ಅಭಿಯಾನ 2025: ಹಳ್ಳಿಗಳಿಂದ ಶುರುವಾಗಲಿ, ಬಸವ ತತ್ವ ಜನರಿಗೆ ಮುಟ್ಟಿಸಿ (ವಿಶ್ವಾರಾಧ್ಯ ಸತ್ಯಂಪೇಟೆ)

ಮಹಿಳೆಯರಿಗೆ, ಮಕ್ಕಳಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿಬೇಕು.

ಶಹಾಪುರ

ಸಮಾಜದಲ್ಲಿ ಬಸವ ತತ್ವದ ಅನುಯಾಯಿಗಳು ಮೊದಲಿಗಿಂತ ಹೆಚ್ಚಾಗಿರುವುದು ಸಂತೋಷದ ವಿಷಯ. ಆದರೆ ನಾವು ಜನಸಾಮಾನ್ಯರಿಗೆ ತಲುಪಬೇಕಾದ ಪ್ರಮಾಣದಲ್ಲಿ ತಲುಪುತ್ತಿಲ್ಲ. ಅನೇಕ ಕುಟುಂಬಗಳಲ್ಲಿ ಒಬ್ಬರು ಲಿಂಗಾಯತರಿರುತ್ತಾರೆ, ಮಿಕ್ಕವರೆಲ್ಲ ವೀರಶೈವವಾದಿಗಳು ಆಗಿರುತ್ತಾರೆ.

ಬಸವ ತತ್ವವನ್ನು ಎಲ್ಲರಿಗೂ ಮುಟ್ಟಿಸುವುದು ಅಭಿಯಾನ ಮಾಡಬೇಕಾಗಿರುವ ಬಹು ಮುಖ್ಯ ಕೆಲಸ.

ಅಭಿಯಾನ ಹಳ್ಳಿಗಳಿಂದ ಶುರುವಾಗಲಿ. ಹಳ್ಳಿಗಳಲ್ಲಿ ಜನ ಸೇರಿಸಿ ಸಂಭ್ರಮದ ಜಾತ್ರೆಯ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯಬೇಕು.

ಮಹಿಳೆಯರಿಗೆ, ಮಕ್ಕಳಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿಬೇಕು. ಪಂಚಪೀಠಗಳ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಕುಂಭ ಹೊರಸಿ ಮೆರವಣಿಗೆ ಮಾಡಿಸಲಾಗುತ್ತದೆ. ಅವರೆಲ್ಲ ಹೊಸ ಸೀರೆ ಉಟ್ಟಿಕೊಂಡು ಸಡಗರದಿಂದ ಪಾಲ್ಗೊಳ್ಳುತ್ತಾರೆ. ಇಂತಹ ಸಡಗರದ ಕಾರ್ಯಕ್ರಮಗಳು ನಮಗೂ ಅವಶ್ಯವಿದೆ.

ಮಕ್ಕಳನ್ನೂ ತೊಡಗಿಸಿಕೊಳ್ಳಿ. ಅವರ ಕೈಯಿಂದ ವಚನ ಹೇಳಿಸಿ.

ಎಲ್ಲಾ ವರ್ಗಗಳಿಂದ ಶರಣರು ಬಂದಿದ್ದಾರೆ. ಹಿಂದುಳಿದ ವರ್ಗಗಳ ಶರಣರನ್ನು, ಲಿಂಗಾಯತರನ್ನು ಮುನ್ನೆಲೆಗೆ ತನ್ನಿ. ಸ್ಥಳೀಯ ಶರಣರ ಮೇಲೂ ಒತ್ತು ಕೊಡಿ. ದಲಿತ, ಪ್ರಗತಿಪರ ಸಂಘಟನೆಗಳನ್ನೂ ಒಳಗೊಳ್ಳಿ.

ಬಸವಣ್ಣನವರನ್ನು ಬಹಳ ವೈಚಾರಿಕವಾಗಿ ಬಿಂಬಿಸಿದರೆ ಕೆಲವು ಜನ ಸ್ವೀಕರಿಸುವುದಿಲ್ಲ. ಆರಂಭದಲ್ಲಿ ಬಸವಣ್ಣನವರ ಮೂರ್ತಿ ಇಟ್ಟು ಪೂಜೆ ಮಾಡಲು ಹೇಳಿದರೆ ಎಲ್ಲಾ ಒಪ್ಪಿಕೊಳ್ಳುತ್ತಾರೆ. ಇವೆಲ್ಲಾ ವೈದಿಕ ಆಚರಣೆ ಎಂಬ ಅಭಿಪ್ರಾಯ ಬರಬಹುದು. ಮೊದಲು A B C D ಕಲಿಸೋಣ. ನಂತರ ಉನ್ನತ ವ್ಯಾಸಂಗವಾಗಲಿ. ಕ್ರಮೇಣ ಇದರಿಂದ ಮುಂದೆ ಹೋಗುವ ಮಾರ್ಗವನ್ನೂ ತೋರಿಸಬಹುದು.

ಇಂದು ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆಯಾಗಿರುವುದು ನಮಗೆ ದೊಡ್ಡ ಬಲ ಕೊಟ್ಟಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಬಸವಣ್ಣನವರ ವಿಚಾರಗಳನ್ನು ತಲುಪಿಸುವ ಕೆಲಸವನ್ನು ಮಾಡಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
1 Comment
  • ವಿಶ್ವಾರಾಧ್ಯ ಸತ್ಯಂಪೇಟೆಶಹಾಪುರ ಅವರ ನಿಲುವು ಬಹಳ ಸುಂದರವಾಗಿದೆ. ಆಚರಣೆಗೆ ತರಲು ಉತ್ತಮ ಕಾರ್ಯಕ್ರಮ ಹಾಕಿಕೊಂಡಿದ್ದಾರೆ . ಅವರಿಗೆ ಬಸವ ಚೇತನ ಎಲ್ಲ ಬಗೆಯ ಬಲ ಕೋಡಲಿಯೆಂದು ಹಾರೈಸುವ. ಶರಣು ಶರಣಾರ್ಥಿ

Leave a Reply

Your email address will not be published. Required fields are marked *