2 ಕಿ.ಮಿ. ಉದ್ದದ ಪಾದಯಾತ್ರೆ; ಮೂರು ಸದಸ್ಯರ ಕಾರ್ಯಕಾರಿ ಸಮಿತಿ
ಧಾರವಾಡ
ಸೆಪ್ಟೆಂಬರ್ 12 ರಂದು ಧಾರವಾಡ ನಗರಕ್ಕೆ ಬರುವ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಅದ್ಧೂರಿಯಾಗಿ ಬರಮಾಡಿಕೊಂಡು, ಕಾರ್ಯಕ್ರಮ ನಡೆಸಲು ಮಂಗಳವಾರ ಮುರುಘಾಮಠದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯ ಸ್ವಾಮಿಗಳನ್ನು ಅಭಿಯಾನದಲ್ಲಿ ತೊಡಗಿಸಲು, 300 ಗ್ರಾಮಗಳನ್ನು ಸಂಪರ್ಕಿಸಿ ಜನರಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಯ್ತು.
ಮಠಾಧಿಪತಿಗಳ ಒಕ್ಕೂಟದ ನಿರ್ಣಯದ ಅನುಸಾರ ವಿವಿಧ ಪೂಜ್ಯರ ನೇತೃತ್ವದಲ್ಲಿ, ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಒಳಗೊಂಡ 3 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯ್ತು. ಅಧ್ಯಕ್ಷರಾಗಿ ಬಿ.ಜಿ. ಕೊಂಗವಾಡ, ಉಪಾಧ್ಯಕ್ಷರಾಗಿ ಸಿದ್ರಾಮಣ್ಣ ನಡಕಟ್ಟಿ, ಕಾರ್ಯದರ್ಶಿಯಾಗಿ ಮಹಾಂತೇಶ ಪಟ್ಟಣಶೆಟ್ಟಿ ಅವರು ನೇಮಕಗೊಂಡರು.

ಸೆಪ್ಟಂಬರ ೧೨ ರಂದು ಧಾರವಾಡದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಬೆಳಿಗ್ಗೆ ೧೧ ಕ್ಕೆ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಜೊತೆ ವಚನ ಸಂವಾದ ನಡೆಯಲಿದೆ. ಸಂಜೆ ೦೫ ರಿಂದ ೦೬ ವರೆಗೆ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಸಂಜೆ ೦೬ ಗಂಟೆಗೆ ಸಾರ್ವಜನಿಕ ಸಮಾರಂಭ, ನಂತರ ೮.೩೦ ಕ್ಕೆ ನಾಟಕ ಪ್ರದರ್ಶನ ಏರ್ಪಡಿಸುವ ಸಿದ್ಧತೆ ಬಗ್ಗೆ ಚರ್ಚಿಸಲಾಯ್ತು.
ಗದುಗಿನ ತೋಂಟದಾರ್ಯ ಮಠದ ಪೂಜ್ಯ ಸಿದ್ಧರಾಮ ಸ್ವಾಮಿಜಿ ಮಾತನಾಡುತ್ತ, ಧಾರವಾಡ ಸಂಸ್ಕೃತಿಕ ನಗರ, ಇಲ್ಲಿ ಬಸವ ಸಂಸ್ಕೃತಿ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಸುಮಾರು ನಾಲ್ಕರಿಂದ ಐದುಸಾವಿರ ಜನ ಸೇರುವ ಅಂದಾಜು ಇದೆ. ಅಭಿಯಾನದಲ್ಲಿ ಕಲಾವಿದರು, ಸ್ವಾಮೀಜಿಗಳು ಸೇರಿದಂತೆ 40-50 ಜನ ಇರುತ್ತಾರೆ, ಅವರಿಗೆ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಬೇಕು.
ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಬಸವ ಸಂಸ್ಕೃತಿಯ ಮೇಲೆ ಸಂವಾದ ಏರ್ಪಡಿಸಬೇಕು. ಅವರು ಕೇಳುವ ಪ್ರಶ್ನೆಗಳಿಗೆ ವೈಚಾರಿಕವಾಗಿ, ವೈಜ್ಞಾನಿಕವಾಗಿ ಉತ್ತರಿಸುವುದಾಗಬೇಕು ಎಂದರು.

