ಸಮಾರೋಪ ಸಮಾರಂಭಕ್ಕೆ ಸಹಸ್ರಾರು ಜನರನ್ನು ಸೇರಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು
ಬೆಂಗಳೂರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭವನ್ನು ಅಕ್ಟೋಬರ್ ಒಂದರಿಂದ ಅಕ್ಟೋಬರ್ ಐದಕ್ಕೆ ಮುಂದೂಡಲು ತೀರ್ಮಾನಿಸಲಾಗಿದೆ.
ಇಂದು ನಗರದ ನಿಜಗುಣ ಜಂಗಮ ಮಠದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೊಟ ಹಾಗೂ ಬಸವ ಪರ ಸಂಘಟನೆಗಳ ಪ್ರಮುಖರು ಈ ನಿರ್ಧಾರ ತೆಗೆದುಕೊಂಡರು. ಅಕ್ಟೋಬರ್ 1 ಮಹಾನವಮಿ (ನವರಾತ್ರಿ), ಅಕ್ಟೋಬರ್ 2 ವಿಜಯದಶಮಿ ಹಾಗೂ ಗಾಂಧಿ ಜಯಂತಿ ಇರುವ ಕಾರಣದಿಂದ ದಿನಾಂಕ ಬದಲಾಯಿಸುವುದು ಅನಿವಾರ್ಯವಾಯಿತೆಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರೊಬ್ಬರು ಹೇಳಿದರು.

ಸಮಾರೋಪ ಸಹಸ್ರಾರು ಜನರನ್ನು ಸೇರಿಸುವ ತೀರ್ಮಾನವಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರುಗಳಂತಹ ಸಮೀಪ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ, ರಾಜ್ಯದ ಉಳಿದ ಜಿಲ್ಲೆಗಳಿಂದಲೂ ಬಸವಭಕ್ತರನ್ನು ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಲಾಗುವುದು. ಆದರೆ ಕಾರ್ಯಕ್ರಮದ ಸ್ಥಳ ಇನ್ನೂ ನಿಗದಿಯಾಗಿಲ್ಲ, ಎಂದು ಅವರು ಹೇಳಿದರು.
ಇಂದಿನ ಸಭೆಯಲ್ಲಿ ವಿವಿಧ ಮಠಾಧೀಶರು, ಸಂಘಟನೆಗಳ ಪ್ರಮುಖರು, ಸದಸ್ಯರು ಸೇರಿದಂತೆ 120 ಜನ ಭಾಗವಹಿಸಿದ್ದರು.
ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಗದಗ, ಡಾ.ಬಸವಲಿಂಗ ಪಟ್ಟದೇವರು ಭಾಲ್ಕಿ, ಡಾ.ಪಂಡಿತ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ, ಡಾ.ಗಂಗಾ ಮಾತಾಜಿ ಕೂಡಲಸಂಗಮ, ಪೂಜ್ಯ ಶಿವರುದ್ರ ಸ್ವಾಮೀಜಿ ಬೆಂಗಳೂರು, ಪೂಜ್ಯ ಇಮ್ಮಡಿ ನಿಜಗುಣ ಸ್ವಾಮೀಜಿ ಬೆಂಗಳೂರು, ಡಾ.ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ, ಪೂಜ್ಯ ನಂಜುಂಡ ಸ್ವಾಮಿಜಿ ಬೆಂಗಳೂರು, ಪೂಜ್ಯ ಸಿದ್ದಲಿಂಗ ಸ್ವಾಮೀಜಿ ನೆಲಮಂಗಲ, ಪೂಜ್ಯ ಪ್ರಭು ಚನ್ನಬಸವ ಸ್ವಾಮೀಜಿ ಅಥಣಿ, ಪೂಜ್ಯ ಶಿವಕುಮಾರ ಸ್ವಾಮೀಜಿ ಹುಲಸೂರು, ಪೂಜ್ಯ ಗುರುಬಸವ ಪಟ್ಟದ್ದೇವರು, ಭಾಲ್ಕಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವಾರು ಪೂಜ್ಯರು ಭಾಗವಹಿಸಿದ್ದರು.

ಎಸ್. ಎಂ. ಜಾಮದಾರ, ಗೊ.ರು. ಚನ್ನಬಸಪ್ಪ, ಕೆ. ವೀರೇಶ, ಎಸ್. ಎಂ. ಸುರೇಶ, ಬಸವರಾಜ ರೊಟ್ಟಿ, ಬಸವರಾಜ ಧನ್ನೂರ, ಕೃಪಾಶಂಕರ, ಪ್ರೊ. ವೀರಭದ್ರಯ್ಯ, ಬಸನಗೌಡ ಹರನಾಳ, ನಿಜಗುಣಮೂರ್ತಿ, ಪ್ರಭುಲಿಂಗ ಮಹಾಗಾಂವಕರ, ನಾಗೇಂದ್ರಪ್ಪ ಕಲಬುರಗಿ, ಮುಕ್ತಾ ಕಾಗಲಿ ಮತ್ತಿತರ ಪ್ರಮುಖರು ಇದ್ದರು.
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವ ಪ್ರತಿಷ್ಠಾನ, ಬಸವಪರ ಮಹಿಳಾಪರ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಸದಸ್ಯರು ಪಾಲ್ಗೊಂಡಿದ್ದರು.
ಲಿಂಗಾಯತ ಸ್ವತಂತ್ರ ಧರ್ಮದ ರ್ಯಾಲಿ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನಡೆದರೂ ಬೆಂಗಳೂರಿನಲ್ಲಿ ನಡೆಯಲಿಲ್ಲ , ಈಗ ಬಸವ ಸಂಸ್ಕ್ರತಿ ಅಭಿಯಾನ ಸಮಾರೋಪ ಬೆಂಗಳೂರಲ್ಲಿ ನಡೆಯುತ್ತಿರುವುದು ಖುಷಿಯ ವಿಚಾರ, ಇದು ರಾಷ್ರಮಟ್ಟದಲ್ಲಿ ಗಮನ ಸೆಳೆಯುತ್ತೆ, ರಾಜ್ಯಾದ್ಯಂತ ಬಸವ ಭಕ್ತರು ಸೇರುವ ಹಾಗೆ ಕರೆ ಕೊಡಲಿ ಕಾರ್ಯಕ್ರಮ ನಡೆಯಲಿ. ರಾಜಧಾನಿಯಲ್ಲಿ ಲಿಂಗಾಯತ ಅಸ್ಮಿತೆ ಸಂಘಟನೆ ಹೆಚ್ಚು ಬೆಳೆಯಲಿ.
ಈ ಅಕ್ಟೋಬರ್ 5ರಂದು ನಡೆಯುವ ಸಮಾರೋಪ ಸಮಾರಂಭವು ನಮ್ಮ ಯುವಕರನ್ನು ಸಮಾಜವನ್ನು ಕಣ್ತೆರೆಯುವಹಾಗೆ ಪ್ರಭಾವಪೂರ್ಣವಾಗಿ ನಡೆಯಲಿ. ನಮ್ಮ ಅಸ್ಮಿತೆ ಎನಎಂಬುದನ್ನು ಕುಹಕಿಗಳಿಗೆ ಚುಚ್ಚುವಂತಾಗಬೇಕು, ವಂದನೆಗಳೊಂದಿಗೆ.
ಹಡಪದ ಸ್ವಾಮೀಜಿಯವರು ಬಂದರೆ ಚೆನ್ನಾಗಿರುತ್ತೆ
ಹಳೆ ಮೈಸೂರಿನ ಭಾಗದಲ್ಲಿ ಹಡಪದ ಜನ ಜಾಸ್ತಿ ಇದ್ದರೆ
ಜೈ ಲಿಂಗಾಯತ
ಬಸವ ಸಂಸ್ಕೃತಿ ಅಭಿಯಾನ ದ. ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಯಶಸ್ವಿಯಾಗಿ ನಡೆಸುವ ಎಂ. ಬಿ.ಪಾಟೀಲ್ ಮನಃಪೂರ್ವಕವಾಗಿ ಸಹಕರಿಸುತ್ತಿದ್ದಾರೆ. ಶ್ರೀಯುತರ ಸೇವೆ ಬಸವ ತತ್ವದ ಪ್ರಸಾರಕ್ಕೆ ನಿರಂತರವಾಗಿ ಮುಂದುವರೆಯುತ್ತಿದೆ. ಅದಕ್ಕಾಗಿ ಎಂ. ಬಿ.ಪಾಟೀಲ ರವರಿಗೆ ಎಲ್ಲ ಬಸವಾಭಿಮಾನಿಗಳ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದೇನೆ.
ಬೆಂಗಳೂರಿನಲ್ಲಿ, ” ಬಸವಸಂಸ್ಕೃತಿ” ಅಭಿಯಾನದ ಸಮಾರೋಪಗೊಳ್ಳುವ ಈ ಅಭಿಯಾನಕ್ಕೆ ನಾವೆಲ್ಲರೂ ಶ್ರಮಿಸೊಣ.