ಇಂದು ಭಾಲ್ಕಿಯಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ಕಾರ್ಯಕ್ರಮಕ್ಕೆ ಡಾ.ಬಸವಲಿಂಗ ಪಟ್ಟದ್ದೇವರು ಹೋಗುತ್ತಿಲ್ಲ, ಅವರ ಅನುಮತಿಯಿಲ್ಲದೆ ಪೋಸ್ಟರ್, ಫೋಟೋ ಬಳಸಿಕೊಂಡಿದ್ದಾರೆ, ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಶುಕ್ರವಾರ ಹೇಳಿದರು.
“ಅಜ್ಜಾವರಿಗೆ ಇಂದು ಪ್ರವಚನ ಕಾರ್ಯಕ್ರಮವಿದೆ, ಅದಕ್ಕೆ ಬೇರೆ ಎಲ್ಲೂ ಹೋಗುವ ಪ್ರಶ್ನೆಯೇ ಇಲ್ಲ,” ಎಂದು ಪೋನಿನಲ್ಲಿ ಮಾತನಾಡುತ್ತ ಹೇಳಿದರು. ಶ್ರೀ ಗುರುಬಸವ ಪಟ್ಟದ್ದೇವರು ಬೇರೊಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಇಳಕಲ್ಲಿಗೆ ಬಂದಿದ್ದಾರೆ.
ಭಾಲ್ಕಿಯಲ್ಲಿ ಇಂದು ವಿ.ಎಚ್.ಪಿಯ ಕೃಷ್ಣಾ ಜನ್ಮಾಷ್ಟಮಿ, ಸ್ಥಾಪನಾ ದಿವಸ ಮತ್ತು ಷಷ್ಠಿಪೂರ್ತಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಪೋಸ್ಟರ್ ಗಳಲ್ಲಿ ಮತ್ತು ರಸ್ತೆ ಬದಿಯ ಬೋರ್ಡ್ ಗಳಲ್ಲಿ ಭಾಲ್ಕಿ ಶ್ರೀಗಳ ಫೋಟೋ ಬಳಕೆಯಾಗಿರುವುದು ನೋಡಿ ಹಲವಾರು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಶ್ರಮದಿಂದ ಅರ್ಧ ಕಿಲೋಮೀಟರು ದೂರದಲ್ಲಿರುವ ಮಹಾತ್ಮಾ ಗಾಂಧಿ ವೃತ್ತದಲ್ಲಿ ಹಾಕಿರುವ ಬೋರ್ಡನ್ನು ಮಠದ ಆಡಳಿತ ಮಂಡಳಿಯ ಗಮನಕ್ಕೆ ತಂದಿರುವುದಾಗಿ ವಿಶ್ವ ಕ್ರಾಂತಿ ದಿವ್ಯ ಪೀಠದ, ಓಂಪ್ರಕಾಶ್ ರೊಟ್ವೆ,
ಹೇಳಿದರು. “ವಿ.ಎಚ್.ಪಿ ಯವರ ಜೊತೆಗೂ ಮಾತನಾಡಿದ್ದೇನೆ. ಬೇಕಾದರೆ ಹಿಂದೂ ಪರವಾಗಿರೋ ಸ್ವಾಮಿಗಳನ್ನು ಬಳಸಿಕೊಳ್ಳಿ, ಆದರೆ ಬಸವ ಪರ ಇರೋ ಸ್ವಾಮಿಗಳ ತಂಟೆಗೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದೀನಿ,” ಎಂದು ಹೇಳಿದರು.
ಭಾಲ್ಕಿ ಶ್ರೀಗಳ ಭಾವಚಿತ್ರದ ದುರ್ಬಳಕೆ ಮುಂಚೆಯೂ ಆಗಿರುವುದರಿಂದ ಭಕ್ತರು ಗೊಂದಲದಲ್ಲಿದ್ದಾರೆ ಎಂಬ ಮಾತನ್ನು ಶ್ರೀ ಗುರುಬಸವ ಪಟ್ಟದ್ದೇವರು ಒಪ್ಪಿಕೊಂಡರು.
“ಇದೇ ಕೊನೆಯ ಭಾರಿ, ಇನ್ನು ಮುಂದೆ ಇದಕ್ಕೆ ಕಡಿವಾಣ ಹಾಕುತ್ತೇವೆ,:”ಎಂದು ಹೇಳಿದರು.
ಬಹಳ ಒಳ್ಳೆಯ ಬೆಳವಣಿಗೆ.
ಶರಣು ಶರಣಾರ್ಥಿ.