2 ಕಿ.ಮಿ. ಉದ್ದದ ಪಾದಯಾತ್ರೆ ಮೆರವಣಿಗೆ ಇರಬೇಕು. ಜಾತಿ ಮತ ಭೇದ ಬಿಟ್ಟು ಎಲ್ಲ ಬಸವಾನುಯಾಯಿಗಳು ಒಂದಾಗಿ ಪಾಲ್ಗೊಳ್ಳಬೇಕು, ಇದರಲ್ಲಿ ಮಹಿಳೆಯರ ಪಾತ್ರ ಬಹಳ ಮಹತ್ವಪೂರ್ಣವಾದದ್ದು ಎಂದರು.
ವಚನ ಸಂವಾದ ಹಾಗೂ ಸಾರ್ವಜನಿಕ ಸಮಾರಂಭವನ್ನು ನೂತನ ಸಭಾಭವನದಲ್ಲಿ ಮಾಡುವುದರ ಬಗ್ಗೆ ಚರ್ಚೆನಡೆಯಿತು.
ಅಭಿಯಾನದೊಂದಿಗೆ ಜಿಲ್ಲೆಗೆ ಬರುವ ವಿವಿಧ ಮಠಾಧೀಶರ ಹಾಗೂ ಕಲಾವಿದರ ವಸತಿ ಮಠದಲ್ಲೆ ಮಾಡಲು ತೀರ್ಮಾನಿಸಲಾಯ್ತು. ಸ್ವಾಗತ ಸಮಿತಿ, ಪ್ರಚಾರ, ವಸತಿ, ಪ್ರಸಾದ, ಪಾದಯಾತ್ರೆ ಮತ್ತು ಸಮಾರಂಭಗಳ ಸಮಿತಿಯನ್ನು ರಚಿಸಲು ಆಯ್ಕೆಯಾದ 3 ಸದಸ್ಯರಿಗೆ ಅಧಿಕಾರ ನೀಡಲಾಯ್ತು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡದ ಪ್ರಮುಖ ಉದ್ಯಮಿಗಳು, ಗಣ್ಯರು ಸೇರಿ 3 ಲಕ್ಷ ರೂಪಾಯಿಗಳ ದಾಸೋಹ ನೀಡುವ ವಾಗ್ದಾನ ಮಾಡಿದರು. ಭಾಗವಹಿಸಿದ ಮಠಾಧೀಶರು ಸಹ ಜಿಲ್ಲೆಯಲ್ಲಿ ಅಭಿಯಾನ ಯಶಸ್ವಿಗೆ ಬೇಕಾದ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.
ಸಭೆಯಲ್ಲಿ ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಮನಗುಂಡಿಯ ಬಸವಾನಂದ ಸ್ವಾಮೀಜಿ, ಬೆಳಗಾವಿಯ ಅಲ್ಲಮ ಪ್ರಭು ಸ್ವಾಮೀಜಿ, ಸಂಶಿಯ ಚನ್ನಬಸವ ದೇವರು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಕುಂದಗೋಳದ ಬಸವಣ್ಣಜ್ಜ ಪೂಜ್ಯರು ಭಾಗವಹಿಸಿದ್ದರು.

ಮಹಾಂತೇಶ ಪಟ್ಟಣಶೆಟ್ಟಿ, ಸಿದ್ರಾಮಣ್ಣ ನಡಕಟ್ಟಿ, ಬಿ.ಜಿ. ಕೊಂಗವಾಡ, ಶಂಕರ ಕೋಳಿವಾಡ, ಸಂಗಮನಾಥ, ಜಿ.ಬಿ. ಹಳ್ಯಾಳ, ಬಸವಂತ ತೋಟದ, ರಾಜೇಶ್ವರಿ ಕಟ್ಟಿಮನಿ, ಮೇದಾರ ಸಮಾಜದ ಅರವಿಂದ್ ಶಿರಹಟ್ಟಿ, ರವೀಂದ್ರ ಕುಡವಕ್ಕಲಿಗರ, ಸಂಗಮೇಶ ಹಡಪದ, ಕುಂಬಾರ ಸಮಾಜದ ಬಸವಂತಪ್ಪ ಚಕ್ರಸಾಲಿ, ಧರ್ಮಣ್ಣ ಕುಂಬಾರ, ನಾಗರತ್ನ ಹಡಗಲಿ, ಎಫ್.ಎಸ್. ಬೇವಿನಗಿಡದ, ಕಿರಣ್ ಸರ್ ಶರಣಗೌಡ, ಪ್ರಭಣ್ಣ ನಡಕಟ್ಟಿ, ಬಸವರಾಜ ಹುಲ್ಲೋಳಿ, ಕುಮಾರಣ್ಣ ಪಾಟೀಲ, ಸವಿತಾ ನಡಕಟ್ಟಿ, ಪ್ರಭು ಶೆಟ್ಟರ, ಭೀಮನಗೌಡ, ಬಸವರಾಜ ಗುಡ್ಡಾಪುರ, ಸುನಿಲ ಧನಗೊಂಡ, ಶಿವಾನಂದ ಹೊಸೂರ, ಜಿ.ಆರ್. ಜವಳಗಿ, ನೀಲಪ್ಪ ಕುರುಬಗಟ್ಟಿ,ಅಶೋಕ ಅಂಗಡಿ, ನಿಂಗಪ್ಪ ಮರಿತಮ್ಮಣ್ಣವರ, ರವಿ ಬಾಗೋಡಿ. ಮಲ್ಲಪ್ಪ ಹೆಚ್. ಅಕ್ಷಯ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ, ಬಸವಕೇಂದ್ರ ಮತ್ತಿತರ ಬಸವಪರ ಸಂಘಟನೆಗಳ ಪ್ರಮುಖರು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರೊ. ಶಶಿಧರ ತೋಡ್ಕರ್ ಕಾರ್ಯಕ್ರಮ ನಿರೂಪಿಸಿದರು. ಜೆ.ಎಲ್.ಎಂ. ಯುವ ಘಟಕದ ಜಿಲ್ಲಾದ್ಯಕ್ಷ ಸಿ.ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.