ಅಭಿಯಾನ: ಉಪನ್ಯಾಸದ ವಿಷಯಗಳ ಮರುಚಿಂತನೆ ಅಗತ್ಯ

ಅನೇಕ ವಿಷಯಗಳು ಎದ್ದಿರುವ ಲಿಂಗಾಯತರನ್ನು ಮಲಗಿಸುವಂತಿವೆ.

ಬೆಂಗಳೂರು

ಬಸವ ಸಂಸ್ಕೃತಿ ಅಭಿಯಾನ ಎಲ್ಲಾ ಲಿಂಗಾಯತ ಸ್ವಾಮಿಗಳು ಹಾಗೂ ಬಸವ ಸಂಘಟನೆಗಳು ಸೇರಿ ನಡೆಸುತ್ತಿರುವ ಬೃಹತ್ ಕಾರ್ಯಕ್ರಮ. ಸಮಾಜದಲ್ಲಿ ಬಸವ ಪ್ರಜ್ಞೆ ಬಿತ್ತಲು, ಲಿಂಗಾಯತ ಧರ್ಮ ಪುನರುತ್ಥಾನಗೊಳಿಸಲು ಇದೊಂದು ಚಾರಿತ್ರಿಕ ಅವಕಾಶ.

ರಾಜ್ಯದ ೩೨ ಜಿಲ್ಲೆಗಳಲ್ಲಿ ನಡೆಯಲಿರುವ ಈ ಆಂದೋಲನಕ್ಕೆ ನಾಡಿನ ಲಿಂಗಾಯತ ಸಮಾಜವು ಸಂಪೂರ್ಣ ಬೆಂಬಲ ನೀಡುತ್ತಿದೆ. ಇಂತಹ ಅವಕಾಶ-ಜನಬಲ ಮತ್ತೊಮ್ಮೆ ಬರುವುದು ಕಷ್ಟ. ಬಸವ ತತ್ವದ ಮೇಲೆ, ವಚನ ಸಾಹಿತ್ಯದ ಮೇಲೆ, ಲಿಂಗಾಯತದ ಮೇಲೆ ನಡೆಯುತ್ತಿರುವ ವೈದಿಕರ ದಾಳಿಗೆ ಇದು ಲಿಂಗಾಯತ ಸಮಾಜವು ನೀಡುತ್ತಿರುವ ಉತ್ತರವಾಗಿದೆ.

ಅಭಿಯಾನದಲ್ಲಿ ಹಲವಾರು ಕಾರ್ಯಕ್ರಮಗಳಿದ್ದರೂ ಅದರ ಕೇಂದ್ರಬಿಂದುವೆಂದರೆ ವೇದಿಕೆಯಿಂದ ನಡೆಯಲಿರುವ ಎರಡು ಉಪನ್ಯಾಸಗಳು. ಬಸವ ತತ್ವವನ್ನು, ಲಿಂಗಾಯತ ಧರ್ಮವನ್ನು, ನಿಜಾಚರಣೆಗಳನ್ನು, ಸಮಾಜದ ಮುಂದಿರುವ ಸವಾಲುಗಳನ್ನು ಲಕ್ಷಾಂತರ ಜನರ ಮುಂದಿಡುವ ಅಪರೂಪದ ಅವಕಾಶ.

ಅಪ್ರಸ್ತುತ ವಿಷಯಗಳು

ಮೊನ್ನೆ ಅಭಿಯಾನದ ಉಪನ್ಯಾಸಗಳ ಪಟ್ಟಿಯನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೊಟ ಬಿಡುಗಡೆ ಮಾಡಿತು. ಅದನ್ನು ನೋಡಿದಾಗ ಯಾರೋ ಅವಸರದಲ್ಲಿ ಅಥವಾ ಸಮಯ, ಸಂದರ್ಭದ ಅರಿವಿಲ್ಲದೆ ಈ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ ಎಂದು ಅನಿಸಿತು. ಬಹಳಷ್ಟು ವಿಷಯಗಳು ಸಪ್ಪೆಯಾಗಿವೆ. ಕೆಲವು ವಿಷಯಗಳು ಅಪ್ರಸ್ತುತ, ಅಸಂಬದ್ಧವೂ ಆಗಿವೆ. ಉಪನ್ಯಾಸದ ವಿಷಯಗಳನ್ನು ನೋಡಿ ನಮ್ಮ ಉತ್ಸಾಹ ಸರಕ್ಕನೆ ತಣ್ಣಗಾಗಿದೆ ಎಂದು ಕೇಳಿಬರುತ್ತಿರುವ ಮಾತು.

ಯಾರೋ ಅವಸರದಲ್ಲಿ ಅಥವಾ ಸಮಯ, ಸಂದರ್ಭದ ಅರಿವಿಲ್ಲದೆ ಈ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ ಎಂದು ಅನಿಸಿತು.

ಇಲ್ಲಿ ಆಯ್ಕೆ ಮಾಡಿರುವ ಅನೇಕ ವಿಷಯಗಳಲ್ಲಿ ವಚನ ಪರಿಭಾಷೆ – ಬಸವ ಸ್ಪರ್ಶವೇ ಇಲ್ಲದಂತಾಗಿದೆ. ಕೆಲವು ಪ್ರವಚನಗಳ ಮಾಲೆಯಂತಿವೆ.

