ಬಸವ ಸಂಸ್ಕೃತಿ ಯಾತ್ರೆಯಿಂದ ತಪ್ಪು ಸಂದೇಶ: ದಿಂಗಾಲೇಶ್ವರ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಸೆಪ್ಟೆಂಬರ್ 19 ವೀರಶೈವ ಲಿಂಗಾಯತ ಏಕತಾ ಸಮಾವೇಶ

ಹುಬ್ಬಳ್ಳಿ

ಬಸವ ಸಂಸ್ಕ್ರತಿ‌ ಯಾತ್ರೆ ತಂಡ ದುರುದ್ದೇಶ ಇಟ್ಟುಕೊಂಡು‌ ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿದ್ದಾರೆ. ಬಸವ ಸಂಸ್ಕೃತಿ ಯಾತ್ರೆ ಹೆಸರಿನಲ್ಲಿ, ಬಸವಣ್ಣನವರ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದು ಖಂಡನೀಯ ಎಂದು ಶಿರಹಟ್ಟಿ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಶನಿವಾರ ಆರೋಪಿಸಿದರು.

ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಇವರ ವಿರುದ್ಧವಾಗಿ ಇದೆ ತಿಂಗಳ 19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆಸಲಾಗುವುದೆಂದು ಹೇಳಿದರು.

ಬಸವ ಸಂಸ್ಕ್ರತಿ‌ ಯಾತ್ರೆ ಮಾಡುತ್ತಿರುವವರು ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗಾಗಿ ಸಮಾವೇಶಗಳನ್ನು ಮಾಡುತ್ತಿದ್ದರು. ಈಗ ಬಸವ ಧರ್ಮ ಸ್ಥಾಪನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೆಲವರು ಲಿಂಗಾಯತ ಧರ್ಮವೆಂದರೆ ಕೆಲವರು ಬಸವ ಧರ್ಮವೆನ್ನುತ್ತಾರೆ. ಅವರಲ್ಲಿ ಬದ್ಧತೆಯ ಕೊರತೆ ಇದೆ, ಸಮಾಜವನ್ನು ವಿಘಟನೆ ಮಾಡುವುದು ಅವರ ಗುರಿಯಾಗಿದೆ ಎಂದು ಆರೋಪಿಸಿದರು.

ಕೆಲ ಬುದ್ಧಿಜೀವಿಗಳು ಬಸವಧರ್ಮದಲ್ಲಿ ಮಠ ಸಂಸ್ಕೃತಿ ಇಲ್ಲ ಎನ್ನುತ್ತಾರೆ. ಆದರೆ, ಅವರ ಜೊತೆ ಇರುವ ಸ್ವಾಮೀಜಿಗಳು ಮಠ ಸಂಸ್ಕೃತಿಯಿಂದ ಬಂದವರು ಎನ್ನುವುದನ್ನು ಮರೆತಿದ್ದಾರೆ. ಅವರಲ್ಲೇ ದಂದ್ವ ನಿಲುವು ಇದೆ. ಮಠದ ಸಂಸ್ಕೃತಿ ಇಲ್ಲ ಎನ್ನುವ ಪೀಠಾಧಿಪತಿಗಳು ತಮ್ಮ ಪೀಠ ತ್ಯಾಗ ಮಾಡಲಿ ಎಂದು ಅವರು ಸವಾಲು ಹಾಕಿದರು.

ಲಿಂಗಾಯತ ಧರ್ಮಕ್ಕೆ ವಿರೋಧ

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆದಾಗ ನಾವು ಖಂಡಿಸಿದ್ದೇವೆ. ವೀರಶೈವ ಲಿಂಗಾಯತ ಎನ್ನುವುದು ತತ್ವ ಪ್ರಧಾನ ಧರ್ಮ. ವ್ಯಕ್ತಿ ಪ್ರಧಾನವಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಯಾವುದೇ ಕಾಲಕ್ಕೂ ಆಗಬಾರದು ಎಂದರು.

