ಬೆಂಗಳೂರು:
ಅಕ್ಟೋಬರ್ 12ರಂದು ವಚನಜ್ಯೋತಿ ಬಳಗದಿಂದ, ಬೆಂಗಳೂರಿನ ಕಲ್ಯಾಣ ಬಡಾವಣೆಯ ಬಸವೇಶ್ವರ ಉದ್ಯಾನವನದ ಬಸವ ಮಂಟಪದಲ್ಲಿ, ‘ವಚನ ವಿಜಯದಶಮಿ’ ಮೆರವಣಿಗೆ ಹಾಗೂ ಸಮಾವೇಶ ನಡೆಯಿತು.
ಧರ್ಮಗುರು ಬಸವಣ್ಣನವರ ಪುತ್ಥಳಿ ಹಾಗೂ ವಚನಸಾಹಿತ್ಯ ಕಟ್ಟುಗಳನ್ನು ಹೊತ್ತುಕೊಂಡು, ಕಲ್ಯಾಣ ಬಡಾವಣೆಯ ಮುಖ್ಯಬೀದಿಗಳಲ್ಲಿ ವಚನಗಳನ್ನು ಹಾಡುತ್ತಾ ವಚನ ಉದ್ಘೋಷಗಳು ಹಾಗೂ ಜೈಕಾರಗಳನ್ನು ಹಾಕುತ್ತಾ ಮೆರವಣಿಗೆಯಲ್ಲಿ ಸಾಗಲಾಯಿತು. ಬಸವ ಮಂಟಪಕ್ಕೆ ಬಂದು ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಪಣೆ ಸಲ್ಲಿಸಲಾಯಿತು.
ಸಮಾವೇಶದಲ್ಲಿ ಬಸವ ಗುರುಕುಲ, ಶಿವಮಠ, ಮರಳವಾಡಿ ಪೂಜ್ಯರಾದ ಮೃತ್ಯುಂಜಯ ಸ್ವಾಮಿಗಳು, ಯಶವಂತಪುರ ಕ್ಷೇತ್ರದ ಶಾಸಕ, ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ, ವಚನ ಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ, ಸಂಘಟನೆಯ ಪ್ರಮುಖರಾದ ಪ್ರಭು ಇಸುವನಹಳ್ಳಿ, ಪ್ರಸನ್ನ ಪಂಚಾಕ್ಷರಯ್ಯ, ಮಧು ಶಿವಕುಮಾರ, ರಾಜಾ ಗುರುಪ್ರಸಾದ ಹಾಗೂ ಬಡಾವಣೆಯ ಶರಣ, ಶರಣೆಯರು ಉಪಸ್ಥಿತರಿದ್ದರು.
ಅಕ್ಟೋಬರ್ 03ರಿಂದ 11ರವರೆಗೆ ಕಲ್ಯಾಣ ಬಡಾವಣೆಯ ಬಸವ ಬೆಳಕು ಸ್ಥಳದಲ್ಲಿ ‘ವಚನ ನವರಾತ್ರಿ’ ಕಾರ್ಯಕ್ರಮ ನಡೆಸಲಾಯಿತು.
ಅರ್ಥಪೂರ್ಣ ಆಚರಣೆ, ಅಭಿನಂದನೆಗಳು