ಬಸವ ಸಂಸ್ಕೃತಿ ಅಭಿಯಾನವು ಪ್ರವಚನದ ಅಭಿಯಾನವಾಗಬಾರದು. “ದೇವ – ಮಾನವ’, ‘ಗೃಹಸ್ಥ ಧರ್ಮ’, ‘ಸೂತಕದ ವಿವರಣೆ’, ‘ಪಾಪ ಪುಣ್ಯ’ ಮುಂತಾದವು ಅಭಿಯಾನದಲ್ಲಿ ಚರ್ಚಿಸುವ ವಿಷಯಗಳೇ? ಇವುಗಳಲ್ಲಿ ವಚನ ಪರಿಭಾಷೆಯ ಸ್ಪರ್ಶವೂ ಕಾಣುವುದಿಲ್ಲ.

‘ಗೃಹಸ್ಥಾಶ್ರಮ’ ಎನ್ನುವುದು ವಚನ ಪರಿಭಾಷೆಯಲ್ಲ. ಇದು ಆಶ್ರಮ ಪರಿಭಾಷೆ. “ವಚನಕಾರ್ತಿಯರ ಜೀವನ ಮೌಲ್ಯಗಳು”, “ಶಿವಶರಣೆಯರ ಜೀವನಾದರ್ಶ” ಮುಂತಾದವು ಯಾವುದನ್ನು ಇಂಗ್ಲೀಷಿನಲ್ಲಿ ‘ಎಸೆನ್ಸಿಯಲಿಸ್ಟ್’ ಎನ್ನುತ್ತೇವೆಯೋ ಅದರ ಚೌಕಟ್ಟಿನಲ್ಲಿವೆ.

ಮಹಿಳೆಯರಿಗೆ ಒಂದು, ಪುರುಷರಿಗೆ ಮತ್ತೊಂದು ಎಂಬ ರೀತಿಯಲ್ಲಿ ಬಸವಾದಿ ಶರಣರು ಜೀವನ ಮೌಲ್ಯಗಳನ್ನು, ಜೀವನಾದರ್ಶಗಳನ್ನು ಬೋಧಿಸಿದರೆ? ಇವು ಪುರಷರಿಗೆ ಸಲ್ಲುವುದಿಲ್ಲವೋ? ಮಹಿಳೆಯರು ಮಾತ್ರ ಪಾಲಿಸಬೇಕಾದವು ಮೌಲ್ಯಗಳು, ಆದರ್ಶಗಳು ವಚನ ಸಂವಿಧಾನದಲ್ಲಿಲ್ಲ. ಮಹಿಳೆಯರನ್ನು ಚಾತುರ್ವರ್ಣದ ಸಂಕೋಲೆಯಿಂದ ಬಿಡುಗಡೆ ನೀಡಿದ ವಚನ ಸಂವಿಧಾನದಲ್ಲಿ ಲಿಂಗ ಭೇದದ ಲವಶೇಷವೂ ಕಾಣುವುದಿಲ್ಲ.

‘ಆಧ್ಯಾತ್ಮಿಕತೆ ಮತ್ತು ಅನನ್ಯತೆ’ ಎಂಬ ವಿಷಯವೊಂದಿದೆ. ಇದೇನಿದು? ಅಭಿಯಾನದಲ್ಲಿ ಇದು ಅಸಂಗತವಾಗಿ ಕಾಣುತ್ತದೆ. ‘ವ್ಯಕ್ತಿತ್ವ ವಿಕಾಸ’ ಎನ್ನುವುದು ಲಯನ್ಸ್ ಕ್ಲಬಿನಲ್ಲಿ, ರೋಟರಿ ಕ್ಲಬಿನಲ್ಲಿ ನಡೆಯುವ ಚರ್ಚೆ. ವಚನ ಸಂವಿಧಾನದಲ್ಲಿರುವುದು ‘ಸೂತಕದ ನಿರಾಕರಣೆ’ಯೇ ವಿನಾ ಅದರ ವಿವರಣೆಯಲ್ಲ. ‘ದೇವ–ಮಾನವ’ – ಏನಿದು ವಿಷಯ? ಬಸವ ಸಂವಿಧಾನವು ಮಾನವ ಜಗತ್ತಿಗೆ ಸಂಬಂಧಿಸಿದೆ ವಿನಾ ಯಾವುದೇ ದೇವ ಲೋಕಕ್ಕೆ ದಾರಿ ತೋರಿಸುವುದಿಲ್ಲ.

ನಿಜಾಚರಣೆಗಳ, ಸವಾಲುಗಳ ಸುಳಿವಿಲ್ಲ

ಇಂದು ಲಿಂಗಾಯತ ಧರ್ಮ ಬೆಳೆಯುತ್ತಿರುವುದು ನಿಜಾಚರಣೆಗಳ ಮೂಲಕ. ಅವುಗಳ ಬಗ್ಗೆ ಜನರಲ್ಲಿ ರಾಜ್ಯಮಟ್ಟದಲ್ಲಿ ಜಾಗೃತಿ ಮೂಡಿಸಲು ಅಭಿಯಾನಕ್ಕಿಂತ ಒಳ್ಳೆ ಅವಕಾಶ ಸಿಗುತ್ತದೆಯೇ? ಆದರೆ ಇಡೀ ಪಟ್ಟಿಯಲ್ಲಿ ನಿಜಾಚರಣೆಗಳ ಮೇಲೆ ಇರುವುದು ಒಂದೇ ಒಂದು ಉಪನ್ಯಾಸ.

