ಅಭಿಯಾನ: ಉಪನ್ಯಾಸ ರೂಪಿಸಲು ಸಮಿತಿ ರಚಿಸಿ, ಅಭಿಪ್ರಾಯ ಸಂಗ್ರಹಿಸಿ

ನಿಜಾಚರಣೆ, ಜಾತಿಗಣತಿ, ಜಿಲ್ಲೆಗಳ ಸಮಸ್ಯೆ, ಲಿಂಗಾಯತಕ್ಕೆ ವಿರೋಧ – ಮುನ್ನೆಲೆಗೆ ಬರಲಿ

ರಾಯಚೂರು

ಬಸವ ಸಂಸ್ಕೃತಿ ಅಭಿಯಾನ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5 ರವರೆಗೆ ನಡೆಯುತ್ತಿರುವುದು ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದರ ಯಶಸ್ಸಿಗಾಗಿ ಎಲ್ಲಾ ಬಸವಪರ ಸಂಘಟನೆಗಳ ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕಗಳ ಜೊತೆ ಕೈಜೋಡಿಸಿ ಜುಲೈ ತಿಂಗಳಿಂದಲೇ ನಾವೆಲ್ಲ ಕೆಲಸ ಪ್ರಾರಂಭಿಸಿದ್ದೇವೆ.

ರಾಯಚೂರು ಜಿಲ್ಲೆಯಲ್ಲಿ ಜುಲೈ 23ರ ಜಿಲ್ಲಾ ಪೂರ್ವಭಾವಿ ಸಭೆಯ ನಂತರ, ಎಲ್ಲ ತಾಲೂಕ ಕೇಂದ್ರಗಳಲ್ಲಿ, ಹೋಬಳಿ ಕೇಂದ್ರಗಳಲ್ಲಿ, ದೊಡ್ಡ ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಬೇರೆ ಬೇರೆ ಗುಂಪುಗಳನ್ನು ಮಾಡಿಕೊಂಡು, ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಇಂತಹ ಸಂಧರ್ಭದಲ್ಲಿ ಅಭಿಯಾನದ ಚರ್ಚೆಯ ವಿಷಯಗಳು, ವಿಷಯ ಮಂಡನೆ ಮಾಡುವವರ ಪಟ್ಟಿಯನ್ನು ಲಿಂಗಾಯತ ಮಠಾಧೀಶರ ಒಕ್ಕೂಟ ಬಿಡುಗಡೆ ಮಾಡಿದೆ. ಅದನ್ನು ನೋಡಿದಾಗ ನಮಗೆ ಅನಿಸಿದ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಪ್ರತಿ ಜಿಲ್ಲೆಯಲ್ಲಿ ಧರ್ಮಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಬೇರೆ ಬೇರೆಯೇ ಇವೆ. ವಿಷಯಗಳನ್ನು ಕೊಡುವಾಗ ಜಿಲ್ಲೆಯ ಅಧ್ಯಕ್ಷರ ಅಭಿಪ್ರಾಯ, ಮಾಹಿತಿ ಪಡೆಯಬೇಕಿತ್ತು ಹಾಗೂ ಇಂದಿನ ಲಿಂಗಾಯತರು ಎದುರಿಸುತ್ತಿರುವ ವಿರೋಧಗಳನ್ನು, ಸಮಸ್ಯೆಗಳನ್ನು ಅತೀ ಸೂಕ್ಷ್ಮವಾಗಿ ಜಾಣತನದಿಂದ ಅವಲೋಕಿಸಿ ವಿಷಯಗಳನ್ನು ನಿರ್ಧರಿಸಬೇಕಿತ್ತು.

ಪ್ರತಿ ಜಿಲ್ಲೆಯಲ್ಲಿ ಧರ್ಮಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಬೇರೆ ಬೇರೆಯೇ ಇವೆ.

ಉದಾಹರಣೆಗೆ: ನಮ್ಮ ಜಿಲ್ಲೆಯ ತಾಲೂಕುಗಳಲ್ಲಿ ಸಭೆ ಮಾಡುವಾಗ ಕೆಲವೆಡೆ ಹಳ್ಳಿಯಿಂದ ಬಂದ ಹಿರೇಮಠದ ಸ್ವಾಮೀಜಿಗಳು ಆಕ್ಷೇಪಣೆ ಮಾಡಿದರು. ಆಗ ಆವರಿಗೆ ನಾವು ನರಗುಂದದ ಚಿಂತಕ ನೀಲಗಂಗಯ್ಯ ಪೂಜಾರ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಸಿದ ಮಾತುಗಳನ್ನೇ ಹೇಳಿದೆವು. ಹಿರೇಮಠದ ಅಯ್ಯನವರು ಬಸವ ಸಂಸ್ಕೃತಿಯ ಚರಜಂಗಮರ ವಾರಸುದಾರರು, ಲಿಂಗದೀಕ್ಷೆ ನೀಡಲು, ಲಿಂಗಪೂಜಾ ವಿಧಾನ ತಿಳಿಸಲು ಖಾಯಂ ಆಗಿ ವಾಸಿಸಿದ ಅಂದಿನ ಜಂಗಮರೇ ಇಂದಿನ ಹಿರೇಮಠಗಳು.

