“ಶಾಸ್ತ್ರವನೋದುವರೆಲ್ಲ ಸೂಳೆಯ ಮಕ್ಕಳು. ಪುರಾಣವ ಹೇಳುವರೆಲ್ಲ ಕುಂಟಲಗಿತ್ತಿಯ ಮಕ್ಕಳು…”
ದಾವಣಗೆರೆ
ನಿರಂತರವಾಗಿ ವಿಷಕಕ್ಕುವ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಕೊಲ್ಲಾಪುರ ಜಿಲ್ಲೆಯ ಕನ್ನೇರಿಯ ಸಿದ್ಧಗಿರಿ ಮಠದ 49 ಪೀಠಾಧ್ಯಕ್ಷರು.
ಅವರಿಗೆ ಟಿವಿ ಚರ್ಚೆಯೊಂದರಲ್ಲಿ ಶರಣರ ಪರಂಪರೆಯವರಾದ ನೀವು ವೈಧಿಕ ಸಂಸ್ಕೃತಿ ಬೆಂಬಲಿಸುವುದು ಸರಿಯೇ ಎಂದು ಪ್ರೇಕ್ಷಕರೊಬ್ಬರು ಒಂದು ಪ್ರಶ್ನೆ ಕೇಳಿದರು. ಅದಕ್ಕೆ ಕಾಡಸಿದ್ಧೇಶ್ವರ ಸ್ವಾಮಿಗಳು ವೈದಿಕ ಸಂಸ್ಕೃತಿ ಧಿಕ್ಕರಿಸಿದ ಒಂದು ವಚನ ಹೇಳಿ ಎಂದು ಸವಾಲು ಹಾಕಿದರು.
ಆ ಮರುಪ್ರಶ್ನೆಗೆ ಇಲ್ಲಿದೆ ಉತ್ತರ.
ಕಾಡಸಿದ್ಧೇಶ್ವರ ಸ್ವಾಮೀಜಿಗಳ ಪರಂಪರೆಯಲ್ಲಿ ಬಹಳ ಮುಖ್ಯವಾಗಿದ್ದವರು ನಿರ್ಮಾಯ ಕಾಡಸಿದ್ದೇಶ್ವರರು. ಅವರನ್ನು ಆದಿ ಕಾಡಸಿದ್ದೇಶ್ವರರು ಎಂದೂ ಕರೆಯುತ್ತಾರೆ.
ಅವರು ಬಸವಾದಿ ಶರಣರ ಪರಂಪರೆಯಲ್ಲಿ ಬಂದು ‘ನಿರ್ಮಾಯಪ್ರಭುವೆ’ ಅಂಕಿತನಾಮದಲ್ಲಿ ವಚನಗಳನ್ನು ಬರೆದರು.
ತಮ್ಮ ವಚನಗಳಲ್ಲಿ ಅವರು ನೇರವಾಗಿ ವೇದ ಶಾಸ್ತ್ರ ಪುರಾಣಗಳನ್ನು ಸಾರಸಗಟಾಗಿ ತಿರಸ್ಕರಿಸಿದರು.
ವೇದವನೋದುವರೆಲ್ಲ ಬಂಜೆಯ ಮಕ್ಕಳು.
ಶಾಸ್ತ್ರವನೋದುವರೆಲ್ಲ ಸೂಳೆಯ ಮಕ್ಕಳು.
ಪುರಾಣವ ಹೇಳುವರೆಲ್ಲ ಕುಂಟಲಗಿತ್ತಿಯ ಮಕ್ಕಳು.
ಆಗಮವ ನೋಡುವರೆಲ್ಲ ಹಾರುತಿಯ ಮಕ್ಕಳು.
ತರ್ಕತಂತ್ರಗಳ ನೋಡಿ ಹೇಳುವರೆಲ್ಲ ವೈದ್ಯಗಾರತಿಯ ಮಕ್ಕಳು.
ಇಂತೀ ವೇದಾಗಮಶಾಸ್ತ್ರಪುರಾಣ ತರ್ಕತಂತ್ರಂಗಳೆಲ್ಲ
ಕೇಳಿ ಆಚರಿಸುವವರೆಲ್ಲ ಡೊಂಬಜಾತಕಾರ್ತಿಯ ಮಕ್ಕಳು.
ಇಂತಪ್ಪ ಜಡಮತಿ ವ್ರತಭ್ರಷ್ಟ ಮೂಳಹೊಲೆಯರಿಗೆ
ಭವಬಂಧನ ಎಂದೂ ಹಿಂಗದು, ಮುಕ್ತಿದೋರದು.