ಇಡೀ ಪಟ್ಟಿಯಲ್ಲಿ ನಿಜಾಚರಣೆಗಳ ಮೇಲೆ ಇರುವುದು ಒಂದೇ ಒಂದು ಉಪನ್ಯಾಸ.

ಇಂದು ಲಿಂಗಾಯತವು ಅನೇಕ ಬಗೆಯ ವಿರೋಧ, ದಾಳಿಗಳನ್ನು ಒಳಗಿನಿಂದಲೂ, ಹೊರಗಿನಿಂದಲೂ ಎದುರಿಸುತ್ತಿದೆ. ಸಂಘಟಿತವಾಗಿ ಹಣಬಲ, ಅಧಿಕಾರ ಬಲ, ಬುಜಬಲದ ಮೂಲಕ ವೈದಿಕವು ಬಸವ ಸಂವಿಧಾನದ ಮೇಲೆ, ವಚನ ಸಾಹಿತ್ಯದ ಮೇಲೆ ದಾಳಿ ಮಾಡುತ್ತಿದೆ.

ಈ ದಾಳಿಗಳನ್ನು ಬಸವ ಅನುಯಾಯಿಗಳು ಕಳೆದ ‘ಸಂಘರ್ಷದ ಒಂದು ವರ್ಷ’ದಲ್ಲಿ ದಿಟ್ಟವಾಗಿ ಎದುರಿಸಿದ್ದಾರೆ. ಅನುಭವ ಮಂಟಪದ ವಿವಾದ, ತಾಲಿಬಾನಿಗಳು ಎಂಬ ಕುಹಕ, ಕಟ್ಟರ್ ಲಿಂಗಾಯತರು ಎಂಬ ಮಾತು, ಬಸವಣ್ಣನವರ ಜೊತೆ ಕಾಲ್ಪನಿಕ ವ್ಯಕ್ತಿಯ ಸಮೀಕರಿಸುವ ಪ್ರಯತ್ನ, ಬಸವಣ್ಣನವರ ಅವಹೇಳನ — ಮುಂತಾದ ವಿಷಯಗಳ ಸುಳಿವೂ ಕಾಣುತಿಲ್ಲ.

ಲಿಂಗಾಯತವು ಅನೇಕ ಬಗೆಯ ವಿರೋಧ, ದಾಳಿಗಳನ್ನು ಒಳಗಿನಿಂದಲೂ, ಹೊರಗಿನಿಂದಲೂ ಎದುರಿಸುತ್ತಿದೆ.

ಪ್ರಚಲಿತ ವಿಷಯಗಳಿರಲಿ

ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಭಾರತೀಯ ಸಂವಿಧಾನ ಮತ್ತು ಬಸವ ಸಂವಿಧಾನಗಳು ಬೇರೆ ಬೇರೆಯಲ್ಲ. ಇವೆರಡೆರ ನಡುವೆ ಅನೇಕ ಸಮಾನ ಅಂಶಗಳಿವೆ, ತತ್ವಗಳಿವೆ. ಉದಾ: ಮಾನವ ಹಕ್ಕುಗಳು, ಒಕ್ಕೂಟ ತತ್ವ, ಬಹು ಸಂಸ್ಕೃತಿ, ಬೌದ್ಧಿಕ ಸ್ವಾತಂತ್ರ್ಯ ಮುಂತಾದವು. ಇವುಗಳ ಮೇಲೂ ಉಪನ್ಯಾಸದ ವಿಷಯಗಳಿರಬೇಕಾಗಿತ್ತು.

ಯಾಕೆ ಇಂತಹ ಪ್ರಚಲಿತ ವಿಷಯಗಳನ್ನು ಇಲ್ಲಿ ಕೈಬಿಡಲಾಗಿದೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

‘ಲಿಂಗಾಯತ ಮತ್ತು ಜನಗಣತಿ’ ಸಮಸ್ಯೆಯ ಬಗ್ಗೆ ಅಭಿಯಾನದ ಪತ್ರದ ಒಂದು ಮೂಲೆಯಲ್ಲಿ ಬರೆಯಲಾಗಿದೆ. ನಾಲ್ಕು ಪುಟಗಳ ಅಭಿಯಾನದ ಕಾರ್ಯಸೂಚಿ ಪತ್ರದ ಕೊನೆಯ ಪುಟದ ತಳಭಾಗದಲ್ಲಿ ಇದರ ಬಗ್ಗೆ ಒಂದು ಸಾಲು ಬರಹವಿದೆ. ಆದರೆ ಇದು ‘ಮೂಲೆ’ಯಲ್ಲಿಡಬೇಕಾದ ವಿಷಯವಲ್ಲ. ಇದು ಲಿಂಗಾಯತದ ಅಸ್ತಿತ್ವದ ಪ್ರಶ್ನೆ. ಇದು ಅಭಿಯಾನದಲ್ಲಿ ಪ್ರಮುಖ ವಿಷಯವಾಗಬೇಕು.