ಹಿಂದೆ ಹೋರಾಟ ನಡೆದಾಗ, ಈಗ ಹೋರಾಟ ಮಾಡುವಾಗ ಯಾವ ಸರ್ಕಾರ ಅಧಿಕಾರದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಖಾವಿ ತೊಟ್ಟ ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ

ಏಕತಾ ಸಮಾವೇಶ

ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಒಂದೇ ಎಂದು ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಸೆಪ್ಟೆಂಬರ್ 19ರಂದು ನಗರದ ನೆಹರು ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಬೃಹತ್ ಸಮಾವೇಶ ಏರ್ಪಡಿಸಿ ಸಮಾಜಕ್ಕೆ ನಿಲುವು ತಿಳಿಸಿ ಗೊಂದಲ ನಿವಾರಿಸಲಾಗುವುದು.

ಹಾಲಿ ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾವೇಶ ಶಕ್ತಿ ಪ್ರದರ್ಶನವಲ್ಲ.‌ ಸಮಾಜದ ಉಳಿವಿನ ಪ್ರದರ್ಶನ. ಶಕ್ತಿ ಪ್ರದರ್ಶನ ಅವರು ಮಾಡುತ್ತಿದ್ದಾರೆ, ಮಾಡಲಿ ಎಂದರು.

ರಾಜ್ಯದ ಎಲ್ಲ ಶ್ರೀಗಳ ಸಾನ್ನಿಧ್ಯ ವಹಿಸಲಿದ್ದಾರೆ. ಯಾರು ವೀರಶೈವ ಲಿಂಗಾಯತ ತತ್ವ ಪ್ರಧಾನ ಎಂದು ಒಪ್ಪಿಕೊಳುತ್ತಾರೋ ಅವರೆಲ್ಲ ಸಮಾವೇಶಕ್ಕೆ ಬರುತ್ತಾರೆ. ವೀರಶೈವ ಲಿಂಗಾಯತ ತತ್ವಪ್ರಧಾನ ಧರ್ಮವೆಂದು ಒಪ್ಪಿಕೊಳ್ಳುವವರು ಸಮಾವೇಶಕ್ಕೆ ಬರುತ್ತಾರೆ. ಎಷ್ಟೇ ಪ್ರತಿಷ್ಠಿತ ಮಠವಾದರೂ ಈ ಸುದ್ದಿಗೋಷ್ಠಿಯೇ ಅವರಿಗೆ ಆಹ್ವಾನ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಿಂದಿನಿಂದರೂ ವೀರಶೈವ ಲಿಂಗಾಯತ ಒಂದೇ ಎಂದು ನಿಲುವು ತಾಳಿದೆ. ಅದೇ ನಿಲುವಿಗೆ ಈಗಲೂ ಬದ್ಧವಿದೆ.

ಹೊರ ರಾಜ್ಯದ ಮಠಾಧೀಶರು

ಮಹಾರಾಷ್ಟ್ರದ ಬೊಮ್ಮಲಿಂಗೇಶ್ವರ ಮಠದ ಶ್ರೀಕಂಠಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಬಸವ ಸಂಸ್ಕೃತಿ ಹೆಸರಲ್ಲಿ ಕೆಲವರು ಗೊಂದಲ ಮೂಡಿಸುತ್ತಿದ್ದು, ಯಾರೂ ಸಹ ಅದಕ್ಕೆ ತಲೆಕೊಡಬಾರದು ಎಂದರು.

ಆಂಧ್ರಪ್ರದೇಶದ ಸೋಮಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮ ಸ್ವತಂತ್ರ ಧರ್ಮ. ವೀರಶೈವ ಲಿಂಗಾಯತ ಬೇರೆ ಬೇರೆ ಅಲ್ಲ. ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರ ಸೇರಿಸಿ ಗೊಂದಲ ನಿವಾರಿಸಲಾಗುವುದು ಎಂದರು.