ಇಂತಿವರ ಪುಣ್ಯಕ್ಕೆ ಅಧಿಕಾರಿಗಳಾದ ಬ್ರಹ್ಮ ವಿಷ್ಣು ರುದ್ರ
ಮೊದಲಾದ ದೇವತೆಗಳಿಗೆ ಮುನ್ನವೇ ಭವಹಿಂಗದು, ಮುಕ್ತಿದೋರದು
ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ನಿರ್ಮಾಯಪ್ರಭುವೆ.
ವೈದಿಕ ಸಂಸ್ಕೃತಿಯಲ್ಲಿ ಕಾಶಿ ಬಹಳ ಪ್ರಮುಖ ತೀರ್ಥ ಕ್ಷೇತ್ರ, ಅಲ್ಲಿಗೆ ಹೋಗಿ ಬಂದರೆ ಪುಣ್ಯ ಲಭಿಸುತ್ತದೆ ಎಂಬುದನ್ನು ವೈದಿಕ ಸಂಸ್ಕೃತಿ ಬಲವಾಗಿ ಪ್ರತಿಪಾದಿಸುತ್ತದೆ.
ಆದರೆ ಕೆಳಗಿನ ಈ ವಚನದಲ್ಲಿ ಕಾಶಿಗೆ ಪುಣ್ಯ ಸಂಪಾದನೆಗಾಗಿ ಹೋಗುವವರನ್ನು ನಿರ್ಮಾಯ ಕಾಡಸಿದ್ಧೇಶ್ವರ ಸ್ವಾಮಿಗಳು ವಿಡಂಬನೆ ಮಾಡಿದ್ದಾರೆ.
ಕಾಶಿಗೆ ಹೋಗಬೇಕೆಂಬಣ್ಣಗಳು
ತಲೆಕೆಳಗಾಗಿ ಕಾಲುಮೇಲಾಗಿ ನಡೆವರು.
ಕೇದಾರಕ್ಕೆ ಹೋಗಬೇಕೆಂಬಣ್ಣಗಳು
ಕಣ್ಣು ಹಿಂದಾಗಿ ಕಾಲುಮುಂದಾಗಿ ನಡೆವರು.
ಶ್ರೀಶೈಲಕ್ಕೆ ಪೋಗಬೇಕೆಂಬಣ್ಣಗಳು
ತಲೆಯಿಲ್ಲದೆ ಕಾವಡಿಯ ಹೊತ್ತು ನಡೆಯುವರು.
ಇಂತೀ ತ್ರಿವಿಧ ಪುರುಷರಿಗೆ ತ್ರಿಲಿಂಗದ ದರುಶನವಾಗದು.
ಮೂರು ಬಿಟ್ಟು, ಅಷ್ಟ ಕುಟ್ಟಿ, ಮೂರು ಪರ್ವತ ಸುಟ್ಟು,
ಈರಾರು ಬಿಟ್ಟು, ಮೂರುಗೂಡಿದ ಬಟ್ಟೆಯ ಪಿಡಿದು
ಹೊಗುವಣ್ಣಗಳಿಗೆ
ತ್ರಿವಿಧ ಕ್ಷೇತ್ರದಲ್ಲಿರುವ ಲಿಂಗದರುಶನವಾಗುವದು,
ಪರಿಣಾಮದೋರುವದು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ
ವೈದಿಕ ಸಂಸ್ಕೃತಿಯ ಮೂಲ ಆಧಾರ ಸ್ಥಂಭವೇ ಆದ ಗುಡಿ ಗುಂಡಾರಗಳನ್ನು ನಿರ್ಮಾಯ ಕಾಡಸಿದ್ಧೇಶ್ವರರು ತಿರಸ್ಕರಿಸಿದರು.
ಶೈವರು ಕಟ್ಟಿದ ಗುಡಿಯ ಬಿಚ್ಚದೆ,
ಶೈವಲಿಂಗವ ತೆಗೆಯದೆ,
ಪಾಯಾ ಸೋಸಿ ಗುಡಿಯ ಕಟ್ಟಿ,
ಈ ಆ ಶೈವಲಿಂಗವ ಸ್ಥಾಪಿಸಲು,
ಗುಡಿ ಲಿಂಗವ ನುಂಗಿ,
ಲಿಂಗ ಗುಡಿಯ ನುಂಗಿದ ಕಂಡು,
ಸತ್ತು ಬದುಕಿ ಕಾಯಕವ ಮಾಡುತ್ತಿದ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
ಹುಡುಕಿದರೆ ಇಂತಹ ವಚನಗಳು ಮತ್ತಷ್ಟು ಸಿಗುತ್ತವೆ.