ಜಾಗೃತಿ ಮೂಡಿಸಿ

ನಮ್ಮ ಯುವಕ–ಯುವತಿಯರಿಗೆ ಪ್ರೇರಣೆ, ಅರಿವು ನೀಡುವಂತಹ ವಿಷಯಗಳ ಬಗ್ಗೆ ಸಂವಾದ – ಚರ್ಚೆ ನಡೆಯಬೇಕು. ಇಲ್ಲಿ ಪಟ್ಟಿ ಮಾಡಿರುವ ಅಭಿಯಾನದ ವಿಷಯಗಳು ಸಭೆಯಲ್ಲಿ ತೂಕಡಿಕೆ ಉಂಟು ಮಾಡುವಂತಿವೆಯೇ ವಿನಾ ಅವರಲ್ಲಿ ಜಾಗೃತಿಯನ್ನು, ಬಸವ(ಸಾತ್ವಿಕ) ರೋಷವನ್ನು ಸೃಷ್ಟಿಸುವುದಿಲ್ಲ.

ಅಭಿಯಾನ ನಿದ್ದೆಯಲ್ಲಿರುವ ಲಿಂಗಾಯತರನ್ನು ಬಡಿದೆಬ್ಬಿಸಬೇಕು. ಆದರೆ ಬಹಳಷ್ಟು ವಿಷಯಗಳು ಎದ್ದಿರುವ ಲಿಂಗಾಯತರನ್ನು ಮಲಗಿಸುವಂತಿವೆ.

ಅಭಿಯಾನ ನಿದ್ದೆಯಲ್ಲಿರುವ ಲಿಂಗಾಯತರನ್ನು ಬಡಿದೆಬ್ಬಿಸಬೇಕು.

ಈಗಲೂ ಸಮಯವಿದೆ. ಇದನ್ನು ಪ್ರತಿಷ್ಟೆಯ ವಿಷಯವನ್ನಾಗಿ ಮಾಡದೆ ಉಪನ್ಯಾಸದ ವಿಷಯಗಳನ್ನು ಪರಿಷ್ಕರಿಸಬೇಕು. ಇದು ಲೋಪ-ದೋಷಗಳನ್ನು ಹುಡುಕುವುದಕ್ಕಾಗಿಯೆ ಮಾಡುತ್ತಿರುವ ಆಗ್ರಹವಲ್ಲ.

ಇದು ಲೋಪ-ದೋಷದ ಪ್ರಶ್ನೆಯಲ್ಲ. ಪ್ರಸ್ತುತತೆಯ ಪ್ರಶ್ನೆ- ಸಮಕಾಲೀನತೆಯ ಪ್ರಶ್ನೆ. ಇದರ ಬಗ್ಗೆ ಜರೂರಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವನ್ನು ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯನ್ನು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.

ಉಪನ್ಯಾಸದ ವಿಷಯಗಳನ್ನು ಪರಿಷ್ಕರಿಸಲು ಒಂದು ಸಮಿತಿ ರಚನೆಯಾದರೆ ಒಳ್ಳೆಯದು. ಯಾವ ವಿಷಯಗಳ ಮೇಲೆ ಒತ್ತು ಕೊಡಬೇಕೆಂದು ಅದಕ್ಕೆ ಸ್ಪಷ್ಟ ನಿರ್ದೇಶನ ಒಕ್ಕೊಟವು ನೀಡಲಿ. ಜಿಲ್ಲೆಗಳಲ್ಲಿ ದುಡಿಯುತ್ತಿರುವವರ ಅಭಿಪ್ರಾಯವನ್ನೂ ಪಡೆದು ಸಮಿತಿ ಒಂದು ವಾರದಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಿ. ಇದರಿಂದ ಅಭಿಯಾನವು ತನ್ನ ಗುರಿ ಮುಟ್ಟಲು ಸಾಧ್ಯ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CPORn7EbNfEBlG1MCXUuM

Share This Article
11 Comments
  • ವಿನಯಾ ಒಕ್ಕುಂದ ಎನ್ನುವ ಎಡಬಿಡಂಗಿ ಬಸವಣ್ಣನವರಿಗೆ ಪುರುಷ ಅಹಂಕಾರ ಇತ್ತು ಅಂತ ಹೇಳಿ ಅವಮಾನ ಮಾಡಿದಾರೆ. ಅಂತ ಶುದ್ಧ ಅಜ್ಞಾನಿಗೆ ಅವಕಾಶ ಕೊಟ್ಟು ನಮಗ ಅವಮಾನ ಮಾಡಿದ್ದೀರಿ ಹಾಗಾಗಿ ಈ ಅಭಿಯಾನದಿಂದ ದೂರ ಉಳಿಯುವ ತೀರ್ಮಾನವನ್ನು ತುಮಕೂರಿನ ಕೆಲವು ವಿದ್ವಾಂಸರು ತೀರ್ಮಾನಿಸಿದ್ದೇವೆ. ಉಳಿದದ್ದು ನಿಮಗೆ ಬಿಟ್ಟಿದ್ದು.
    ಶರಣು ಶರಣಾರ್ಥಿ.
    🙏🙏