ಸಿಂದಗಿ ಸಾರಂಗ ಮಠದ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ವೀರಶೈವ ಲಿಂಗಾಯತ ಒಂದೇ ಎಂಬುದು ನಮ್ಮೆಲ್ಲರ ತತ್ವವಾಗಿದೆ. ಸಮಾಜ ಒಡೆಯುವ ಗೊಂದಲ ಆಗಬಾರದು ಎಂದು ಶ್ರೀಗಳು ಈ ನಿರ್ಣಯ ಕೈಗೊಂಡಿದ್ದೇವೆ. ಸಮಾಜದ ಗೊಂದಲ‌ ದೂರ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಭು ಸಾರಂಗಧರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠ‌ ಸ್ವಾಮೀಜಿ, ಉಪ್ಪಿನಬೆಟಗೇರಿ ಮಠದ ಸ್ವಾಮೀಜಿ, ಜಯಶಾಂತ ಲಿಂಗೇಶ್ವರ ಸ್ವಾಮೀಜಿ‌ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
26 Comments
  • ತಮ್ಮ ವೀರಶೈವ ಧರ್ಮವು,ವೋ, ಪಂಥವೋ ? ಅದರ ಸಿದ್ದಾಂತದ
    ತಳಹದಿಯ ಮೇಲೆ ಬದುಕಿ. ನಿಮ್ಮದಲ್ಲದ ಲಿಂಗಾಯತ
    ಧರ್ಮಕ್ಕೆ ಯಾಕೆ ಬೆನ್ನು ಹತ್ತಿದ್ದಿರಿ. ಲಿಂಗಾಯತ ಸ್ವತಂತ್ರ
    ಧರ್ಮ. ಹುಟ್ಟಿದ್ದೇ ಸ್ವತಂತ್ರವಾಗಿ, ಬೆಳೆದಿದ್ದು ಸ್ವತಂತ್ರವಾಗಿ
    ಈ ಧರ್ಮ ವಚನ ಸಾಹಿತ್ಯದ ತಳಹದಿಯ ಮೇಲೆ ಕಟ್ಟಲ್ಪಟ್ಟ
    ಧರ್ಮ.‌ ಈ ಧರ್ಮದಲ್ಲಿ ಮೂಗು ತೂರಿಸುವ ಹಕ್ಕು
    ನಿಮಗಿಲ್ಲ . ಇನ್ನು ಹಿಂದೂ ಧರ್ಮವೇ ಅಲ್ಲ ಅದು ಹೇಗೆ
    ಸ್ವತಂತ್ರ ಧರ್ಮವಾಗುತ್ತದೆ? ಅನಾವಶ್ಯಕವಾಗಿ
    ಮುಗ್ದ ಜನರನ್ನು ದಾರಿತಪ್ಪಿಸಬೇಡಿ.

    • ಇದು ಒಳ್ಳೆಯದೇ ಆಯಿತು. ಲಿಂಗಾಯತಕ್ಕೆ ಅಂಟಿರುವ ಆಂತರಿಕ ದರಿದ್ರಗಳು ಯಾರೆಂದು ಸಮಾಜಕ್ಕೆ ತಿಳಿಯುವಂತಾಯಿತು.

      ಲಿಂಗಾಯತ ತತ್ವದಲ್ಲಿ ಬದುಕಲು ಇಚ್ಛಿಸುವ ಜೀವಿಗಳೆಲ್ಲರೂ ಇಂತಾ ದರಿದ್ರಗಳಿಂದ ದೂರವಿರಬೇಕು.

      ಇನ್ನು ಈ ದಿಂಗಾಲೇಶ್ವರ ಪುಣ್ಯಾತ್ಮರಿಗೆ,
      ಗುರುವೇ ತಾವು ತಮಗೇನು ಬೇಕೊ ಅದನ್ನು ಮಾಡಲು ಸರ್ವಸ್ವತಂತ್ರರು. ಮಾಡಿಕೊಳ್ಳಿ ಆದರೆ ತಮ್ಮಲ್ಲಿ ಬಿನ್ನಹವೇನೆಂದರೆ ಲಿಂಗಾಯತರನ್ನು ನಮ್ಮಪಾಡಿಗೆ ಬಿಟ್ಟುಬಿಡಿ. ನಿಮ್ಮಯೋಗ್ಯತೆಯ ಮೇಲೆ ಏನಾದರೂ ಕಟ್ಟಿಕೊಳ್ಳಿ. 🙏