ಕನ್ನೇರು ಶ್ರೀಗಳು ಬೇಕಾದರೆ ವ್ಯಕ್ತಿಗತವಾಗಿ ವೈದಿಕ ಸಂಸ್ಕೃತಿ ಬೇಕಾದರೆ ಸ್ವೀಕರಿಸಲಿ. ಆದರೆ ಶರಣರನ್ನು ವೈದಿಕ ಸಂಸ್ಕೃತಿ ಬೆಂಬಲಿಗರು ಅನ್ನುವ ಹಸಿ ಸುಳ್ಳನ್ನು ಪ್ರಚಾರ ಮಾಡುವ ಕಾರ್ಯವನ್ನು ನಿಲ್ಲಿಸಬೇಕೆಂದು ಬಸವ ಅನುಯಾಯಿಗಳ ಆಗ್ರಹಿಸಲಿ.
ಅಲ್ಲಮಪ್ರಭುದೇವರು
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷಿ*, ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು
ಅಲ್ಲಮಪ್ರಭುದೇವರು
ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು,
ಪುರಾಣ ಪೂರೈಸಲರಿಯದೆ ಕೆಟ್ಟವು.
ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು:
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು.
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ?
ಬಸವಣ್ಣ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
We will get lot of vachanas against Veda from all sharanaru
ಅರಿಯದ ಗುರು, ಅರಿಯದ ಶಿಷ್ಯಂಗೆ
ಅಂಧಕನ ಕೈಯ್ಯನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳೆಲೆ ಮರುಳೆ
ತೊರೆಯಲದ್ದವನನೀಸಲರಿಯದವ
ತೆಗೆವ ತೆರನಂತೆಂದನಂಬಿಗ ಚೌಡಯ್ಯ
ಕನ್ಹೇರಿ ಮಠದ ಸ್ವಾಮಿಗಳು ಹಣೆಗೆ ವಿಭೂತಿ ಧರಿಸಿದ್ದೆ ಕಂಡಿಲ್ಲ ಸದಾಕಾಲ ಕುಂಕುಮ ಹಚ್ಚಿ ಕಂಡ ಕಂಡ ಬಸವ ಅನುಯಾಯಿಗಳ ಜರಿವ ಕೆಲಸವನ್ನೆ ಮಾಡುತ್ತಿದ್ದಾರೆ.ಶರಣ ಪರಂಪರೆಯ ಮಠದಲ್ಲಿ ಶರಣ ವಿರೋಧಿ ಸ್ವಾಮಿಗಳಿಗೆ ವೈದಿಕರ ಪರವಾಗಿ ವಾದಿಸದಿದ್ದರೆ ಹೊಟ್ಟೆ ತುಂಬದು ಎನಿಸುತ್ತದೆ.ಬಸವಾದಿ ಶರಣರ ವಚನಗಳನ್ನು ಸರಿಯಾಗಿ ಅರಿತು ಕೊಂಡಿದ್ದರೆ ಈ ರೀತಿಯ ಹೇಳಿಕೆ ಅವರಿಂದ ಬರುತ್ತಿರಲಿಲ್ಲವೇನೊ ಇವರು ನಿರ್ಮಾಯಪ್ರಭು ವಚನಾಂಕಿತದ ಕಾಡಸಿದ್ದೇಶ್ವರರ ಹೆಸರಿನ ಮಠ ಬಿಟ್ಟು ಹೊರ ನಡೆದು ವೈದಿಕರ ಗುಲಾಮರಾಗಿ ಬದುಕುವುದು ಒಳ್ಳೆಯದು..!
ಬಸವ ತತ್ವ ಪಾಲನೆ ಮಾಡದ ನೀವು ಮೊದಲು ಲಿಂಗಾಯತ ಮಠ ಬಿಟ್ಟು.ಹೊರನಡಿಯರಿ , ನಿನ್ನ ಹಾಗೆ ಮನುಷ್ಯ ಮನುಷ್ಯರ ನಡುವೆ ಬೇಧ ಭಾವ ಮಾಡುತ್ತಿಲ್ಲ ಸ್ವಾಮಿ . ಸಂತನ ವೇಷ ಹಾಕಿ ವಿಷ ಕಾರುವ ನಿಮಗೆ ಬಸವ ಭಕ್ತರ ಕುರಿತು ಮಾತನಾಡಲು ಏನು ಯೋಗ್ಯತೆಯಿದೆ. ? ಹುಟ್ಟಿದ ಧರ್ಮವನ್ನು ಪ್ರೀತಿಸದವ ನೀವು ಅನ್ಯ ಧರ್ಮಗಳನ್ನು ಹೇಗೆ ಪ್ರೀತಿಸುವಿರಿ?