ಸ್ವತಂತ್ರ ಧರ್ಮಕ್ಕೆ ಸಂಸತ್ತಿನಲ್ಲಿ ಧ್ವನಿ ಎತ್ತಿ: ಲಿಂಗಾಯತ ಸಂಘಟನೆಯಿಂದ ಶೆಟ್ಟರಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಲಿಂಗಾಯತ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು.

ಲಿಂಗಾಯತ ಸಂಘಟನೆ ವತಿಯಿಂದ ನಗರದ ಹಳಕಟ್ಟಿ ಭವನದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಲಿಂಗಾಯತ ಸಂಘಟನೆಯ ಕಾರ್ಯಕರ್ತರು, ಮುಖಂಡರು ವೇದಿಕೆ ಮೇಲೆ ಹೋಗಿ ನೂತನ ಸಂಸದರಿಗೆ ಮನವಿ ಪತ್ರ ಕೊಟ್ಟರು.

ಮನವಿ ಸ್ವೀಕರಿಸಿ ಬಸವಣ್ಣನವರ ವಚನಗಳ ಪ್ರೇರಣೆಯಿಂದ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಸಾಮೂಹಿಕ ಪ್ರಾರ್ಥನೆ,ಸತ್ಸಂಗಗಳು, ವಿವಿಧ ಜನಪರ ಕಾಳಜಿಯ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ ಎಂದು ಶೆಟ್ಟರ್ ಸಂತೋಷ ವ್ಯಕ್ತಪಡಿಸಿದರು.

ಮನವಿ ಪತ್ರ ಸಲ್ಲಿಸಿದ ಲಿಂಗಾಯತ ಸಂಘಟನೆಯ ಶಂಕರ್ ಗುಡಾಸ್ ಅವರು, “ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಅಂಗವಾಗಿ ಎಲ್ಲಾ ಕಡೆ ಇದೇ ರೀತಿ ಸಂಸದರಿಗೆ ಮನವಿ ಕೊಡುವ ಕಾರ್ಯವಾಗಬೇಕು,” ಎಂದರು.

ಈರಣ್ಣ ದೇಯನ್ನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅನಿಲ ಬೆನಕೆ ನಗರಸೇವಕರಾದ ರಾಜಶೇಖರ ಡೋಣಿ,ಹನುಮಂತ ಕೊಂಗಾಲಿ, ಮುರುಗೇಂದ್ರಗೌಡ ಪಾಟೀಲ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಆನಂದ ಕರ್ಕಿ , ಅ. ಬ. ಇಟಗಿ, ವಿ. ಕೆ. ಪಾಟೀಲ,ಮಹಾಂತೇಶ ತೋರಣಗಟ್ಟಿ, ಶಿವಾನಂದ ತಲ್ಲೂರ, , ಬಿ ಬಿ ಮಠಪತಿ, ವಿ ಕೆ ಪಾಟೀಲ ವಿರುಪಾಕ್ಷಿ ದೊಡ್ಡಮನಿ, ಬಾಬು ತಿಗಡಿ ಶಿವಾನಂದ ನಾಯ್ಕ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು. ಶ್ರೀಕಾಂತ ಶಾನವಾಡ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸತೀಶ ಪಾಟೀಲ ನಿರೂಪಿಸಿದರು. ಕೊನೆಯಲ್ಲಿ ಸುರೇಶ ನರಗುಂದ ವಂದಿಸಿದರು.

Share This Article
2 Comments
  • ಹುಬ್ಬಳ್ಳಿ ಧಾರವಾಡ ಬೆಳಗಾವಿದ ಸೋ ಕಾಲ್ಡ್ ಲಿಂಗಾಯತ ರಾಜಕಾರಣಿಗಳು ಪಕ್ಕಾ ನಾಗಪೂರ ಚೌಕಿದಾರರು,,ಅವರು ಸಂಸತ್ತಿನಲ್ಲಿ ಲಿಂಗಾಯತ ಧರ್ಮದ ಪರವಾಗಿ ಧ್ವನಿ ಎತ್ತುವ ನಿರೀಕ್ಷೆ ಇಟ್ಟುಕೊಳ್ಳುವುದು ಅಪಾಯಕಾರಿ,, ರಾಜ್ಯದಲ್ಲಿಯೇ ಲಿಂಗಾಯತ ಧರ್ಮ ವಿರೋಧಿ ಹೇಳಿಕೆ ಕೊಡುವ ಇವರ ಮೇಲೆ ಭರವಸೆ ಇಡಲಾಗದು,,ಅವರ ಅಧಿಕಾರ ಏನಿದ್ದರೂ ತಮ್ಮ ಆಸ್ತಿ ಸಂಪತ್ತು ಅಧಿಕಾರ ರಕ್ಷಣೆ ಮಾಡಿಕೊಳ್ಳಲು ಅಷ್ಟೇ,,, ಇವರಿಗೆ ಚುನಾವಣೆಯಲ್ಲಿ ಪಾಠ ಕಲಿಸಿದ್ದರೆ ಲಿಂಗಾಯತ ಬಗ್ಗೆ ಭಯ ಇರುತ್ತಿತ್ತು,, ಜಾತಿ ನೋಡಿ ಈಗ ಬಡಕೊಂಡರೆ ಏನು ಪ್ರಯೋಜನ

Leave a Reply

Your email address will not be published. Required fields are marked *