    • ಪೂಜ್ಯ ಶ್ರೀ ಬಸವಗೀತಾ ಮಾತಾಜಿ ಗುರು ಬಸವ ಮಠ ನಾಗನೂರ ತಾ, ರಾಮದುರ್ಗ says:

      ಬಸವ ಸಂಕ್ರೃತಿ ಯಾತ್ರೆ ಯಶಸ್ವಿ ಆಗುತ್ತಿದೆ ಅದಕ್ಕೆ ಅವರೆಲ್ಲ ಕಂಗಾಲಾಗಿದ್ದಾರೆ.
      ಏನು ಮಾಡಬೇಕು? ಏನು ಮಾತನಾಡಬೇಕು ಅನ್ನೋದು ಅವರಿಗೆ ತಿಳಿಯುತ್ತಿಲ್ಲ

    • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ says:

      👍💯❤️👌💐🙏

  • ಹುಚ್ಚರ ಸಂತೆಯಲ್ಲಿ ಮನೆಯ ಮಾಡಿದ್ದೀರಿ ದಿಂಗಾಲೇಶ್ವರ ಸ್ವಾಮೀಜಿಗಳೇ.
    ನೀವು ದಿಂಗದಿಂಗಾಗಿ ಮಾತನಾಡಿದರೆ ಜನರು ಮರುಳಾಗುವವರೆ ???
    ತತ್ವ ಬದ್ಧ ತತ್ವ ಇರುವ ಧೀಮಂತ ಧರ್ಮ ಬಸವ ಧರ್ಮ ಅದು ಲಿಂಗಾಯತ ಧರ್ಮ!!!!
    ವೀರಶೈಲ ವೀರಶೈವ ಎನ್ನುವ ಪದದಲ್ಲಿ ಜಾತಿ ಜಂಗಮರಿಂದ ಹುಟ್ಟಿಕೊಂಡದ್ದು ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. !!
    ನಿಮ್ಮ ಸರ್ಟಿಫಿಕೇಟ್ಗಳನ್ನು ತೆಗೆದು ನೋಡಿ ನಿಮ್ಮ ಸರ್ಟಿಫಿಕೇಟ್ ನಲ್ಲಿ ಲಿಂಗಾಯತ ಎಂದೇ ನೀವು ಬರೆಸಿದ್ದೀರಿ ಹುಟ್ಟಿದ್ದು ಲಿಂಗಾಯಿತರಿಗೆ ನೀವು ಅದನ್ನು ಬಿಟ್ಟು ಯಾವುದೋ ಶೈವಕ್ಕೆ ನೀವು ಹುಟ್ಟಿಲ್ಲ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ತಂದೆಯನ್ನು ನಿಮ್ಮ ತಂದೆ ಎಂದು ಕರೆಯದ ನೀವು ಏನಾಗಿದ್ದೀರಿ? ಆ ನಿಮ್ಮ ಬಸವ ತಂದೆಯನ್ನ ಅಪನಿಂದೆಗೆ ಬಳಸಬೇಡಿ ಕೆಡಿಸಬೇಡಿ. ದಾರಿ ಸುಗಮವಾಗಿ ಹೋಗುವಾಗ ಅಡ್ಡಗಟ್ಟಿ ನಿಂತು ಮತ್ತೊಬ್ಬರಿಗೆ ತೊಂದರೆ ಮಾಡುವುದು ಕಳ್ಳತನದ ವಿಚಾರ. ಮುಗ್ಧ ಜನರ ಬಾಳಿನಲ್ಲಿ ಹುಡುಗಾಟ ಆಡಿ ಅವರನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗುವರಿಗೆ ನೆಗೆಟಿವ್ ವಿಚಾರ ಮಾಡುವವರು ಎನ್ನುವರು. ನಿಮಗೆ ಏನಾದರೂ ಸಂಶಯವಿದ್ದರೆ ಪಂಡಿತರಧ್ಯ ಸಾಣೆಹಳ್ಳಿ ಶ್ರೀಗಳ ಎದುರು ನಿಂತು ಸರಿಯಾಗಿ ಮಾತನಾಡಿ .
    ನಿಮ್ಮ ಸಂಶಯಗಳಿಗೆ ಸಮಸ್ಯೆಗಳನ್ನ ತಮ್ಮಂಥ ಮಹಾನ್ ಸ್ವಾಮೀಜಿಗಳು ಕುಳಿತುಕೊಂಡು ಪರಿಹರಿಸಿಕೊಳ್ಳಬೇಕು ಮಾತನಾಡಿಕೊಳ್ಳಿ ಶರಣು ಶರಣಾರ್ಥಿಗಳು ಓಂ ಶ್ರೀ ಗುರು ಬಸವಲಿಂಗಾಯ ನಮಃ

