ಬೆಳಗಾವಿ
ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು.
‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್ ಮಾಡುತ್ತಿರುವುದು ಬೇಸರದ ಸಂಗತಿ,’ ಎಂದು ಕನ್ನೇರಿ ಸ್ವಾಮಿಯ ಹೆಸರು ಹೇಳದೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
‘ಸಮಾಜ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ನಾವು ನೋಡಬೇಕಾಗಿದೆ. ಜಾತ್ಯತೀತ ನಿಲುವಿನ ಮೇಲೆ ನಾವು ನಿಲ್ಲಬೇಕು. ಧರ್ಮದಿಂದ ಜೀವನ ನಡೆಸಬೇಕು’ ಎಂದರು.
ಅಕ್ಷರ ದಾಸೋಹ, ಅನ್ನ ದಾಸೋಹ ಹಾಗೂ ಆರೋಗ್ಯ ದಾಸೋಹ ಕಾರ್ಯಗಳಿಗೆ ನಮ್ಮ ಮಠ ಮಾನ್ಯಗಳು ಪ್ರಸಿದ್ಧಿ ಪಡೆದಿವೆ. ಮಠಗಳ ಕಾರ್ಯವನ್ನು ಸರ್ಕಾರ ಅನುಸರಿಸುತ್ತಿದ್ದು, ಸರ್ಕಾರಕ್ಕೆ ಸ್ಫೂರ್ತಿಯಾಗಿದೆ, ಎಂದು ಹೇಳಿದರು.
‘ನಾಗನೂರು ಮಠದ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಾವು ಸಾಗುತ್ತಿದ್ದೇವೆ. ಕರ್ನಾಟಕ ಏಕೀಕರಣಕ್ಕೆ ಅವರ ಕೊಡುಗೆ ಅಪಾರ, ಸ್ವಾತಂತ್ರ್ಯ ಹೋರಾಟದಲ್ಲೂ ಅವರ ಶ್ರಮ ಸಾಕಷ್ಟಿದೆ’ ಎಂದು ಹೇಳಿದರು.
ಲಕ್ಷ್ಮೀ ಅವರನ್ನು ಮಠಾಧೀಶರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸನ್ನಿಧಾನವನ್ನು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗಿನ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ನೇತೃತ್ವವನ್ನು ನಾಗನೂರ ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಮುರುಘಾಮಠ್ ಧಾರವಾಡದ ಪೂಜ್ಯಶ್ರೀ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬೆಟ್ಟದಪುರ ಸಖೀಲಾಖ್ಯ ವಿರಕ್ತಮಠದ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ.ಬಸನಗೌಡ ಪಾಟೀಲ, ವಿಟಿಯು ಕುಲ ಸಚಿವರಾದ ಡಾ.ಪ್ರಸಾದ್ ರಾಮಪುರೆ, ಬಾಳಪ್ಪ ದೊಡ್ಡಬಂಗಿ, ಚನ್ನಪ್ಪ ನರಸಣ್ಣವರ, ಬಸಲಿಂಗಪ್ಪ ವಣ್ಣೂರ್, ಮುಂತಾದವರು ಉಪಸ್ಥಿತರಿದ್ದರು.

Is it time to introspect for the difference of openion by various swamiji’s and reclibrate the credintials to establish Lingayat samaj on the basis of Sanatan dharma and keep internal politics away from dharma jagaran and use of swamiji’s or pulling them in political cesspool by parties and personal benefits