ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳ ಜೊತೆ ನಡೆಯುತ್ತಿರುವ ಲಿಂಗಾಯತ ಮಠಾಧಿಪತಿಗಳ ಸಂವಾದ ಗಮನ ಸೆಳೆಯುತ್ತಿದೆ.
ಸೆಪ್ಟೆಂಬರ್ 2ರಂದು ಕಲಬುರ್ಗಿಯಲ್ಲಿ ಒಂದು ಮಗು ಕೇಳಿದ ಪ್ರಶ್ನೆ ಈಗ ಎಲ್ಲೆಡೆ ವೈರಲ್ ಆಗಿದೆ:
“ಕರ್ನಾಟಕದಲ್ಲಿ ಬಸವಣ್ಣನವರಿಗಿಂತ ದೊಡ್ಡವರು ಯಾರೂ ಇಲ್ಲ, ಕಲ್ಯಾಣ ಕರ್ನಾಟಕದಲ್ಲಿ ಪೂಜ್ಯ ಶರಣಬಸಪ್ಪ ಅಪ್ಪನವರಿಗಿಂತ ದೊಡ್ಡವರು ಯಾರೂ ಇಲ್ಲ. ಅಂತವರು ಲಿಂಗೈಕ್ಯರಾದ ಮೇಲೆ ಅವರ ಮೇಲೆ ಪಾದವಿಡುವುದು ಸರಿಯೇ?”
ಇತ್ತೀಚೆಗೆ ವೀರಶೈವ ಸ್ವಾಮೀಜಿಯವರೊಬ್ಬರು ಲಿಂಗೈಕ್ಯರಾಗಿದ್ದ ಶರಣಬಸಪ್ಪ ಅಪ್ಪನವರ ದೇಹದ ಮೇಲೆ ಪಾದವಿರಿಸಿದ್ದ ಚಿತ್ರ ಒಂದು ದೊಡ್ಡ ಚರ್ಚೆ ಮತ್ತು ಅಸಮಾಧಾನ ಹುಟ್ಟಿಸಿತ್ತು.
ಇದೊಂದು ಸೂಕ್ಷ್ಮ ಪ್ರಶ್ನೆ ಎಂದು ಹೇಳಿ ಭಾಲ್ಕಿ ಶ್ರೀಗಳು ಮೊದಲು ಉತ್ತರಿಸಿದರು. ಆದರೆ ಪ್ರಶ್ನೆಗೆ ಪರಿಣಾಮಕಾರಿಯಾಗಿ, ಸ್ಪಷ್ಟವಾಗಿ ಉತ್ತರ ನೀಡಿದವರು ಸಾಣೇಹಳ್ಳಿ ಶ್ರೀಗಳು.
“ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆಯಿದೆ, ಸತ್ತ ಮೇಲೆ ತಲೆಯ ಮೇಲೆ ಪಾದ ಇಡೋದು ಅವಿವೇಕದ ಪರಮಾವಧಿ. ಅದನ್ನ ಯಾರೇ ಮಾಡಿದರು ವಿರೋಧಿಸಬೇಕು, ಪ್ರತಿಭಟನೆ ಮಾಡಬೇಕು,” ಎಂದು ಹೇಳಿದರು.