ಕಿತ್ತೂರು:
ಸ್ಥಳೀಯ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.
ಮಾನವ ಬಂಧುತ್ವ ವೇದಿಕೆ, ರಾಷ್ಟ್ರೀಯ ಬಸವದಳ, ಶ್ರೀ ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಬಸವ ಪಂಚಮಿ ಕುರಿತು ಅನುಭಾವವನ್ನು ಅಶೋಕ ಅಳ್ನಾವರ, ಡಿ.ಆರ್.ಪಾಟೀಲ, ಸಂಜೀವ ಲೋಕಾಪುರ, ವೈದ್ಯಾಧಿಕಾರಿ ಸುಪ್ರಿಯ, ಅನ್ನಪೂರ್ಣೇಶ್ವರಿ ಅಂಗಡಿ ಹಾಗೂ ಕಲ್ಲಪ್ಪ ಕೂಗಟೆ ಹಂಚಿಕೊಂಡರು.
ಮುಖ್ಯ ವೈದ್ಯಾಧಿಕಾರಿ ಇಮಾಮ್ ರಾಜಗುಳಿ, ಸಂದೀಪ, ಬಸವರಾಜ ಅವರಾದಿ,ಬಸವರಾಜ ಕಡೆಮನಿ, ಮಡಿವಾಳಪ್ಪ ಕೋರಿಶೆಟ್ರ, ಶಿವಾನಂದ ಮಾಳಗಿ, ಮಡಿವಾಳಪ್ಪ ಅಸುಂಡಿ, ಮಹೇಶ ಪೂಜಾರ, ಶಂಕರ ಕೊಳ್ಳಿ, ಬಸವರಾಜ ಚಿನಗುಂಡಿ ಮತ್ತೀತರರು ಈ ಸಂದರ್ಭದಲ್ಲಿ ಹಾಜರಿದ್ದರು.