ರೈತರ ತನು ಮನ ಭಾವ ಶುದ್ಧ ಎಂದವರು ಶರಣರು’

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ವಿಜಯೋತ್ಸವದ ಐದನೇ ದಿನ: ಕೃಷಿ ಸಮಾವೇಶ

ಬಸವಕಲ್ಯಾಣ :

ವೈಜ್ಞಾನಿಕತೆಯಿಂದ ಅಭಿವೃದ್ಧಿ ಪಡಿಸಿದ ತಳಿಗಳನ್ನು ರೈತರು ಬಳಸಿಕೊಂಡು ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿಗಳನ್ನು ಪಡೆಯಬಹುದು ಎಂದು ಹೈದರಾಬಾದಿನ ಅಂತಾರಾಷ್ಟ್ರೀಯ ಅರೆ ಒಣ ಪ್ರದೇಶಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಜಾಬಾ ಜಗದೀಶ ಹೇಳಿದರು.

ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಐದನೆ ದಿನದ ಕಾರ್ಯಕ್ರಮದ ರೈತ ಸಮಾವೇಶದಲ್ಲಿ ‘ಶರಣ ವಿಜ್ಞಾನಿ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಇಕ್ರಿಸ್ಯಾಟ್ ಭೂಮಿ ಕೃಷಿ ಮತ್ತು ಆಹಾರ ವ್ಯವಸ್ಥೆಯನ್ನು ಸುಧಾರಿಸಲು ಶ್ರಮಿಸುವ ಒಂದು ಲಾಭರಹಿತ ಸಂಸ್ಥೆಯಾಗಿದೆ. ಮಳೆ ಕಡಿಮೆಯಿರುವ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸಲು ಸಂಶೋಧನೆ ನಡೆಸುತ್ತದೆ. ಮಣ್ಣಿನ ಆರೋಗ್ಯ, ಸುಧಾರಣೆ ಜಲಾನಯನ ಅಭಿವೃದ್ಧಿ ಮತ್ತು ನೀರಿನ ಸಮರ್ಪಕ ಬಳಕೆಯ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುತ್ತದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ ಬುಳ್ಳಾ ಉದ್ಘಾಟಿಸಿ, ಬಸವತತ್ವದಲ್ಲಿ ಪ್ರಜಾಪ್ರಭುತ್ವದ ತತ್ವಗಳ ಚಿಂತನೆ ಅಡಗಿವೆ. ಶರಣರಿಗೆ ಕೃಷಿಯ ಬಗ್ಗೆ ಚಿಂತನೆ, ಅಭಿಮಾನ, ಪೂಜ್ಯ ಭಾವನೆಯು ಇದೆ. ಬಸವಾದಿ ಶರಣರು ರೈತರ ತನು ಮನ ಭಾವ ಶುದ್ಧವಿರುತ್ತದೆ ಎಂದಿದ್ದಾರೆ.

ರೈತರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಗುರು ಕೂಡ ಪಾವನರಾಗುತ್ತಾರೆ. ಲಿಂಗಾಯತ ಧರ್ಮದಲ್ಲಿ ದೇಹವೇ ದೇವಾಲಯ, ರೈತರು ಸಂಕಷ್ಟದಲ್ಲಿದ್ದಾರೆ ಅವರ ಕೆಲಸಗಳಿಗಾಗಿ ಸರ್ಕಾರ ರೈತರಿಗೆ ಹೊಲದಲ್ಲಿ ಕೃಷಿ ಕುಟೀರಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದರು.

ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಕೃಷಿ ನಮ್ಮ ದೇಶದ ಜೀವನಾಡಿ, ರೈತರು ಬೆನ್ನೆಲಬು. ವಚನ ಸಾಹಿತ್ಯದಲ್ಲಿನ ಕಾಯಕ, ದಾಸೋಹ ಸತ್ಯ, ಸಮಾನತೆ ಮತ್ತು ಪ್ರಾಮಾಣಿಕ ದುಡಿಮೆಗೆ ವಿಶೇಷ ಸ್ಥಾನವಿದೆ. ಈ ಮೌಲ್ಯಗಳು ಕೃಷಿ ಬದುಕಿಗೆ ದಾರಿದೀಪವಾಗಿವೆ ಎಂದು ನುಡಿದರು.