    • ?!!ಗುರ ಬಸವಲಿಂಗ ಶರಣ!!
      [ಅ.ಸ.ಷ.]
      🌹🌹🌹🌹🌹🌹🌹🌹🌹🌹
      ಆತ್ಮೀಯರೇ
      ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ ಎಂಬುದೊಂದೇ ಏಕೈಕ ಧರ್ಮವಿದ್ದು ಉಳಿದವುಗಳೆಲ್ಲಾ ಮತ ಪಂಥ ಪಂಗಡ ರೂಢಿ ಸಂಪ್ರದಾಯಗಳಾಗಿವೆ. ಹಾಗಾಗಿ ಲಿಂಗ ಧರ್ಮವನ್ನು ಹಾಳು ಮಾಡುವುದಗೋಸ್ಕರ ಕೆಲ ಮೂರ್ಖ ಅನಾಢ್ಯರು ತಮ್ಮ ಅನಾಗರಿಕ ನಡೆಗಳನ್ನೆ ಧರ್ಮವೆಂದು ಹೊಗಳುತ್ತಿರುವುದು ಖಂಡನಿಯವಾಗಿದೆ. ಇದರ ಬಗ್ಗೆ ಹೆಚ್ಚಿನ ತಿಳುವಳಿಕೆಗಾಗಿ ದಯವಿಟ್ಟು ಅನುಭಾವ ಸಂಗಮದವರನ್ನು ಈ ಕೆಳಗಿನ ಮೊಬೈಲ್ ಸಂಖ್ಗಖ್ಯೆಗೆ ಕರೆ ಮಾಡಿ ತಮ್ಮ ಅನುಮಾನವನ್ನು ಬಗೆಹರಿಸಿಕೊಳ್ಳಬೇಕು. ಶರಣಾರ್ಥಿ.
      ಯಿಂದ
      ಪೀಠಾಧಿಪತಿಗಳು
      ಅಲ್ಲಮಪ್ರಭು ಅನುಭಾವ ಪೀಠ
      ಮು ಕಾಸರಗೋಡ ಕೇರಳ, ಕರಾವಳಿ ಪ್ರದೇಶ ಭಾರತ ದೇಶ ದೂರ!! ೮೪೩೧೯೩೯೩೮೦
      8431939380
      😀😀😀

      • ಪೂಜ್ಯರೇ,
        ಶರಣು ಶರಣಾರ್ಥಿ.
        ತಮ್ಮ ದಿಟ್ಟ ಹಾಗೂ ನೇರ ನುಡಿಗೆ ಅಭಿನಂದನೆಗಳು.

  • ಲಿಂಗಾಯತ ಎಂದರೆ ಎಲ್ಲರನ್ನು ಎಲ್ಲವನ್ನು ಸೇರುವದು-ಸೇರಿಸಿಕೊಂಡು ಹೋಗುವದು. ವೀರಶೈವ ಬೇರೆ, ಲಿಂಗಾಯತ ಬೇರೆ. ಅವರು ನಾವಲ್ಲ, ನಾವು ಅವರಲ್ಲ.. ಎಂದು ಭೇದ ಮಾಡಬಾರದಲ್ಲವೇ?

