‘ಇದ್ದಲ್ಲಿಗೆ ದೇವರ ಕರೆಸಿಕೊಳ್ಳುವ ಪ್ರಬುದ್ಧತೆ ಪಡೆದಿದ್ದ ಅಮುಗೆ ರಾಯಮ್ಮ’

ರಾಯಚೂರು :

ನಗರದ ಬಸವಕೇಂದ್ರದ ಅಕ್ಕನ ಬಳಗದವರಿಂದ, ಅಧ್ಯಕ್ಷೆ ಜಗದೇವಿ ಚನ್ನಬಸವಣ್ಣ ಅವರ ನೇತೃತ್ವದಲ್ಲಿ ಕಲ್ಲೂರು ಕಾಲೊನಿಯ ಸುಪ್ರಿಯಾ ಅವರ ಮನೆಯಲ್ಲಿ ನವರಾತ್ರಿ ಅಂಗವಾಗಿ ನಾಲ್ಕನೇ ದಿನದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಿವಶರಣೆ ಅಮುಗೆ ರಾಯಮ್ಮ ಅವರ ಕುರಿತು ಅನುಭಾವ ಚಿಂತನೆಯನ್ನು ಆಯೋಜಿಸಲಾಗಿತ್ತು.

ರಾಯಮ್ಮ ಶರಣೆ ಬಗ್ಗೆ ಜಯಶೀಲಾ ಬಾಳಿ ಅವರು ಮಾತನಾಡಿ, ಶರಣೆ ಅಮ್ಮಗೆ ರಾಯಮ್ಮ ಸೊನ್ನಲಿಗೆ ಊರಿನರಾಗಿದ್ದು, ದೇವರಿಗೆ ಗಂಟು ಹೊರಿಸಿ ತಾವು ಇದ್ದಲ್ಲಿಗೆ ದೇವರನ್ನು ಕರೆಸಿಕೊಳ್ಳುವ ಭೌದ್ಧಿಕ ಪ್ರಬುದ್ಧತೆ ಪಡೆದಿದ್ದರು ಎಂದರು.

ಲೌಕಿಕ ಜೀವನದಲ್ಲಿ ಮಗ್ನರಾಗಿರುವ ನಾವು ಶರಣತತ್ವವನ್ನು ಮೈಗೂಡಿಸಿಕೊಂಡು ಶರಣರ ಮಾರ್ಗದಲ್ಲಿ ನಡೆಯೋಣ ಎಂದು ತಿಳಿಸಿದರು.

ಸ್ತುತಿ ನಿಂದನೆಗಳಿಗೆ ಸ್ಪಂದಿಸದೇ ಶಿವನಲ್ಲಿ ಮನಸ್ಸನ್ನು ನೆಲೆಗೊಳಿಸುವ ಶರಣ ತತ್ವವನ್ನು ಮೈಗೂಡಿಸಿಕೊಂಡು ಸಾಗುವ ಅವಶ್ಯಕತೆ ಇದೆ ಎಂದು ಹೇಳಿದರು.

ತನು ಮನ ಭಾವಗಳನ್ನು ಶುದ್ಧಗೊಳಿಸಿಕೊಂಡು ಛಲದಿಂದ ಮುನ್ನಡೆದ ಶರಣೆ ಸಾಧನೆಯಿಂದ ಅರಿವನ್ನೇ ಗುರುವನ್ನಾಗಿ ಮಾಡಿಕೊಂಡಿದ್ದಳು ಎಂಬುದನ್ನು ತಿಳಿಸಿಕೊಟ್ಟರು.

ಇಷ್ಟಲಿಂಗ ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಪೂರ್ಣಿಮಾ ಕಿರಣ, ವಚನ ಪ್ರಾರ್ಥನೆಯನ್ನು ನಿರ್ಮಲ, ಸ್ವಾಗತವನ್ನು ಸುಪ್ರಿಯಾ, ನಿರೂಪಣೆ ಮುಕ್ತಾ ನರಕಲದಿನ್ನಿ, ವಚನ ಸಂವಿಧಾನ ಪ್ರತಿಜ್ಞೆಯನ್ನು ಜಗದೇವಿ ಮಾಡಿಸಿದರು. ಪಾರ್ವತಿ ಪಾಟೀಲ ವಂದಿಸಿದರು.

ಕಾರ್ಯಕ್ರಮದಲ್ಲಿ ಅನ್ನಪೂರ್ಣ ಹರವಿ, ಈರಮ್ಮ ಸುಮಂಗಲ ಸೇರಿದಂತೆ ಹಲವಾರು ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *