ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಮೈಸೂರು ತಾಲೂಕಿನ ಜಯಪುರ ಹೋಬಳಿ ದಾರಿಪುರ ಗ್ರಾಮದ ಸಮುದಾಯ ಭವನದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಯಶಸ್ವಿಯಾಗಿ ಆಗಸ್ಟ್ 12 ನಡೆಯಿತು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 15 ಜನರಿಗೆ ಲಿಂಗಧಾರಣೆ ಮಾಡಿ ಶಿವಯೋಗ ಹೇಳಿ ಕೊಟ್ಟರು.

ಹೈದರಾಬಾದ್ ನ ಅತ್ತಾಪುರದಲ್ಲಿ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮದ ಆಗಸ್ಟ್ 11ರ ಉದ್ಘಾಟನಾ ಸಮಾರಂಭ.

ಕೊರಟಗೆರೆ ತಾಲೂಕಿನ ನೆಲಗೊಂಡನಹಳ್ಳಿ ಮತ್ತು ಹೂಲವನಹಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಮತ್ತು ಡಿವೈನ್ ಲೈಫ್ ಸದಸ್ಯರು ಆಗಸ್ಟ್ 11 ಬಸವ ಜಯಂತಿ ಆಚರಿಸಿದರು. ಹೈಕೋರ್ಟ್ ನ್ಯಾಯವಾದಿ ಎನ್.ಬಿ.ಶಿವರುದ್ರಪ್ಪ, ಸಾಮಾಜಿಕ ಹೋರಾಟಗಾರ ಎಸ್. ಬಿ. ಉದಯಕುಮಾರ್, ಬಸವ ಚಿಂತಕ ಶ್ರೀಶೈಲ ಜಿ ಮಸೂತೆ, ಸಾಮಾಜಿಕ ಹೋರಾಟಗಾರ ನಾಗಭೂಷಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣಗಳ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತಬೀದರಿನಲ್ಲಿ ಹಮ್ಮಿಕೊಂಡಿದ್ದ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿಯವರ ವಿಶ್ವಧರ್ಮ ಪ್ರವಚನ ಉದ್ಘಾಟನಾ ಸಮಾರಂಭ
ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ವಿರುಪಣ್ಣ ಯಮನಪ್ಪ ಮಂತ್ರಿ ಅವರ ಮನೆಯಲ್ಲಿ "ವಚನ ಜ್ಯೋತಿ" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಬಸವ ಭಕ್ತರು ಆಗಸ್ಟ್ 9 ಬಸವ ಪಂಚಮಿ ಆಚರಿವಿದರು. ಶರಣ ಸಾಹಿತ್ಯ ಪರಿಷದ್ ಬೀದರ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಶಂಭುಲಿಂಗ ಕಾಮಣ್ಣ ಬಸವ ಗುರುಪೂಜೆ ನೆರವೇರಿಸಿದರು.
ಸಿಂಧನೂರಿನ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಮಾಲಿಕೆ"ಯಡಿಯಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು. ಬಸವರಾಜ ಬಳಿಗಾರ, ಶ್ರೀ ಪಿ. ರುದ್ರಪ್ಪ ಕುರುಕುಂದ ಮಾತನಾಡಿದರು. (ಮಾಹಿತಿ/ಫೋಟೋ ವೀರಣ್ಣ ಗೌಡರ್)
ವಿಶ್ವಗುರು ಬಸವಣ್ಣನವರ ಪತ್ನಿ ನೀಲ ಗಂಗಾಂಬಿಕೆ ತಾಯಿಯವರ 829ನೆಯ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಪೂಜ್ಯ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ಬಸವ ಮಂಟಪದಲ್ಲಿ ಆಚರಿಸಲಾಯಿತು.

List of Images
1/15

Leave a comment