ಪ್ರೊಫೆಸರ್ ಎಂ ಎಂ ಕಲಬುರ್ಗಿ ಅವರ ಹತ್ಯೆಯಾಗಿ 9 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೂರದ ಆರಿಜೋನಾದಿಂದ ಧಾರವಾಡದ ತನಕ ಹುತಾತ್ಮರನ್ನು ಸ್ಮರಿಸಿಕೊಂಡು ಗೌರವದಿಂದ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿಮ್ಮ ಕಣ್ಣಿಗೆ ಬಿದ್ದರೆ ದಯವಿಟ್ಟು ಇಮೇಲ್ ಮಾಡಿ (basavamedia1@gmail.com).
ಧಾರವಾಡ
ಇಂದು ಮುಂಜಾನೆ ಡಾಕ್ಟರ್ ಎಂ. ಎಂ. ಕಲಬುರ್ಗಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಸಮಾಧಿಗೆ ಪುಷ್ಪ ನಮನ ಅರ್ಪಿಸಲಾಯಿತು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷ್ತೊಮ, ಡಾ ವೀರಣ್ಣ ರಾಜೂರ ಮತ್ತು ಬಸವ ಕೇಂದ್ರದ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದರು.


ಕಿಯೋನಿಕ್ಸ್ (ಅರಿಜೋನಾ)
ಅಮೇರಿಕಾ ಕಿಯೋನಿಕ್ಸ್ ನಗರದಲ್ಲಿ (ಅರಿಜೋನಾ) ಏನ್ ಎಸ್ ದೇವರವರ್, ಸುಷ್ಮಾ ಜಿ, ಇನಿಕ ಬಿ ಮತ್ತು ವ್ರಿಷ್ ಅವರಿಂದ ಪ್ರೊಫೆಸರ್ ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿ.

ಗದಗ್
ಗದಗಿನ ತೋಂಟದಾರ್ಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಶ್ರದ್ಧಾಂಜಲಿ


ಬೆಂಗಳೂರು
ಬೆಂಗಳೂರಿನ ಸೆಂಟ್ರಲ್ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ರಮೇಶ್ ಪೊಲೀಸ್ ಮತ್ತು ಸ್ನೇಹಿತರಿಂದ ಶ್ರದ್ಧಾಂಜಲಿ. ತಮ್ಮ ಕಾಲೇಜು ಲೆಕ್ಚರರ್ ಒಬ್ಬರಿಂದ ಇವರಿಗೆ ಕಲ್ಬುರ್ಗಿ ಅವರ ಸಂಶೋಧನೆಯ ಪರಿಚಯವಾಗಿದೆ.

ಬೆಂಗಳೂರು
ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಕಚೇರಿಯಲ್ಲಿ ಅಧ್ಯಕ್ಷ ಓಂಕಾರ್ ಎಸ್ ಚೋಂಡಿ ಮತ್ತು ತಂಡದಿಂದ ಶ್ರದ್ಧಾಂಜಲಿ.
ಎಂ ಎಂ ಕಲಬುರ್ಗಿ ಅವರು ಮಾಡಿದ ವಚನ ಕ್ರಾಂತಿ, ಧರ್ಮ ಕ್ರಾಂತಿ, ಸತ್ಯದ ಕ್ರಾಂತಿ ಈ ನಾಡಿನ ಲಿಂಗಾಯತರು ದಿನನಿತ್ಯ ನೆನೆಯಬೇಕು, ಎನ್ನುತ್ತಾರೆ ಓಂಕಾರ್ ಎಸ್ ಚೋಂಡಿಯವರು.