    • ಹೌದು ಪ್ರಸ್ತುತ ಸಂಶಯ ವಿಷಯಗಳಿಗೆ ವಚನಗಳಲ್ಲಿ ಪರಿಹಾರ ಇದೆಯಾ ಎಂಬ ಅವಲೋಕನ ಮಾಡುವದು ಒಳಿತು, ಬಡತನ, ಮಾಢನಂಬಿಕೆ, ಅಸ್ಪೃಷತೆ, ಅಸಮಾನತೆ,ಅನಕ್ಷರತೆ, ಹೀಗೆ ಹಲವು ವಿಷಯಗಳೇ ಚರ್ಚೆಗೆ ಮೂಲವಾದರೆ ಚಂದ

  • ವಿಷಯ ಎಲ್ಲ ಜಿಲ್ಲೆಗಳಲ್ಲಿ ಒಂದೇ ಆದರೆ ತಪ್ಪೇನು??
    ಅದರಲ್ಲಿ

    ಸಾಂಸ್ಕೃತಿಕ ನಾಯಕ ಬಸವಣ
    ನಿಜ ಆಚರಣೆಗಳು
    ವೀರಶೈವ ಲಿಂಗಾಯತರ ಬಗ್ಗೆ ಇದ್ದ ಗೊಂದಲ ಪರಿಹಾರ
    ಸ್ವತಂತ್ರ ಧರ್ಮ
    ಜನಗಣತಿ

    ಈ ಐದು ವಿಷಯಗಳು ಪ್ರಮುಖವಾಗಿರಲಿ

    • ನಿಮ್ಮ ಮಾತು ಸರಿ ಅಕ್ಕಾ. ನಮ್ಮ ನಮ್ಮತಿಯಿದೆ.

    • ಅಕ್ಕೋರೆ ಶರಣು ಶರಣಾರ್ಥಿ 🙏🙏
      ಬಸವ ಸಂಸ್ಕೃತಿ ಅಭಿಯಾನದಲ್ಲಿ “ವಿಷಯ ಎಲ್ಲ ಜಿಲ್ಲೆಗಳಲ್ಲಿ ಒಂದೇ ಆದರೆ ತಪ್ಪೇನು??”

      ನಿಮ್ಮ ಯೋಚನೆ ಸರಿಯಾಗಿದೆ.

      ಇಂದಿನ ದಿನಮಾನಕ್ಕೆ ಬೇಕಾಗಿರುವಂತಹ 5 ಪ್ರಮುಖ ಅಂಶಗಳು ತಾವು ಕೊಟ್ಟಿದ್ದೀರಿ.
      ಈ ಪ್ರತಿ ಅಂಶಗಳ ಕುರಿತು ಸಂಕ್ಷಿಪ್ತ ಮಾಹಿತಿಗಳನ್ನು ಕೊಡಿ ಅಕ್ಕೋರೆ ಶರಣು ಶರಣಾರ್ಥಿಗಳು 🙏🙏

  • ಬಸವ ಮೀಡಿಯಾ ನಾಡಿನ ಅನೇಕ ಚಿಂತಕರಿಂದ ಅಭಿಯಾನ ಹೇಗಿರಬೇಕೆಂಬುದರಬಗ್ಗೆ ಸರಣಿ ಕಾರ್ಯಕ್ರಮ ಹಮ್ನಿಕೊಂಡಿತ್ತು
    ಅವರು ನೀಡಿದ ಸಲಹೆಗಳನ್ನು ಸಂಘಟಕರಿಗೆ ಮುಟ್ಟಿಸಿತ್ತು ಆದರೆ ಅವರು ನೀಡಿದ ಸಲಹೆಗಳಿಗೆ ಸಂಘಟಕರು ಅಷ್ಟೊಂದ ಮಹತ್ವ‌ಕೊಟ್ಟಂತೆ ಕಾಣುವುದಿಲ್ಲ. ಇನ್ನೂ ಸಮಯ ಇದೆ ಸಂಘಟಕರು ವಿಷಯಗಳಲ್ಲಿ ಬದಲಾವಣೆ ಮಾಡಿಕೊಂಡರೆ ಉತ್ತಮ.

  • ಗಂಗಾಧರ ಶಿವಪುರ ಜಿಲ್ಲಾಧ್ಯಕ್ಷರು. ಜಾ. ಲಿಂ. ಮ.ಸಭಾ.ಚಿಕ್ಕಮಗಳೂರು says:

    ಸಂಪನ್ಮೂಲ ವ್ಯಕ್ತಿಗಳ ಸೂಚಿಸುವಾಗ ಪ್ರಾದೇಶಿಕ ಅಸಮತೋಲತೆಯನ್ನ ಕಾಣಲಾಗಿದೆ ಶಿವಮೊಗ್ಗದವರಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಲ್ಲಾ ಜಿಲ್ಲೆಯಲ್ಲೂ ಕೂಡ ಅವಕಾಶ ಮಾಡಬೇಕಾಗಿತ್ತು . ಇದರ ಜೊತೆಗೆ ಬಸವತತ್ವದ ಆಚರಣೆ ನಡೆ-ನುಡಿಯಲ್ಲಿ ಇರುವವರನ್ನು ಗುರುತಿಸಬೇಕಾಗಿತ್ತು . ಚಿಂತಕರೆಂದು ಬೇರೆ ವರ್ಗದವರನ್ನು ಗುರುತಿಸಿರುವುದು ಸಮರ್ಪಕವಲ್ಲವೆಂದು ಕಂಡುಬರುತ್ತದೆ

