ಭಾಲ್ಕಿ
‘ಬಸವ ಸಂಸ್ಕೃತಿ ಅಭಿಯಾನ’ದ ಹೆಸರನ್ನು ‘ಲಿಂಗಾಯತ ಧರ್ಮ ಅಭಿಯಾನ’ ಎಂದು ಬದಲಾಯಿಸುವಂತೆ ಬೇಡಿಕೆ ಬಂದಿದೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರಿಗೆ ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೀದರ ರಾಷ್ಟ್ರೀಯ ಬಸವದಳದ ಶರಣರು ಬುಧವಾರ ಮನವಿ ಪತ್ರವನ್ನು ಸಲ್ಲಿಸಿದರು.
ಅಭಿಯಾನದಲ್ಲಿ ‘ಲಿಂಗಾಯತ ಧರ್ಮ ಮಾನ್ಯತೆ’ಯ ವಿಷಯವನ್ನು ಮುನ್ನೆಲೆಗೆ ತರುವಂತೆ ಕೋರಲಾಗಿದೆ.