ಇತ್ತೀಚೆಗೆ ಉಡುತಡಿ ಪ್ರವಾಸಕ್ಕೆ ಹೋಗಿದ್ದೆವು. ಶರಣೆ ಅಕ್ಕಮಹಾದೇವಿಯವರು ಮೂಲತಃ ಉಡುತಡಿಯವರೆಂದು (ಉಡುಗಣಿ) ಎಂದು ಹೇಳುತ್ತಾರೆ.
ಅಕ್ಕನವರ ಕ್ಷೇತ್ರಕ್ಕೆ ಮೀಸಲಾಗಿದ್ದ ಸುಮಾರು 54 ಎಕರೆ ಪ್ರದೇಶವಿತ್ತು, ಈಗ ಅದು ಕೇವಲ 15 ಎಕರೆಗೆ ಇಳಿದು ಬಂದಿದೆ ಎಂದು ತಿಳಿದು ಬಂದಿತು. ಹಿಂದೆ ಇಲ್ಲಿ ಅರಮನೆಯಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಉಡುತಡಿಯ ಅಭಿವೃದ್ಧಿ ಕುಂಠಿತವಾಗಿದೆ. ಅಕ್ಕನವರ ಪ್ರತಿಮೆ, ಇತರ ಸ್ಮಾರಕಗಳ ಸುತ್ತ ಸರಿಯಾದ ನಿರ್ವಹಣೆಯಿಲ್ಲದೆ ಹುಲ್ಲು, ಗಿಡ ಬೆಳೆದಿದೆ. ಮಾಜಿ ಸಚಿವರಾದ ಲೀಲಾದೇವಿ ಪ್ರಸಾದ್ ರವರು ಈ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಬಂತು.
ಶರಣರ ಸ್ಥಳಗಳಿಗೆ ಒಂದು ಪ್ರಾಧಿಕಾರ ರಚನೆಯಾಗಬೇಕು, ಇವುಗಳನ್ನು ಪ್ರವಾಸಿ ಸ್ಥಳಗಳಾಗಿ ಬೆಳೆಸಿದರೆ ಮುಂದಿನ ಪೀಳಿಗೆಗೆ ಶರಣರ ಮೌಲ್ಯಗಳನ್ನು ಪರಿಚಯಿಸಲು ಸುಲುಭವಾಗುತ್ತದೆ. ಈ ದಿಟ್ಟಿನಲ್ಲಿ ಬಸವ ಪರ ಸಂಘಟನೆಗಳು ಪ್ರವಾಸೋದ್ಯಮ ಇಲಾಖೆಯ ಮೇಲೆ ಒತ್ತಡ ತರಬೇಕಾಗಿದೆ.