ವಚನ ಸಂವಿಧಾನ ಆಧುನಿಕ ಸಂವಿಧಾನಗಳಿಗೆ ಮೂಲ: ಡಾ. ರಾಜಶೇಖರ ಬಿರಾದಾರ

ಸಂಗಮೇಶ ಅರಳಿ
ಸಂಗಮೇಶ ಅರಳಿ

ಬೆಳಗಾವಿ:

ಜಗತ್ತು ಸಂವಿಧಾನದ ಬಗ್ಗೆ ಯೋಚಿಸುವ ಮೊದಲೇ ಸಂಸದೀಯ ವ್ಯವಸ್ಥೆಯನ್ನು ಅಕ್ಷರಶಃ ಜಾರಿಗೊಳಿಸಿದ್ದ ಬಸವಾದಿ ಶರಣರ ವಚನ ಸಂವಿಧಾನವು ಆಧುನಿಕ ಸಂವಿಧಾನಗಳಿಗೆ ಮೂಲವಾಗಿದೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.

ಅವರು ಲಿಂಗಾಯತ ಸಂಘಟನೆ ಆಯೋಜಿಸಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ‌ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ ‘ಶರಣರ ವಚನ ಸಂವಿಧಾನ’ ಎಂಬ ವಿಷಯದ ಕುರಿತು ಅನುಭಾವ ನೀಡಿದರು.

ಶರಣರ ವಚನ ಸಂವಿಧಾನವು ಬರೆದ ಸಂವಿಧಾನವಾಗಿರದೆ ಹಾಗೆ ಬದುಕಿದ ಸಂವಿಧಾನವಾಗಿದೆ. ಸಮಾನತೆ, ಭಾತೃತ್ವ, ಪರೋಪಕಾರ, ಕಾಯಕ, ಪ್ರಸಾದ, ದಾಸೋಹ, ಸ್ತ್ರೀ ಸಬಲೀಕರಣ, ವೈಚಾರಿಕ-ವೈಜ್ಞಾನಿಕ ಮನೋಭಾವಗಳು ಶರಣ ವಚನ ಸಂವಿಧಾನದ ಪ್ರಮುಖ ಆಶಯಗಳಾಗಿವೆ ಎಂದು ಪ್ರತಿಪಾದಿಸಿದರು.

ಶರಣ ಸಂಗಮೇಶ ಅರಳಿಯವರು ಅಧ್ಯಕ್ಷತೆ ವಹಿಸಿದ್ದರು. ಶರಣೆ ಮಹಾದೇವಿ ಅರಳಿಯವರು ಪ್ರಾರ್ಥಿಸಿದರು. ಬಿ.ಪಿ. ಜವಣಿ ವಿ.ಕೆ. ಪಾಟೀಲ ಸುವರ್ಣಾ ಗುಡಸ ವಚನಗಳನ್ನು ಹಾಡಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ವೈ. ಮೆಣಸಿನಕಾಯಿಯವರು ಅತಿಥಿಗಳ ಪರಿಚಯ ಮಾಡಿದರು.

ಶರಣೆ ವಿದ್ಯಾ ಅಜಗುಣಕರ ದಾಸೋಹಸೇವೆ ಸಲ್ಲಿಸಿದರು. ಸುರೇಶ ನರಗುಂದ ವಂದಿಸಿದರು.

ಆನಂದ ಕರಕಿ, ಸುನಿಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ವಿರೂಪಾಕ್ಷ ದೊಡ್ಡಮನಿ, ಶಿವಾನಂದ ತಲ್ಲೂರ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಬಸವರಾಜ ಕರಡಿಮಠ, ಬಿ.ಬಿ. ಮಠಪತಿ, ಶ್ರೀದೇವಿ ನರಗುಂದ, ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *