ಬಸವ ತತ್ವದ ಹೆಮ್ಮರವೆಂದು ಖ್ಯಾತರಾಗಿದ್ದ ಶರಣ ವಿ.ಸಿದ್ರಾಮಣ್ಣನವರು ಇಂದು ದಾವಣಗೆರೆಯಲ್ಲಿ ಮದ್ಯಾಹ್ನ 2 ಗಂಟೆಗೆ ಲಿಂಗೈಕ್ಯರಾಗಿದ್ದಾರೆ. ಶರಣರು ೧೦೪ ವರ್ಷ ಜೀವಿಸಿದ್ದರು.
ನಾಳೆ ಬೆಳಿಗ್ಗೆ ೯ರವರಗೆ ದಾವಣಗೆರೆ ಬಸವ ಬಳಗದಲ್ಲಿ ಶರಣರ ಲಿಂಗದೇಹಕ್ಕೆ ಅಂತಿಮ ಗೌರವ ಸಲ್ಲಿಸಲು ವ್ಯವಸ್ಥೆ ಮಾಡಿದ್ದು, ಮದ್ಯಾಹ್ನ ೧ ಫಂಟೆಯ ನಂತರ ಕ್ರಿಯಾ ಸಮಾಧಿ ಮಾಡಲಾಗುವದು, ಎಂದು ಕುಟುಂಬದವರು ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಘಟಕವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸುತ್ತೇವೆ.
ವಿ ಸಿದ್ದರಾಮಣ್ಣ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿಯಲ್ಲಿ 1920ರಲ್ಲಿ ಜನ್ಮ ತಾಳಿದವರು.
ನಮಗೆಲ್ಲ ಮಕ್ಕಳ ರೀತಿಯಲ್ಲಿ ವಚನ ಸಾಹಿತ್ಯವನ್ನು ತಿಳಿಸಿ ವಚನ ಸಾಹಿತ್ಯದ ಕಡೆಗೆ ಒಲವು ಬರಲು ಅವರೇ ಪ್ರಮುಖ ಕಾರಣ.
ಪೂರ್ಣ ಕಾಲ ವಚನ ಸಾಹಿತ್ಯ, ನಾಟಕ ರಚನೆ, ಬರವಣಿಗೆಯಲ್ಲಿ ತೊಡಗಿಕೊಂಡು ನಮಗೆಲ್ಲ ಶಕ್ತಿಯನ್ನು ನೀಡಿದ ಶರಣರು.