ಆದರೆ ಕಾಲಾನುಕ್ರಮದಲ್ಲಿ ಅವರು ತಮ್ಮ ಅಸ್ಮಿತೆ ಮರೆತರು, ಹಾಗಾಗಿ ಕೆಲವು ಪೀಠಗಳವರು ಆ ಮಠಗಳನ್ನು ಭಾಗ ಮಾಡಿಕೊಂಡರು ಎಂದು ತಿಳಿಸಿದಾಗ ಅವರು ಯಾವುದೇ ವಿರೋಧ ಮಾಡಲಿಲ್ಲ.

ಇಂತಹ ಸಂಧರ್ಭದಲ್ಲಿ ಈ ರೀತಿಯ ಸೂಕ್ಷ್ಮ ವಿಷಯಗಳ ಪ್ರಸ್ತಾಪ, ವಿವರಣೆ ಜನಮಾನಸಕ್ಕೆ ತಲುಪಿಸಬೇಕಾಗಿದೆ. ಹಾಗೂ ಆಯಾ ಜಿಲ್ಲೆಯಲ್ಲಿಯೇ ಬೇಕಾದಷ್ಟು ಸಾಹಿತಿಗಳು, ಅನುಭಾವಿಗಳು ಇದ್ದಾರೆ, ಒಂದಷ್ಟು ಚರ್ಚಿಸಿ ಪಟ್ಟಿಯನ್ನು ತಯಾರಿಸಬೇಕಾಗಿತ್ತು.

ನಾವು ಮಾಡುತ್ತಿರುವ ಪ್ರತಿ ಸಭೆಗಳಲ್ಲಿ ಕೇಳಿ ಬಂದ ಪ್ರಶ್ನೆ ಎಂದರೆ, ಮುಂದಿನ ಜಾತಿಗಣತಿಯಲ್ಲಿ ಏನು ಬರೆಸಬೇಕು ಎನ್ನುವದು, ಇದರ ಬಗ್ಗೆ ಪ್ರತಿ ಜಿಲ್ಲೆಗಳಲ್ಲೂ ಲಿಂಗಾಯತದ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವಿದೆ.

ನಿಜಾಚರಣೆಗಳ ಬಗ್ಗೆ ಹೆಚ್ಚು ಚರ್ಚೆಯ ಅಗತ್ಯವಿದೆ.

ನಿಜಾಚರಣೆಗಳ ಬಗ್ಗೆ ಹೆಚ್ಚು ಚರ್ಚೆಯ ಅಗತ್ಯವಿದೆ. ಪ್ರತಿ ದಿನವೂ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಬೇಕಾಗಿರುವುದರಿಂದ ವಿಷಯಗಳು ಪುನರಾವರ್ತನೆ ಆಗುತ್ತವೆ, ಅದಕ್ಕೆ ವಿಷಾದ ಬೇಡ. ಅಲ್ಲಿ ಹೊಸ ಜನರೇ ಇರುತ್ತಾರೆ, ಅವರಿಗೆ ತಿಳಿಸಬೇಕು.

ಇನ್ನು ಉಪನ್ಯಾಸಕರ ಪಟ್ಟಿ ನೋಡಿದರೆ ಲಿಂಗಾಯತ ಧರ್ಮಕ್ಕೆ ವಿರುದ್ಧ ಮನಸ್ಸುಳ್ಳವರಿಗೆ ಅವಕಾಶ ನೀಡಲಾಗಿದೆ ಇದನ್ನು ಗಮನಿಸಬೇಕು. ನಮಗೆ ಅವರ ವಿದ್ವತ್ ಮುಖ್ಯವಲ್ಲ, ಬದ್ಧತೆ ಮುಖ್ಯ.

ಉಪನ್ಯಾಸಕರ ಪಟ್ಟಿಯಲ್ಲಿ ಲಿಂಗಾಯತ ಧರ್ಮಕ್ಕೆ ವಿರುದ್ಧ ಮನಸ್ಸುಳ್ಳವರಿಗೆ ಅವಕಾಶ ನೀಡಲಾಗಿದೆ

ಇವೆಲ್ಲ ಕಾರಣಗಳಿಂದ ಮತ್ತೊಮ್ಮೆ ಈ ವಿಷಯಗಳ ಪಟ್ಟಿಯನ್ನು ಹಾಗೂ ಬೋಧಕರ ಪಟ್ಟಿಯನ್ನು ಪರಾಮರ್ಶೆ ಮಾಡಲು ಕೂಡಲೇ ಒಂದು ಸಮಿತಿ ಮಾಡಬೇಕೆಂದು ಕೋರಿಕೆ. ಆ ಸಮಿತಿ ಜಿಲ್ಲೆಯ ಅಧ್ಯಕ್ಷರ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು.

