ವಿಜಯಪುರದಲ್ಲಿ ‘ವಚನ ದರ್ಶನ’ ಬಿಡುಗಡೆಗೆ ಶರಣ ಸಂಸ್ಕೃತಿ ರಕ್ಷಣಾ ವೇದಿಕೆಯ ವಿರೋಧ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ಸೆಪ್ಟೆಂಬರ್ ೫ರಂದು ನಗರದಲ್ಲಿ ಬಿಡುಗಡೆಯಾಗುತ್ತಿರುವ ವಿವಾದಾಸ್ಪದ ವಚನ ದರ್ಶನ ಪುಸ್ತಕವನ್ನು ಶರಣ ಸಂಸ್ಕೃತಿ ರಕ್ಷಣಾ ವೇದಿಕೆಯ ಸದಸ್ಯರು ವಿರೋಧಿಸಿದ್ದಾರೆ.

ಶರಣ ಸಂಸ್ಕೃತಿಯನ್ನು ಮತ್ತು ಲಿಂಗಾಯತ ಧರ್ಮತತ್ವಗಳನ್ನು ನಾಶಪಡಿಸುವ ಉದ್ದೇಶದಿಂದ ವಚನ ದರ್ಶನ ಪುಸ್ತಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ಬಸವಭಕ್ತರು ಹಾಗು ಲಿಂಗಾಯತರಿಗೆ ನೋವು ತಂದಿದೆ ಎಂದು ಪತ್ರಿಕಾ ಘೋಷ್ಠಿಯಲ್ಲಿ ಭಾನುವಾರ ಹೇಳಿದರು.

“ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ನಾವು ಸಾತ್ವಿಕವಾಗಿ ವಿರೋಧಿಸುತ್ತೇವೆ,” ಎಂದು ತಿಳಿಸಿದರು.

ಪುಸ್ತಕವನ್ನು ಪ್ರತಿ ಜಿಲ್ಲೆಗಳಲ್ಲಿ ೩ ರಿಂದ ೫ ಲಕ್ಷ ರೂಪಾಯಿ ಖರ್ಚು ಮಾಡಿ ಬಿಡುಗಡೆ ಮಾಡುತ್ತಿರುವುದರ ಹಿಂದಿನ ಹುನ್ನಾರ ಬಯಲಾಗಬೇಕಿದೆ. ಈ ಪುಸ್ತಕ ಬಿಡುಗಡೆ ನಾಡಿನಾದ್ಯಂತ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುತ್ತಿದೆ, ಎಂದು ಹೇಳಿದರು.

ವಚನ ಚಳುವಳಿಯ ಆಶಯಗಳನ್ನು ಹಾಗು ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಪ್ರಯತ್ನ ದಶಕಗಳಿಂದಲೂ ಎಂ. ಆರ್ ಶ್ರೀನಿವಾಸಮೂರ್ತಿ, ಆರ್ ಆರ್ ದಿವಾಕರ, ಡಂಕಿನ್ ಝಳಕಿ, ರಾಜಾರಾಮ್ ಹೆಗಡೆ ಮುಂತಾದವರ ಮೂಲಕ ನಡೆಯುತ್ತಿದೆ.

ಶರಣರ ಆಶಯಗಳನ್ನು ಸರ್ವಾಂಗೀಣ ಕ್ರಾಂತಿಯ ಹಿನ್ನೆಲೆಯಲ್ಲಿ ನೋಡದೆ ಸನಾತನ ವೈದಿಕ ದರ್ಶನದ ಚೌಕಟ್ಟಿನಲ್ಲಿ ಸೇರಿಸಿ ಅದೊಂದು ಶುಷ್ಕ ಭಕ್ತಿ ಚಳುವಳಿ ಎಂಬಂತೆ ಬಿಂಬಿಸುವ ಪ್ರಯತ್ನದ ವಿರುದ್ದ ಬಸವಾನುಯಾಯಿಗಳು ಸಾತ್ವಿಕ ಹಾಗು ತಾತ್ವಿಕ ಆಕ್ರೋಶವನ್ನು ದಾಖಲಿಸುತ್ತಿದ್ದೇವೆ, ಎಂದು ಸದಸ್ಯಉ ಹೇಳಿದರು.

ಶರಣ ಸಂಸ್ಕೃತಿ ಹಾಗು ಲಿಂಗಾಯತ ಧರ್ಮ ರಕ್ಷಣಾ ವೇದಿಕೆಯ ಸಂಚಾಲಕ ಡಾ.ಜೆ.ಎಸ್.ಪಾಟೀಲ, ಜಿ.ಬಿ.ಸಾಲಕ್ಕಿ, ಮನಗೂಳಿ ವಿರಕ್ತಮಠದ ವಿರತೀಶಾನಂದಸ್ವಾಮೀಜಿ, ಕಲಕೇರಿ ಶಿವಾಚಾರ್ಯಸ್ವಾಮೀಜಿ, ಜಂಬುನಾಥ ಕಂಚಾಣಿ, ಬಸವರಾಜ ಕೊಂಡಗುಳಿ, ಕಲ್ಲಪ್ಪ ಕಡೆಚೂರ, ಹನುಮಂತ ಚಿಂಚಲಿ, ಮಹಾದೇವಿ ಗೋಕಾಕ, ರಾಜೇಶ್ವರಿ ಅರನಾಳ ಮತ್ತೀತರರು ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
3 Comments
  • ಒಳ್ಳೆಯ ಕೆಲಸ. ಶರಣ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಇಂತಹ ಕೆಲಸಗಳ ಅವಶ್ಯಕತೆಯಿದೆ.

  • ಬಸವಪುರ ಸಂಘಟನೆಯ ಎಲ್ಲ ಸದಸ್ಯ ಸೇರಿ ಒಳ್ಳೆಯ ಕಾರ್ಯವನ್ನು ಮಾಡಿದ್ದೀರಿ, ತಮಗೆಲ್ಲರಿಗೂ ಶರಣು ಶರಣಾರ್ಥಿ..

  • ಬಸವಪುರ ಸಂಘಟನೆಯ ಎಲ್ಲ ಸದಸ್ಯರು ಸೇರಿ ಒಳ್ಳೆಯ ಕಾರ್ಯವನ್ನು ಮಾಡಿದ್ದೀರಿ, ತಮಗೆಲ್ಲರಿಗೂ ಶರಣು ಶರಣಾರ್ಥಿ..

Leave a Reply

Your email address will not be published. Required fields are marked *