ಕೊಪ್ಪಳ
ಡಾ ಕಲಬುರ್ಗಿ ಅವರ ಕ್ರಾಂತಿಕಾರಿ ಸಂಶೋಧನೆ ಲಿಂಗಾಯತ ಉಳಿಸಿತು: ಸಂಗಮೇಶ ಕಲಹಾಳ
ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯು ಪ್ರಖರವಾದ ವಿಚಾರಗಳ, ವೈಚಾರಿಕ ನಿಲವುಗಳ, ಕಟುಸತ್ಯಗಳ, ನಿಜತತ್ವಗಳ, ಸಮಾನತೆಯ, ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದ ಹತ್ಯೆಯಾಗಿದೆಯೆಂದು ಡಾ. ಸಂಗಮೇಶ ಕಲಹಾಳ ನುಡಿದರು…



ಭಾಲ್ಕಿ
ಚಿಂತನೆ ಸಹಿಸದವರು ಡಾ ಕಲಬುರ್ಗಿ ಹತ್ಯೆ ಮಾಡಿದರು: ಡಾ. ಬಸವಲಿಂಗ ಪಟ್ಟದ್ದೇವರು
ಡಾ. ಎಂ.ಎಂ. ಕಲಬುರ್ಗಿಅವರ ಚಿಂತನೆ ಸಹಿಸಲಾಗದ ಸಾಂಪ್ರದಾಯವಾದಿಗಳು ಅವರ ಹತ್ಯೆ ಮಾಡಿದರು. ಅವರು ದೇಹರೂಪದಿಂದ ನಮ್ಮಿಂದ ಅಗಲಿದರೂ, ಸಾಹಿತ್ಯ, ಸಂಶೋಧನೆಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿದ್ದಾರೆ, ಅವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಎಂದು ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಶನಿವಾರ ಹೇಳಿದರು.

ಧಾರವಾಡ
ಕಲಬುರ್ಗಿ ವಿಚಾರ ತಲುಪಿಸಿ, ಜನರಲ್ಲಿ ಜಾಗೃತಿ ಮೂಡಿಸಿ: ಪುರುಷೋತ್ತಮ ಬಿಳಿಮಲೆ
ಡಾ ಎಂ ಎಂ ಕಲಬುರ್ಗಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು…



ತುಮಕೂರು
ಕಲಬುರ್ಗಿಯವರಿಂದ ಚಿಮ್ಮಿದ್ದು ರಕ್ತವಲ್ಲ, ಬಸವ ತತ್ವ: ತುಮಕೂರಿನಲ್ಲಿ ಶರಣ ಸೇನೆ ಸ್ಮರಣೆ
“ಎಂ ಎಂ ಕಲ್ಬುರ್ಗಿರವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ, ಬಸವಾದಿ ಶರಣರ ವಿಚಾರಧಾರೆಗಳು. ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು,” ಎಂದು ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಹೇಳಿದರು….


ಹೈದರಾಬಾದ
ಹೈದರಾಬಾದ ಅನುಭವ ಮಂಟಪದಲ್ಲಿ ಡಾ. ಎಂ. ಎಂ. ಕಲಬುರ್ಗಿ ಸ್ಮರಣೆ ಕಾರ್ಯಕ್ರಮ
ಅತ್ತಾಪುರ ನಗರದ ಮಹಾತ್ಮ ಬಸವೇಶ್ವರ ಅನುಭವ ಮಂಟಪದಲ್ಲಿ ಶುಕ್ರವಾರ ಕನ್ನಡ ನಾಡು ನುಡಿಯ ಶ್ರೇಷ್ಠ ಸಂಶೋಧಕ, ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಲಾಯಿತು.




ಶರಣ ಎಂ.ಎಂ. ಕಲ್ಬುರ್ಗಿಯವರ ಪಾದ ಕಮಲಕ್ಕೆ ನಮೋ ನಮೋ.
9 ವರ್ಷವಾದರೂ ಅವರ ಹತ್ಯೆಗೈದ ಪಾಪಿಗಳ ತಪಾಸಣೆ ಮಾಡದಿರುವುದು ಶೋಚನೀಯ ಸಂಗತಿ.
ಅವರು ಕೈಗೊಂಡ ಕಾರ್ಯಗಳು. ಅವರ ವಿವೇಚನೆಗಳು ಸದಾ ನಮ್ಮೊಂದಿಗಿರುವಾಗ ಅವರು ಅಮರರಾಗಿ ನಮ್ಮೊಂದಿಗಿರುವುದು ಕಟು ಸತ್ಯ. ಶರಣು ಶರಣಾರ್ಥಿ.