ಈ ವಿಷಯವನ್ನು ವಿನಯಪೂರ್ವಕವಾಗಿ ಮಠಾಧೀಶರ ಒಕ್ಕೂಟ ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯ ಹಿರಿಯರಲ್ಲಿ ವಿನಂತಿಸುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
3 Comments
  • ಮೇಲೆ ನೀವು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ನನ್ನ ಸಂಪೂರ್ಣ ಬೆಂಬಲವಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಅಲ್ಲಿರುವ ಲಿಂಗಾಯತರು ವಿಭಿನ್ನ ನಿಜಾಚರಣೆಗಳನ್ನು ಹೊಂದಿದ್ದಾರೆ. ಆದರೆ ಇವೆಲ್ಲ ಆಚರಣೆಗಳು ವೀರಶೈವವನ್ನು ವೈಭವೀಕರಿಸುವ ಆಚರಣೆಗಳೇ ಆಗಿವೆ. ಉದಾಹರಣೆಗೆ ಮದುವೆ ಸಮಾರಂಭದಲ್ಲಿ ಐದು ಪೀಠಗಳನ್ನು ಪ್ರತಿನಿಧಿಸುವ ಐದು ಕಲಶಗಳನ್ನು ಇತ್ತು ಪೂಜಿಸುವುದು. ಸಪ್ತಪದಿ, ಅರುಂಧತಿ ನಕ್ಷತ್ರ ತೋರಿಸುವುದು ಇತ್ಯಾದಿ.
    ಬಾಲ್ಯದಿಂದ ಹಿಡಿದು ಮರಣದವರೆಗೆ ಇರುವ ಎಲ್ಲಾ ಆಚರಣೆಗಳನ್ನು ಸರಳೀಕರಿಸಿ, ವೈದಿಕ ಅಥವಾ ಪುರೋಹಿತಶಾಹಿಯ ಆಚರಣೆಗಳನ್ನು ತ್ಯಜಿಸಿ, ಶರಣ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂಥ ಆಚರಣೆಗಳನ್ನು, ಚರ್ಚಿಸಿ(ಅನುಭವ ಮಂಟಪದಂತೆ) ಅನುಷ್ಠಾನ ಗೊಳಿಸಬೇಕಿದೆ.

    ಇಂಥ ಆಚರಣೆಗಳು ಶರಣ ಸಂಸ್ಕೃತಿಯನ್ನು ಗಟ್ಟಿ ಗೊಳಿಸುತ್ತವೆ. ಇದರಲ್ಲಿ ಎಲ್ಲ ವಿರಕ್ತ ಮಠಗಳ ಜಂಗಮರ ಹಾಗೂ ಅನುಭಾವಿ ಧುರೀಣರ ಪಾಲು ಮಹತ್ವದ್ದು.

    ಇನ್ನು ಬಸವ ಮೀಡಿಯಾದವರು ತೋರಿಸುತ್ತಿರುವ ಪ್ರಬುದ್ಧತೆ ಪ್ರಶಂಸನೀಯ.
    ತಾಲೂಕು ಮಟ್ಟದಲ್ಲಿ ಸಂಘಟನೆ ಹಾಗೂ ಜನರ ಪಾಲ್ಗೊಳ್ಳುವಿಕೆ ಸರಳವಾಗಿ ಆಗಬಹುದು. ಆದರೆ ಬೆಂಗಳೂರಿನಲ್ಲಿ ಲಿಂಗಾಯತರ ಸಂಘಟನೆ ಅಷ್ಟೊಂದು ಸಮರ್ಪಕ ಇಲ್ಲ ಎಂದು ನನಗನಿಸುತ್ತಿದೆ. ಆದ್ದರಿಂದ ನೀವು ಇಲ್ಲಿಯ ಸಂಘಟಕರು ಹೇಗೆ ಎಲ್ಲ ಲಿಂಗಾಯತರನ್ನು ತಲುಪಬಹುದು ಎಂಬುದನ್ನು ಗಮನಿಸಬೇಕೆಂದು ನನ್ನ ಪ್ರಾರ್ಥನೆ.
    ~ ಅಶೋಕ ಕೋರಳ್ಳಿ
    ಬೆಂಗಳೂರು
    9900836540

  • ಈ ವಿಚಾರವಾಗಿ ಬಹಳ ಗಂಭೀರವಾಗಿ ಪರಿಗಣಿಸಬೇಕು ಪಾಂಡಿತ್ಯಕ್ಕಿಂತೆ ತತ್ವ ಬದ್ದತೆ ಮುಖ್ಯ.

  • ಈ ವಿಚಾರವಾಗಿ ಬಹಳ ಗಂಭೀರವಾಗಿ ಪರಿಗಣಿಸಬೇಕು ಪಾಂಡಿತ್ಯಕ್ಕಿಂತೆ ತತ್ವ ಬದ್ದತೆ ಮುಖ್ಯ.

Leave a Reply

Your email address will not be published. Required fields are marked *