  • ಇದು. ಮಠಾಧೀಶರ ಒಕ್ಕೂಟ ….
    ಹಳೆ ಮೈಸೂರು ಭಾಗದಲ್ಲಿ ಮಠಾಧೀಶರುಗಳನ್ನು ಬಸವಭಕ್ತರಾದ ಜನಸಾಮಾನ್ಯರು ಕಾಲಿಗೆ ಬಿದ್ದು ಕರೆತರವ ಅಂತ ಸ್ಥಿತಿ ನಿರ್ಮಾಣವಾಗಿದೆ. ನನಗನ್ನಿಸುವ ಪ್ರಕಾರ ಈ ಅಭಿಯಾನದಿಂದ ಬಸವ ತತ್ವ ಉಳಿವಿಗಾಗಲಿ ಬಸವಧರ್ಮದ ಬಗ್ಗೆ ಯಾವುದೆ. ಕಳಕಳಿ ಕಾಣಿಸುತ್ತಿಲ್ಲ ಎಲ್ಲೋ ಒಂದು ಕಡೆ ರಾಜಕೀಯ ಪ್ರೇರಿತವೇನೋ ಎನಿಸುತ್ತದೆ
    ಬಸವ ಕೇಂದ್ರ ಚಿಕ್ಕನಾಯಕನಹಳ್ಳಿ ತುಮಕೂರು

  • ಹಗಲು ರಾತ್ರಿ ನಿಜಾ ಆಚರಣೆಗಳಿಗಾಗಿ ಎಲೆಯ ಮರೆಯ ಕಾಯದಂತೆ ದುಡಿಯುತ್ತಿರುವ ಜಾಗೃತಿ ಮೂಡಿಸುತ್ತಿರುವ ಅನೇಕ ಅನುಯಾಯಿಗಳಿಗೆ ಬಸವ ಸಂಸ್ಕೃತಿ ಅಭಿಯಾನದ ಚಿಂತನೆಯ ವಿಷಯಗಳನ್ನು ನೋಡಿ ವಿಸ್ಮಯ ಉಂಟಾಗಿದೆ ಬಸವ ಸಂಸ್ಕೃತಿ ಯಾತ್ರೆ ಬಸವ ಸಂಸ್ಕೃತಿಯನ್ನೇ ಬಿಂಬಿಸುವಂತೆ ಇರಬೇಕು ಟಿಆರ್ ಚಂದ್ರಶೇಖರ್ ಅವರ ನಿಲವು ಸರಿಯಾಗಿದೆ. ಈ ಅಭಿಯಾನದಲ್ಲಿ ನಿಜಾಚರಣೆಯ ಪುಸ್ತಕವನ್ನು ಹೊರ ತರಬೇಕು. ಬೆಳಗಾವಿ ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಗ್ರಂಥ ಹೊರ ತರುವುದರ ಬಗ್ಗೆ ವಿಷಯ ಪ್ರಸ್ತಾಪನೆ ಮಾಡಿದೆ 🙏

  • ಸಮಾಜಕ್ಕೆ ಅತಿ ಅವಶ್ಯವಾಗಿ ಬೇಕಾಗಿರುವುದು ಬಸವ ಸಮ್ಮತ ನಿಜಾಚರಣೆಗಳು, ಅವಶ್ಯವಾಗಿ ಚರ್ಚಿಸಬೇಕಾದ ವಿಷಯವಾಗಿದೆ

  • ಸಂವಾದ

    ಶಾಲೆಯಲ್ಲಿ ಶಿಕ್ಷಕರು ಗಣಪತಿ ಹಬ್ಬದ ಸಂದರ್ಭದಲ್ಲಿ ರಾಮಜೋಯಿಸರನ್ನು ಕರೆಯಿಸಿ ಮಕ್ಕಳಿಗೆ ಗಣಪತಿ ಬಗ್ಗೆ ಪುರಾಣದ ಕಥೆ ತಿಳಿಸಿದರು