ಸಾನಿಧ್ಯ ವಹಿಸಿದ ಪೂಜ್ಯ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿ, ಬಸವಣ್ಣನವರೇ ಗುರು, ವಚನ ಸಾಹಿತ್ಯವೇ ಧರ್ಮಗ್ರಂಥ, ಇಷ್ಟಲಿಂಗ ದೇವರು ಎಂದು ನುಡಿದರು.

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಡಾ. ಮಹೇಶ ಪಾಟೀಲ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡಿದರೆ ಲಾಭ ಉಂಟಾಗುತ್ತದೆ. ಅನ್ನದಾತನ ಶ್ರಮದಿಂದಲೇ ಇಡೀ ಜಗತ್ತು ಬದುಕುತ್ತದೆ.

ಮಹಿಳೆಯರು ನಮ್ಮ ಸಂಸ್ಕೃತಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಅವರಲ್ಲಿ ಸದ್ಭಾವನೆ, ಸದ್ವಿಚಾರಗಳು. ಒಳ್ಳೆಯ ಸಂಸ್ಕೃತಿ ಬೆಳೆಸಬೇಕು ಎಂದರು.

ಮಿಲೇಟ್ ಮ್ಯಾನ ವೀರಶೆಟ್ಟಿ ತೊಗರಿ ತಳಿಗಳ ಕುರಿತು ಹಾಗೂ ಪುನರ್ವೈಭವ ಸಂಸ್ಥೆಯ ಸಂಸ್ಥಾಪಕ ಆಕಾಶ ಮೊಳಕೆರಿ ಗೋವುಗಳ ಮಹತ್ವದ ಕುರಿತು ಸವಿವರವಾಗಿ ತಿಳಿಸಿದರು.

ರೇವಣಪ್ಪಾ ರಾಯವಾಡೆ, ಕೆಎಂಎಫ್ ಮಾಜಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಬುಕ್ಕಾ, ಬೀದರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜಶೇಖರ ಬಸನಾಯಕ, ನೀಲಗಂಗಾ ಎಜ್ಯುಕೇಷನ್ ಟ್ರಸ್ಟ ಕಾರ್ಯದರ್ಶಿ ಡಾ. ಶಂಕರಗೌಡ ಪಾಟೀಲ, ಮಾಜಿ ಬಿಡಿಎ ಅಧ್ಯಕ್ಷ ರಾಜಕುಮಾರ ಬಿರಾದಾರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡೆ, ತಾಲೂಕಾಧ್ಯಕ್ಷ ಸುಭಾಷ ರಗಟೆ, ಶಂಕರಗೌಡ ಪಾಟೀಲ, ಜಯಪ್ರಕಾಶ ಸದಾನಂದೆ ವಿದ್ಯಾವತಿ ಶೇರಿಕಾರ, ರೇವಣಸಿದ್ಧ ಯರಬಾಗ, ಸುಜಾತಾ ತೊಗರಖೇಡೆ, ಮಲ್ಲಿಕಾರ್ಜುನ ಉಳ್ಳೆ, ವನಮಾಲಾ ಜೋಕಾರೆ, ರಾಜೇಂದ್ರ ಜೊನ್ನಿಕೇರಿ ಉಪಸ್ಥಿತರಿದ್ದರು.

ರೇವಣಸಿದ್ಧೇಶ್ವರ ಭಜನಾ ಮಂಡಳಿಯಿಂದ ವಚನ ಭಜನೆ ಜರುಗಿತು. ಹಿರಿಯ ರಂಗಕರ್ಮಿ ದೇವಿದಾಸ ಚಿಮಕೊಡ ಮತ್ತು ಸಂಗಡಿಗರಿಂದ ಮೂಡಿಬಂದ ರೈತಗೀತೆಗಳು ಜನಮನ ಸೆಳೆದವು. ಬಸವ ಸೇವಾ ಸಮಿತಿಯಿಂದ ರೈತಗೀತೆಯಿಂದ ಮೂಡಿಬಂದವು.

ಹಣಮಂತ ಧನಶೆಟ್ಟಿ ಸ್ವಾಗತಿಸಿದರೆ, ತ್ರಿವೇಣಿ ನಾಗರಾಳೆ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *