ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನ ಸಮಾರೋಪಕ್ಕೆ ದುಡಿದು ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿಗೆ ಕಾರಣರಾದ ಎಲ್ಲ ಶರಣ ಶರಣೆಯರಿಗೆ ನಗರದಲ್ಲಿ ಭಾನುವಾರ ಸತ್ಕಾರ ಏರ್ಪಡಿಸಲಾಗಿದೆ.
ಬೆಳಿಗ್ಗೆ 10.30ಕ್ಕೆ ರಾಜಾಜಿನಗರದ ಬಸವ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಪೂಜ್ಯ ಡಾ. ಮಾತೆ ಗಂಗಾದೇವಿಯವರು ವಹಿಸುವರು.
ರಾಷ್ಟ್ರೀಯ ಬಸವದಳ ಹಾಗೂ ಜಾಗತೀಕ ಲಿಂಗಾಯತ ಮಹಾಸಭಾ ಆಯೋಜಿಸಿರುವ ಕಾರ್ಯಕ್ರಮ ಪೂಜ್ಯ ಬಸವಯೋಗಿ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆಯಲಿದೆ.
ಪ್ರಾರ್ಥನೆಯನ್ನು ಪೂಜ್ಯ ಪ್ರಭಾಲಿಂಗ ಸ್ವಾಮೀಜಿಯವರು ನಡೆಸಿಕೊಡಲಿದ್ದಾರೆ.
ಸಮಾರಂಭದಲ್ಲಿ ವಚನ ಜ್ಯೋತಿ ಬಳಗದ ಮಕ್ಕಳ ವಚನ ಮೇಳ ಆಹ್ವಾನ ಪತ್ರಿಕೆ ಬಿಡುಗಡೆಯಾಗಲಿದೆ.