    ನಂತರ ಶಿಕ್ಷಕರು ರಾಮಜೋಯಿಸರನ್ನು ಬಿಳ್ಕೊಡಲು ತೆರಳಿದರು ಮತ್ತು ಮಕ್ಕಳಿಗೆ ಆಟ ಆಡಲು ಕಳುಹಿಸಿದರು

    ಆಗ ಮಕ್ಕಳು ರಾಮಜೋಯಿಸರು ಹೇಳಿದ ಕಥೆಯನ್ನು ಕುರಿತು ಚರ್ಚೆ ಮಾಡುತಿದ್ದರು

    ರವಿ: ಕೇಳಿದ್ರೇನೋ ಗಣಪತಿ ಕಥೆನಾ ಹೇಂಗೆ ಅನ್ಸುತು

    ರಾಜು : ಇನ್ಯಂಗೆ ಅನ್ಸುತ್ತೆ ನಂಬೋಕೆ ಆಗದೆ ಇರುವಂತ ಕಥೆ

    ಚಂದ್ರ: ಹೇಗಪ್ಪಾ ಹೇಳು ರಾಜು: ಈಗ ಮೊದಲಿನಿಂದಲೇ ಪ್ರಾರಂಭ ಮಾಡೋಣ

    ಶಿವನ ಹೆಂಡತಿ ಯಾರು?
    ಪಾರ್ವತಿ ತಾನೇ
    ಆ ಪಾರ್ವತಿ ಯಾರ ಮಗಳು ಹೇಳು

    ಚಂದ್ರು: ಇನ್ಯಾರ ಮಗಳು ಪರ್ವತ ರಾಜನ ಮಗಳು

    ರಾಜು : ಪರ್ವತ ರಾಜ ಅಂದರೆ ಹಿಮಾಲಯ ಪರ್ವತ
    ಈ ಹಿಮಾಲಯ ಪರ್ವತ ಒಂದು ಜಡ ವಸ್ತು ತಾನೇ
    ಜಡ ವಸ್ತುಗಳಿಗೆ ಮಕ್ಕಳು ಆಗಲು ಸಾಧ್ಯವೇ?

    ಚಂದ್ರ: ಇಲ್ಲ

    ರಾಜು: ಜಡ ವಸ್ತುವಿಗೆ ಮಕ್ಕಳು ಆಗುವುದಿಲ್ಲ ಅಂದ ಮೇಲೆ ಪಾರ್ವತಿ ಹುಟ್ಟಿಲ್ಲ
    ಪಾರ್ವತಿ ಹುಟ್ಟಿಲ್ಲ ಅಂದ ಮೇಲೆ ಗಣಪತಿ ಕಥೆ ಬಂಡಲ್ ಅಲ್ಲವೇ

    ನವೀನ : ಅದು ಇರಲಿ ಇಲ್ಲಿ ಕೇಳೋ ಚಂದ್ರು
    ಪಾರ್ವತಿ ಸ್ನಾನ ಮಾಡುವಾಗ ಸ್ನಾನದ ಮನೆಗೆ ಬಾಗಿಲು ಇರಲಿಲ್ಲ ಅಂದರೆ ಹೇಗೆ?
    ಪಾರ್ವತಿ ದೇವಿ ಅಲ್ಲವೇ ಒಂದು ಬಾಗಿಲು ಸೃಷ್ಟಿ ಮಾಡುವುದು ಕಷ್ಟವೇ ?

    ರವಿ : ನನ್ನ ಪ್ರಶ್ನೆ ಪಾರ್ವತಿ ತನ್ನ ಮೈಮೇಲೆ ಇರುವ ಮಣ್ಣು ತೆಗೆದು ಅದನ್ನು ನೆನೆಹಾಕಿ ತುಳಿದು ಗೊಂಬೆ ಮಾಡಿ ಅದಕ್ಕೆ ಜೀವ ತುಂಬುವ ಸಮಯದಲ್ಲಿ ಸ್ನಾನ ಮಾಡಬಹುದಿತ್ತು ಅಲ್ಲವೇ

    ಮಲ್ಲಿಗೆ:, ನನ್ನದು ಒಂದು ಪ್ರಶ್ನೆ
    ಅಲ್ಲಾ ಪಾರ್ವತಿ ಮೈಮೇಲಿನ ಮಣ್ಣು ಒಂದು 20 ಕೇಜಿ ಇರಬಹುದು
    ಅಂದರ ಮೇಲೆ ನೂರಾರು ಕೆ ಜಿ ತೂಕದ ಆನೆಯ ತಲೆ ಹೇಗೆ ಬ್ಯಾಲೆನ್ಸ್ ಆಗುತ್ತದೆ ಅಂತ

    ರವಿ: ತನ್ನ ಮಗನ ತಲೆಯನ್ನು ಶಿವ ಕಡಿದಾಗ ಪಾರ್ವತಿಗೆ ದುಃಖ ಆಯಿತಂತೆ
    ಆದೇ ಆನೆಯ ತಲೆ ಕಡಿದು ತಂದು ಗೊಂಬೆಗೆ ಜೋಡಿಸಿದಾಗ ಸಂತೋಷ ಆಯಿತಂತೆ

    ಪಾಪ ಆನೆಯ ತಾಯಿಗೆ ದುಃಖ ಆಗಲಿಲ್ಲವೇ
    ಪಾರ್ವತಿ ಅಂದರೆ ಜಗಜ್ಜನನಿ ಅಂದರೆ ಜಗತ್ತಿಗೇ ತಾಯಿ
    ಜಗತ್ತಿಗೆ ತಾಯಿ ಆದ ಪಾರ್ವತಿಗೆ ತನ್ನ ಮಗನನ್ನು ಕಡಿದಾಗ ದುಃಖ ಆದರೆ
    ಆನೆಯ ಮರಿಯನ್ನು ಕಡಿದಾಗಲೂ ದುಃಖ ಆಗಬೇಕು ಅಲ್ಲವೇ

