ತಾಲ್ಲೂಕಿನ ತಳವಾಡ (ಕೆ) ಗ್ರಾಮದ ಲಿಂಗಾಯತ ಸಮುದಾಯದ ಮಹಿಳೆಯೊಬ್ಬರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣ ಠಾಣೆ ಪಿಎಸ್ಐ ಅಶೋಕ ತಿಳಿಸಿದ್ದಾರೆ.
ಆರೋಪಿಯು ಗ್ರಾಮದ ಪರಿಶಿಷ್ಟ ಪಂಗಡದ ವ್ಯಕ್ತಿಗೆ ಜಾತಿ ನಿಂದನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.
ವಿಡಿಯೊದಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಜಾತಿ ನಿಂದನೆ ಮಾಡಬೇಡಿ ಎಂದು ಹೇಳಿದರೂ ಕೇಳದೆ ಮಹಿಳೆ ಮಾತು ಮುಂದುವರೆಸಿದ್ದಾರೆ. ಈ ಸಂಬಂಧ ಗೌತಮ್ ಅಣ್ಣೆಪ್ಪ ಡಿಗಾರೆ ಎನ್ನುವವರು ದೂರು ನೀಡಿದ್ದಾರೆ.