ಆಳಂದ:
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಸಹಯೋಗದ ಅಡಿಯಲ್ಲಿ, ಪಟ್ಟಣದಲ್ಲಿ ಜನೆವರಿ 11ರಂದು ಅಖಿಲ ಕರ್ನಾಟಕ ದ್ವಿತೀಯ ಶರಣ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಶ್ರೀ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಕೊರಣೇಶ್ವರ ಸ್ವಾಮೀಜಿ ಮಂಗಳವಾರ ಹೇಳಿದರು.
ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ಬೆಳಿಗ್ಗೆ 11ಕ್ಕೆ ಸಮ್ಮೇಳನವನ್ನು ಸಾಹಿತಿ, ಹೋರಾಟಗಾರತಿ, ಶರಣೆ ಡಾ. ಮೀನಾಕ್ಷಿ ಬಾಳಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳಂದ ಶಾಸಕರಾದ ಬಿ.ಆರ್. ಪಾಟೀಲ ವಹಿಸಲಿದ್ದಾರೆ. ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ರಂಜಾನ್ ದರ್ಗಾ ಹಾಗೂ ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಇಳಕಲ್-ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಮಾತನಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕವಿಗಳಾದ ಆಶಾಲತಾ ಮಠಪತಿ, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಸಂಜಯ್ ಪಾಟೀಲ, ರಮೇಶ ಮಾಡ್ಯಾಳಕರ್, ಡಾ. ಪರ್ವಿನ್ ಸುಲ್ತಾನ್, ಕಲ್ಯಾಣರಾವ್ ಮದರಗಾಂವ್ಕರ್, ಮಹೇಶಕುಮಾರ್ ಶೆಟ್ಟಿ ವಚನ ನಿರ್ವಚನ ಮಾಡುವರು. ರಾಜ್ಯದ ವಿವಿಧ ಕಡೆಯ ಸಾಹಿತಿಗಳು, ಕವಿಗಳು ಪಾಲ್ಗೊಳ್ಳುವರು ಎಂದರು.
2025ರ ಶರಣ ಸಕಲರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಕೆ. ನೀಲಾ, ಕೌಸರ್ ಜಮೀರ್, ಪ್ರದೀಪ ಸಾವಳಕರ್, ಆಶಾಲತಾ ಮಠಪತಿ, ನಾಗವೇಣಿ ರೆಡ್ಡಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಮಲ್ಲಿನಾಥ ಯಲಶೆಟ್ಟಿ, ರಮೇಶ ಲೋಹರ, ಬಾಬುರಾವ ಮಡ್ಡೆ, ಸುಭಾಷ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