  • ಓಂ ಶ್ರೀ ಗುರುಬಸವ ಲಿಂಗಾಯ ನಮಃ
    ದಿಂಗಾಲೇಶ್ವರ ಸ್ವಾಮಿಗಳೇ ಮತ್ತು ಅವರ ಸಹಚಾರರ ಸ್ವಾಮಿಗಳೇ
    ಲಿಂಗಾಯಿತರಿಗೆ ಮೌಡ್ಯತೆಗಳನ್ನು ತುಂಬಿ ಅದರ ಮೇಲೆ ಜೀವನ ನಡೆಸುತ್ತಿದ್ದೀರಿ

  • ಎರಡು ಒಂದೆಯಿರುವುದರಿಂದ ಲಿಂಗಾಯತ ಒಪ್ಪಿಕೊಳ್ಳುವುದೇ ವಿವೇಕದ ನಡೆ.

  • ಯಾರ್ಯಾರ ಉದ್ದೇಶ ಏನು ಅನ್ನುವುದು ಲಿಂಗಾಯತರಿಗೆ ಗೊತ್ತಾಗಿದೆ.

  • ಬಸವಸಂಸಕೃತಿಅಭಿಯಾನ ಸರಿಯಾದ ರೀತಿಯಲ್ಲಿ ದಿನದಿಂದದಿನಕ್ಕೆ ಒಕ್ಕೊರಲಿನಿಂದ ಭರ್ಜರಿಯಿಂದ ಮುನ್ನಡಿತಿದೆ. ಅದಕ್ಕೆ ಇವರೆಲ್ಲರಿಗೂ ತಮ್ಮ ನಿಜ ಬಣ್ಣ ಗೊತ್ತಾಗಬಾರದೆಂದು ಈ ಹತಾಶದ ಗೊಂದಲದ ಬೆಳವಣಿಗೆಗಳು.
    ಎಲ್ಲ ಬಸವ ಭಕ್ತರಿಗೆ ಬಸವ ಸಂಸ್ಕೃತಿಯ ಅಭಿಯಾನ ಸಂತಸ ತಂದಿದೆ.

  • ವಚನಾಧರಿತ ಮನಸ್ಸುಗಳು ಭೇದರಹಿತ ಸಮಸಮಾಜ ಕಟ್ಟುವ ಪ್ರಯತ್ನ ಸಾಧ್ಯ ಲಿಂಗಾಯತರಿಗೆ ಮನವರಿಕೆಯಾಗಿದೆ.

  • ಕುಮಾರಸ್ವಾಮಿಜಿಯವರು ಶಿವಯೋಗಮಂದಿರದಲ್ಲಿ ಜಂಗಮಜಾತಿಯ ಒಟುಗಳ ತಯ್ಯಾರ ಮಾಡಿ ವೇದ ಇತ್ಯಾದಿ ಸಂಸ್ಕೃತ ಕಲಿಸಿ ಮಠಗಳಿಗೆ ಪೀಠಾಧಿಪತಿ ಮಾಡಿದುದರಲ್ಲಿ ಮಹತ್ವಪಾತ್ರ ಎಂಬುದು ಮತ್ತು ಅಖಿಲ ಭಾರತ ಲಿಂಗಾಯಿತ ಮಹಾಸಭೆ ಮಾಡದೆ ಅಖಿಲ ಭಾರತ ವೀರಶೈವ ಮಹಾಸಭೆ ಮಾಡಿದರಲ್ಲಿನ ಮಹತ್ವದ ಕುತಂತ್ರವನ್ನು ಲಿಂಗಾಯತರು ಬಸವಾನುಯಾಯಿಗಳು ವಚನಾಧ್ಯಯನ ಮಾಡಿ ಇತಿಹಾಸ ತಿಳಿದುಕೊಂಡವರು ವೈಚಾರಿಕತೆ ವೈಜ್ಞಾನಿಕತೆ ಸ್ವತಂತ್ರ ವಿಚಾರ ಇರುವವರು ಮರೆಯುವುದಿಲ್ಲ..