    ಮಂಜು : ಹೊಟ್ಟೆ ತುಂಬಾ ಊಟ ಮಾಡಿ ಗಣಪ ಇಲಿ ಮೇಲೆ ಬರುವಾಗ ಹಾವು ಬಂತಂತೆ ಹಾವನ್ನು ನೋಡಿ ಇಲಿ ಹೆದರಿ ಓಡಿ ಹೋಯಿತಂತೆ

    ಅಲ್ಲಾ ಆ ಗಣಪತಿ ವಾಹನ ಆದ ಇಲಿ ನನ್ನ ಮೇಲೆ ಗಣಪತಿ ಇದ್ದಾನೆ ನನ್ನ ಕಾಪಾಡುತ್ತಾನೆ ಅಂತ ದೈರ್ಯವಾಗಿ ಇರಬಹುದಿತ್ತು ಆದರೆ ಇಲಿ ಗಣಪತಿ ನಂಬದೆ ಓಡಿ ಹೋಯಿತು
    ಇಲಿನೇ ಗಣಪತಿ ನಂಬದ ಮೇಲೆ ನಾವು ಹೇಗೆ ಗಣಪತಿ ನಂಬುವುದು

    ನಾಗರಾಜ: ಅಲ್ಲಲೇ ಹಾವನ್ನು ನೋಡಿ ಇಲಿ ಓಡಿ ಹೋದಾಗ ಗಣಪ ಬಿದ್ದನಂತೆ ಗಣಪನ ಹೊಟ್ಟೆ ಒಡೆಯಿತಂತೆ ಕಡುಬು ಎಲ್ಲಾ ಕಡೆಗೆ ಬಿದ್ದವಂತೆ
    ಅವುಗಳನ್ನು ಗಣಪ ಗಪಗಪನೆ ತುಂಬಿಕೊಂಡನಂತೆ ಇದನ್ನು ನೋಡಿ ಚಂದ್ರ ಪಕಪಕನೆ ನಕ್ಕನಂತೆ
    ಚಂದ್ರ ನಕ್ಕಿದ್ದಕ್ಕೆ ಗಣಪತಿ ಶಾಪ ಕೊಟ್ಟನಂತೆ ಹದಿನೈದು ದಿನ ಬೆಳಕು ನೀಡು ಹದಿನೈದು ದಿನ ಕಣ್ಮರೆಯಾಗು ಎಂದು

    ಅಲ್ಲಾ ಚಂದ್ರನ ಮೇಲೆ ವಿಜ್ಞಾನಿಗಳು ಓಡಾಡಿದ್ದಾರೆ ಚಂದ್ರ ಒಂದು ಕಲ್ಲು ಮಣ್ಣುಗಳಿಂದ ಕೂಡಿದ ಜಡ ವಸ್ತು ಅಂತ ವಿಜ್ಞಾನಿಗಳು ಹೇಳಿದ್ದಾರೆ
    ಅದು ನಗಲು ಸಾಧ್ಯವೇ

    ಹದಿನೈದು ದಿನ ಬೆಳಕು ನೀಡುವ ಹದಿನೈದು ದಿನ ಕತ್ತಲೆಯಲ್ಲಿ ಇರಲು ಮುಖ್ಯ ಕಾರಣ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ
    ಚಂದ್ರ ಭೂಮಿಯ ಸುತ್ತ ಸುತ್ತುತ್ತದೆ
    ಹಾಗಾಗಿ ಹದಿನೈದು ದಿನ ಕತ್ತಲು ಬೆಳಕು ಇರುತ್ತದೆ

    ಚಂದ್ರ ಹೀಗೇನಂತಿಯಪ್ಪ

    ಚಂದ್ರ: ಅರ್ಥ ಆಯಿತು ಬಿಡ್ರೋ ಗಣಪನ ಕಥೆ ಕಟ್ಟುಕಥೆ ಅಂತ

    ಭಾರತ ಮೂಢನಂಬಿಕೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ ನಾವು ವೈಚಾರಿಕತೆ ಬೆಳೆಸಿಕೊಳ್ಳಬೇಕಾಗಿದೆ
    ನಡೆಯಿರಿ ನಾಳೆಯಿಂದ ನಾನೂ ಸಹ ನಿಮ್ಮ ಜೊತೆಗೆ ವಚನ ಪಾಠಶಾಲೆ ಗೆ ಬರುತ್ತೇನೆ
    ನೀವೂ ಸಹ ವಚನಗಳನ್ನು ಕಲಿತು ವಿಚಾರ ಮಾಡುವ ಶಕ್ತಿ ಬೆಳೆಸಿಕೊಳ್ಳಿ ಭಾರತ ಮೂಢನಂಬಿಕೆ ಕಂದಾಚಾರ ಮೌಢ್ಯಗಳಿಂದ ಬಿಡುಗಡೆ ಪಡೆಯಲಿ

    ಶರಣು ಶರಣಾರ್ಥಿ ಗಳೊಂದಿಗೆ
    ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು
    ಪ್ರಧಾನ ಕಾರ್ಯದರ್ಶಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ
    9945439171 ಮರು ಪರಿಶೀಲಿಸಿ, ಈ ರೀತಿ ಡಾಂಭಿಕ ಮಾಡಿದರೆ ಉತ್ತಮ ಮಾರ್ಗವನ್ನು ನೀಡಲಾಗುವುದಿಲ್ಲ.

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು