ಶರಣ ತತ್ವಗಳ ಅರಿವನ್ನು ಮುಂದಿನ ಪೀಳಿಗೆಗೆ ತಲುಪಿಸಿ: ಡಾ ವೀಣಾ ಬಿರಾದಾರ ಹೇಳಿದರು.

ರವಿಕುಮಾರ. ಸಿ.ಕೆ
ರವಿಕುಮಾರ. ಸಿ.ಕೆ

ಧಾರವಾಡ

ಸದಾಚಾರ ತಳಹದಿಯ ಮೇಲೆ ನಿರ್ಮಿತವಾದ ಬಸವಾದಿ ಪ್ರಮಥರ ತತ್ವಗಳ ಅರಿವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಡಾ ವೀಣಾ ಬಿರಾದಾರ ಹೇಳಿದರು.

ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶಿವ ಶರಣೆಯರ ವಚನದಲ್ಲಿ ಬರುವ ಜೀವನ ಸಂದೇಶ ವಿಷಯ ಕುರಿತು ರವಿವಾರ ಉಪನ್ಯಾಸ ಮಾತನಾಡಿದರು. ಬಸವಾದಿ ಶರಣರು ಜನ ಸಾಮಾನ್ಯರಿಗಾಗಿ ವಚನ ರಚಿಸಿದರು ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ, ಜಾತಿ, ಮತ, ಪಂಥಕ್ಕೆ ಮಹತ್ವ ನೀಡದ ಶರಣರು ಮಾನವೀಯತೆಗೆ ಮಹತ್ವ ಕೊಟ್ಟು ಎಲ್ಲರಿಗೂ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದರು, ಎಂದರು.

ಜನಮನ ಪರಿವರ್ತನೆ ಹಾಗೂ ಸಮಾಜದ ಸ್ವಸ್ಥತೆಯ ಕಾಪಾಡಿದ ಶಿವ ಶರಣರು ರಚಿಸಿದ ವಚನ ಸಾಹಿತ್ಯ ಕೂಡ ಸತ್ಯದ ಮೂಲವಾಗಿದೆ. ಹೆತ್ತ ತಾಯಿ ಮಗುವನ್ನು ಬೆಳಸಿ ಯೋಗ್ಯ ಮನುಷ್ಯನನ್ನಾಗಿ ಮಾಡುವ ಹಾಗೆ ಜನರ ಜೀವನದ ಭಾವಗಳಲ್ಲಿ ಕ್ರಿಯಾ ಜ್ಞಾನ, ಭಾವ ರೂಪದಿಂದ ಲಿಂಗಸ್ವರೂಪಗೊಳಿಸುವ ಕೆಲಸವನ್ನು ಶಿವ ಶರಣೆಯರು ಮಾಡಿದ್ದಾರೆ. ಈ
ನಿಟ್ಟಿನಲ್ಲಿ ಇಂಥಹ ಉಪನ್ಯಾಸ ಮೂಲಕ ಸ್ವಾನುಭಾವದ ಅನುಭಾವ ಸಿಗುವಂತೆ ಮಾಡುವುದು ಸೂಕ್ತವಾಗಿದೆ ಎಂದರು.

ದೇವಸ್ಥಾನ ಆಡಳಿತ ಮಂಡಳಿಯ ಆರ್ ವ್ಯೆ ಸುಳ್ಳದ್. ಬಸವರಾಜ್ ಸೂರಗೊಂಡ. ಟಿ ಎಸ್ ಪಾಟೀಲ್. ಸುರೇಶ ಹೆಗ್ಗೆರಿ. ಎನ್ ಬಿ ಗೋಲಣ್ಣವರ. ಸುರೇಶ ಪಟ್ಟಣಶೆಟ್ಟಿ. ಎಸ್ ಬಿ ಪಾಗದ. ಗಿರಿಜಾ ಕಲ್ಯಾಣಶೆಟ್ಟರ್ ಡಾ ವಿಜಯಾ ಅಂಗಡಿ ಇದ್ದರು.

Share This Article
Leave a comment

Leave a Reply

Your email address will not be published. Required fields are marked *