    • ವಚನಾಧರಿತ ಮನಸ್ಸುಗಳು ಮೌಢ್ಯಭೇದರಹಿತ ಸ್ವತಂತ್ರ ಸದೃಢ ಸಮಸಮಾಜ ಕಟ್ಟುವ ಪ್ರಯತ್ನ ಸಾಧ್ಯ ಎಂಬುದು ಬಸವಾದಿಶರಣರ ಕಾಯಕ ವಚನವರಿತ ಲಿಂಗಾಯತರಿಗೆ ಮನವರಿಕೆಯಾಗಿದೆ.

  • ಬಸವ ಮೀಡಿಯಾದಲ್ಲಿ ಈ ಸುದ್ದಿಯನ್ನು ಯಥಾವತ್ತಾಗಿ ಕೊಡುವುದರಿಂದ ತಪ್ಪು ಸಂದೇಶ ಹೋಗುವದು.
    ಇದನ್ನು ಸರಿಯಾಗಿ ವಿಮರ್ಶೆಯಿಂದ ಕೊಡುವುದು ಒಳ್ಳೆಯದು .
    ಈ ಸುದ್ದಿ ಗೋಷ್ಠಿ ಸಂಪೂರ್ಣ ದಿಕ್ಕು ತಪ್ಪಿಸುವ ಉದ್ದೇಶದಿಂದ ಮಾಡಿರುವುದರಿಂದ ಆ ನಿಜ ಬಣ್ಣವನ್ನು ಇದರಲ್ಲಿ ಬರುವಂತೆ ಮಾಡುವುದು ಸರಿಯಾದ ವರದಿ.

  • ಬಸವ ಮೀಡಿಯಾದಲ್ಲಿ ಈ ಸುದ್ದಿಯನ್ನು ಯಥಾವತ್ತಾಗಿ ಕೊಡುವುದರಿಂದ ತಪ್ಪು ಸಂದೇಶ ಹೋಗುವದು.

    ಇದನ್ನು ಸರಿಯಾದ ವಿಮರ್ಶೆಯಿಂದ ಕೊಡುವುದು ಒಳ್ಳೆಯದು .

    ಈ ಸುದ್ದಿ ಗೋಷ್ಠಿ ಸಂಪೂರ್ಣ ದಿಕ್ಕು ತಪ್ಪಿಸುವ ಉದ್ದೇಶದಿಂದ ಮಾಡಿರುವುದರಿಂದ ಆ ನಿಜ ಬಣ್ಣವನ್ನು ಇದರಲ್ಲಿ ಬರುವಂತೆ ಮಾಡುವುದು ಸರಿಯಾದ ವರದಿ.

  • ಇಲ್ಲಿ ಅವರ ಸಭೆಗೆ ಸಮಸಂಜಸವಾದ ಉತ್ತರವನ್ನು ನೀವು ಕೊಡಬೇಕು ಎಂದು ನನ್ನ ಕೋರಿಕೆ

  • ಯಾವ ರಾಜಕಾರಣಿಗಳು ಇದರಲ್ಲಿ ಭಾಗವಹಿಸಲು ಬರುತ್ತಾರೆ, ಮೊದಲೆ ತಿಳಿಯುತ್ತದೆ ನಾವೇ ಖುದ್ದಾಗಿ ಭೇಟಿ ಮಾಡಿ ಅವರಿಗೆ ತಿಳಿಸಿ ಹೇಳಿ ಭಾಗವಹಿಸಬಾರದು ಎಂದು ತಿಳಿ ಹೇಳಬೇಕು. ಈ ದಿಂಗಾಲ ಕೆಲಸನೇ ಮನೆ ಹಾಳು ಮಾಡುವ ಕೆಲಸ..

    • ಇದು ಸರಿಯಾದ ಮಾರ್ಗ ಇದನ್ನು ಎಲ್ಲರೂ ಅನುಸರಿಸಬೇಕು. ಬರುವಂತಹವರಿಗೆ ಮೊದಲೇ ಹೇಳಿ ಲಿಂಗಾಯತ ಧರ್ಮದ ಬಗ್ಗೆ ತಿಳಿಸಿ ಅವರು ಸಭೆಗೆ ಹೋಗದಂತೆ ಮಾಡುವುದು ಸೂಕ್ತ..
      ಅದರ ಜೊತೆಗೆ ಬೇರೆ ಮಠಾಧೀಶರಿಗೂ ಕೂಡ ಸರಿಯಾಗಿ ತಿಳಿಸಿ ಹೇಳಿ ಹೋಗದಂತೆ ಮಾಡುವುದು ಇನ್ನೂ ಸೂಕ್ತ..

