ಹಾಸನ
ನಗರದಲ್ಲಿ ಸೆಪ್ಟೆಂಬರ್ 21 ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಮಂಗಳವಾರ ತಣ್ಣೀರುಹಳ್ಳ ಮಠದಲ್ಲಿ ಸಮಾಜದ ಎಲ್ಲಾ ಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು.

“ಜಿಲ್ಲೆಯಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಅಭಿಯಾನಕ್ಕೆ ಬೇಕಾದ ಸಂಪನ್ಮೂಲ ಸಂಗ್ರಹಿಸುವ ಕಾರ್ಯಕ್ಕೆ ಇಳಿಯಲು ತೀರ್ಮಾನಿಸಿದ್ದೇವೆ. ಬಹುತೇಕ ಸಂಪನ್ಮೂಲ ಕೊರತೆ ಆಗುವುದಿಲ್ಲ. ಉಳಿದಂತೆ ಕಾರ್ಯಕ್ರಮ ನಡೆಯಲು ಸಮಿತಿಗಳನ್ನು ರಚಿಸಬೇಕು, ಅವನ್ನೆಲ್ಲ ಮುಂದೆ ನಡೆಯುವ ಸಭೆಗಳಲ್ಲಿ ಮಾಡುತ್ತೇವೆ,” ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಈ ಸಂಧರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಗೌರವ ಅದ್ಯಕ್ಷರಾದ ದೊಡ್ಡಮಠದ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು, ಜವೇನಹಳ್ಳಿ ಮಠದ ಪೂಜ್ಯ ಸಂಗಮೇಶ್ವರ ಸ್ವಾಮಿಗಳು, ಕಿರಿಕೊಡ್ಲಿ ಮಠದ ಪೂಜ್ಯ ಮಹಂತ ಸ್ವಾಮಿಗಳು, ತಣ್ಣೀರು ಹಳ್ಳ ಮಠದ ಪೂಜ್ಯ ವಿಜಯಕುಮಾರ ಸ್ವಾಮಿಗಳು, ಪೂಜ್ಯ ರುದ್ರಮುನಿ ಸ್ವಾಮಿಗಳು ಹಾಗೂ ಪೂಜ್ಯ ಸಿದ್ದರಾಮೇಶ್ವರ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯ ಅದ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭ ಜಿಲ್ಲಾದ್ಯಕ್ಷರಾದ ನವಿಲೆ ಪರಮೇಶ್ ರವರು ವಹಿಸಿದ್ದರು.

ಈ ಸಂಧರ್ಭದಲ್ಲಿ ಪ್ರದಾನ ಕಾರ್ಯದರ್ಶಿ ರವಿಕುಮಾರ, ಉಪಾದ್ಯಕ್ಷರಾದ ಯತೀಶ, ಖಜಾಂಚಿ ಸುರೇಶಕುಮಾರ, ಬೇಲೂರು ತಾಲ್ಲೂಕು ಅದ್ಯಕ್ಷರಾದ ಅಡಗೂರು ಬಸವರಾಜು, ಅಲೂರು ತಾಲ್ಲೂಕು ಅದ್ಯಕ್ಷರಾದ ಅಜಿತ, ಬಸವ ಬಳಗದ ಯು.ಎಸ್. ಬಸವರಾಜು, ಪ್ರದಾನ ಕಾರ್ಯದರ್ಶಿ ಎಚ್.ವಿ. ಹೇಮಂತಕುಮಾರ, ರಾಜ್ಯ ಘಟಕದ ನಾಗರತ್ನ, ನಿರ್ದೇಶಕರುಗಳಾದ ಗೀತಾ ಶಿವಕುಮಾರ, ಶೋಭನ್ ಬಾಬು, ಅದ್ದೂರಿ ಕುಮಾರ, ನಂದೀಶ, ಯುವಸೇನೆಯ ಪ್ರದಾನ ಕಾರ್ಯದರ್ಶಿ ಅವಿನಾಶ ಜಿ.ಎಸ್, ಧರ್ಮಣ್ಣ, ಅರಕಲಗೂಡಿನ ಕೆ.ಕೆ. ಚಂದ್ರಶೇಖರ, ಮನೋಜ ಮಡಬಲು, ಮದನ್, ಕಟ್ಟಾಯ ಶಿವಕುಮಾರ ಹಾಗೂ ಎಲ್ಲಾ ತಾಲ್ಲೂಕಿನ ಮಹಿಳಾ ಘಟಕ, ಯುವ ಘಟಕ, ತಾಲ್ಲೂಕು ನಿರ್ದೇಶಕರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.