ಹಾವಿಂಗೆ ಹಾಲನೆರೆವ ಮಂದಮತಿಗಳು…
ಹುತ್ತಕ್ಕೆ ಕುತ್ತಲ್ಲದೆ
ಸರ್ಪವು ಸವಿಯದು
ಹಾಲಿನ ರುಚಿಯನ್ನು.
ಹುಳು ಹುಪ್ಪಟೆ ತಿನ್ನುವ ಹಾವಿಂಗೆ
ಹಾಲನೆರೆವ ಮಂದಮತಿಗಳೆತ್ತ ಬಲ್ಲರು?
ಜೀವನ ಮಾರ್ಗವೆಂದ ಬಾರುಕೋಲೇಶ್ವರ
- ನಂದೀಶ್ವರ ದಂಡೆ
ಪ್ರಕೃತಿಯ ನಿಜತತ್ತ್ವ ಅರಿಯದವರು..
ಹುತ್ತ ಕಟ್ಟಿದ ಹುಳುಗಳಾವು ಬಲ್ಲಿರೋ?
ಹುತ್ತಕ್ಕೆ ಜಿಡ್ಡುಗಟ್ಟಿಸಿದರೆ ಹುತ್ತ ಉಳಿವುದೇ?
ಹಾಲು ತಾಕಿದ ಹಾವಿಂಗೆ ಹುಳು ಉಪ್ಪಟೆ ಮುತ್ತಲಾರವೆ?
ಪ್ರಕೃತಿಯ ನಿಜತತ್ತ್ವ ಅರಿಯದೆ,
ರೈತರ ಗೆಳೆಯನಾದ ಹಾವಿಂಗೆ ಕುತ್ತು ಮಾಡಿ ಪಾಪಗಳಿಸಿಕೊಂಬುವರಲ್ಲದೆ, ಪುಣ್ಯವನೆತ್ತ ಗಳಿಸುವಿರಯ್ಯಾ ಬಾರುಕೋಲೇಶ್ವರ.
- ನಂದೀಶ್ವರ ದಂಡೆ