  • ಕಾಯಕ ಮಾಡುವ ಸಮಾಜ ಎಲ್ಲಾ ಒಂದೇ ಎಂದು ಹೇಳುವ ಲಿಂಗಾಯತ ಬಸವ ಧರ್ಮದ ಯಾತ್ರೆ ಧರ್ಮ ಒಡೆಯುವ ಕೆಲಸ ಎಂದು ಹೇಳುವ ಇವರಿಗೆ ಧರ್ಮ ಒಂದು ಮಾಡುವ ಈ ಕಾರ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ ಇವರಿಗೆ ಬಸವಣ್ಣನವರ ಹಾಗೂ ಈ ಯಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿಯ ಕೊರತೆ ಇದೆ ಆದ್ದರಿಂದ ಇವರು ಹೀಗೆ ಮಾತನಾಡುತ್ತಾರೆ

  • ವೀರಶೈವ ಅನ್ನುವುದೇ ಇವರಿಗೆ ಮುಖ್ಯವಾಗಿದೆ ಬಸವಣ್ಣನವರ ಕಾಯಕ ಧರ್ಮದ ಬಗ್ಗೆ ಆ ಎಲ್ಲಾ ಕಾಯಕ ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಿಲ್ಲವೇ

  • ನೀವು ವೀರಶೈವ ಎಂದಾದವರು ಎರಡೂ ಹೇಗಾದಿರಿ? ನಿಮ್ಮಹುಚ್ಚು ವಡರಾಟಕ್ಕೆ ಯಾರೂ ಕೇಳುವದಿಲ್ಲ.

  • ಹೀಗೆ ಮುಗ್ಧ ಜನರನ್ನು ದಾರಿ ತಪ್ಪಿಸುವ ಕೆಲಸ ನಿಜವಾಗಿ ಮಾಡುತ್ತಿರುವವರು ಇಂಥ ಸ್ವಾರ್ಥಿ ಸ್ವಾಮಿಗಳು. ಒಡೆಯುತ್ತಿರುವ ಕೆಲಸ ಮಾಡುತ್ತಿರುವ ಇಂಥ ಸ್ವಾಮಿಗಳಿಗೆ ಎಲ್ಲ ಉಳಿದ ವಿರಕ್ತ ಮಠದ ಸ್ವಾಮಿಗಳು ಮತ್ತು ಬಸವಾಭಿಮಾನಿಗಳೆಲ್ಲರೂ ಉಗ್ರ ಉತ್ತರ ಕೊಡಲೇಬೇಕು. ಇಂಥ ಜೊಳ್ಳು ಸ್ವಾಮಿಗಳ ಬಣ್ಣ ಬಯಲು ಮಾಡಬೇಕು. ಅವರೆಲ್ಲರಿಗೆ open challange ಮಾಡಬೇಕು. ಯಾವುದೇ ಸತ್ಯದ ಬೆಂಬಲವಿಲ್ಲದೆ ಬೊಗಳೆ ಬಿಡುತ್ತಿರುವ ಇವರೆಲ್ಲರಿಗೆ ಮಟ್ಟ ಹಾಕಲೇಬೇಕು.
    ಎಲ್ಲಕ್ಕಿಂತ ಮಿಗಿಲಾಗಿ ಈ ಸ್ವಾಮಿಗಳು ಹೇಳುತ್ತಿರುವುದನ್ನು ನಂಬುವ ಮುಗ್ಧ ಲಿಂಗಾಯತರ ಕಣ್ಣು ತೆರೆಸುವ ಕಾರ್ಯವು ಆಗಬೇಕು.

Leave a Reply

Your email address will not be published. Required fields are marked *