(ಸೆಪ್ಟೆಂಬರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಬಗ್ಗೆ ಶರಣ ತತ್ವ ಚಿಂತಕ ಈರಣ್ಣ ದಯನ್ನವರ್ ಅವರ ಚಿಂತನೆ. ಕಾರ್ಯಕ್ರಮ ಬಸವ ರೇಡಿಯೋದಲ್ಲಿ ಏಪ್ರಿಲ್ 9 ನಡೆಯಿತು.)
ಬೆಳಗಾವಿ
ಈ ಅಭಿಯಾನ ಆಯೋಜಿಸುತ್ತಿರುವುದು ಅತ್ಯಂತ ಸಂತೋಷದಾಯಕ ಕಾರ್ಯಕ್ರಮ.
ಈ ಅಭಿಯಾನವು ಎಲ್ಲಾ ಬಸವ ಪರ ಸಂಘಟನೆಗಳನ್ನು ಒಳಗೊಳ್ಳಬೇಕು. ಎಲ್ಲಾ ಕಡೆಗಣಿಸಿರುವ ಪಂಗಡಗಳನ್ನು ಅಪ್ಪಿಕೊಳ್ಳಬೇಕು ಮತ್ತು ಅವರನ್ನು ಸೇರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು ಹಾಗೂ ಅವರುಗಳೂ ಪ್ರೀತಿಯಿಂದ ಭಾಗವಹಿಸುವ ವಾತಾವರಣವನ್ನು ಸೃಷ್ಟಿಸಬೇಕು.
ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಬೇಕು. ಜನಗಣತಿಯಲ್ಲಿ ಹಿಂದೂ ಎನ್ನುವ ಬದಲಾಗಿ ಲಿಂಗಾಯತ ಎಂದು ಬರೆಯಿಸಲು ಸ್ಪಷ್ಟತೆ ತರುವ ಜರೂರಿದೆ. ರಿಸರ್ವೇಶನ್ ಸಿಗುವುದು ಜಾತಿಗೆ ವಿನಹ ಧರ್ಮಕಲ್ಲ ಎಂದು ಮನವರಿಕೆ ಮಾಡಿ ಇಲ್ಲಿರುವ ಗೊಂದಲಗಳನ್ನು ಈ ಅಭಿಯಾನದಲ್ಲಿ ನಿವಾರಿಸಬೇಕು.
ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರನ್ನು ಸೇರಿಸುವುದರಿಂದ ಮತ್ತು ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಮಠಗಳಿಗೆ ಮತ್ತು ರಾಜಕೀಯ ಮುಖಂಡರಿಗೆ ಅನುಕೂಲವಾಗುತ್ತೆ, ಆದುದರಿಂದ ಅವರನ್ನು ರಾಜಕೀಯವನ್ನು ಹೊರಗಿಟ್ಟು ಲಿಂಗಾಯತ ಧರ್ಮ ಪ್ರಸಾರ ಮತ್ತು ಆಚರಣೆಗೆ ದುಡಿಸಿಕೊಳ್ಳಬೇಕು.
ಲಿಂಗಾಯತ ಧರ್ಮ ಒಂದು ದೊಡ್ಡ ನಿಧಿ ಆದರೆ ಅದರ ಮಹತ್ವ ಲಿಂಗಾಯತರಿಗೆ ತಿಳಿದಿಲ್ಲ. ವಚನಗಳ ಪ್ರಚಾರ ಮತ್ತು ಪ್ರಸಾರವನ್ನೂ ಮಾಡಬೇಕು. ಹತ್ತಾರು ತಂಡಗಳನ್ನು ಮಾಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮಾಡಬೇಕು. ವಚನ ಸಾಹಿತ್ಯ ಆಧಾರಿತ ಆಚರಣೆಗಳ ಬಗ್ಗೆ ವಿಚಾರ ಸಂಕಿರಣ ಮಾಡಿ ತರಬೇತಿ ನೀಡಬೇಕು. ಸಾಧಕ ಪ್ರಮುಖರ ಮತ್ತು ಮಠಾಧೀಶರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕು. ಮಹಿಳೆಯರಿಗೆ ಹೆಚ್ಚು ಆದ್ಯತೆಯನ್ನು ಕೊಡುವಂತಹ ವಾತಾವರಣವನ್ನು ಸೃಷ್ಟಿಸಬೇಕು.
We all sub casts of Hindus must get united and work for nation and save sanatan dharma
We must respect and follow Basavannan Dharm and practices as Sanatani