ಅಭಿಯಾನದ ಯಶಸ್ಸಿಗೆ ಪಣ ತೊಟ್ಟ ರಾಯಚೂರಿನ ಬಸವ ಸಂಘಟನೆಗಳು

ರಾಯಚೂರು

ಲಿಂಗಾಯತ ಮಠಾಧೀಶರ ಒಕ್ಕೂಟ ಮತ್ತು ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಸೆಪ್ಟೆಂಬರ್ 5ರಂದು ರಾಯಚೂರು ಜಿಲ್ಲೆಯಲ್ಲಿ ನಡೆಯಲಿರುವ “ಬಸವ ಸಂಸ್ಕೃತಿ ಅಭಿಯಾನ”ವನ್ನು ಯಶಸ್ವಿಗೊಳಿಸುವ ಉದ್ಧೇಶದಿಂದ ನಗರದ ಬಸವ ಕೇಂದ್ರದಲ್ಲಿ ಬಸವಪರ ಸಂಘಟನೆಗಳ ಸಭೆ ಬುಧವಾರ ನಡೆಯಿತು.

ಜಿಲ್ಲೆಯಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲೆಯಾದ್ಯಂತ ಕಾರ್ಯಕ್ರಮಗಳ ಸುಧೀರ್ಘ ಯೋಜನೆ ರೂಪಿಸುವ ಚರ್ಚೆ ನಡೆಯಿತು. ಅಭಿಯಾನಕ್ಕೆ ಎಲ್ಲಾ ಸಂಘಟನೆಗಳು ಸಹಭಾಗಿತ್ವ ನೀಡುವ ಬದ್ಧತೆಯನ್ನು ವ್ಯಕ್ತಪಡಿಸಿದವು.

ಸಭೆಯು ಮಾಜಿ ಶಾಸಕರಾದ ಪಾಪಾರೆಡ್ಡಿ ಮುನ್ನೂರು ಕಾಪು ಸಮಾಜ ರಾಯಚೂರು, ರವಿ ಭೋಸರಾಜು ಅವರ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸುವದು. ಸಂಚಾಲಕರಾಗಿ ಬಸವಪ್ರೇಮಿ ನಾಗನಗೌಡ ಹರವಿ ಅವರು ಕಾರ್ಯನಿರ್ವಹಿಸಲು ಸಭೆ ನಿರ್ಧರಿಸಿತು.

ಸಭೆಯ ಅಧ್ಯಕ್ಷತೆಯನ್ನು ಲಿಂಗಾಯತ ಮಠಾಧೀಶರ ಒಕ್ಕೂಟದ ಪರವಾಗಿ ಬಂದಿದ್ದ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ ವಹಿಸಿಕೊಂಡು ಅಭಿಯಾನ ಕುರಿತು ಮಾತನಾಡಿದರು.

180
ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ...

ಸಭೆಯಲ್ಲಿ ರಾಯಚೂರು ಜಿಲ್ಲೆಯ ಮಠಾಧೀಶರ ಒಕ್ಕೂಟದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಸುವರ್ಣಗಿರಿ ವಿರಕ್ತಮಠ ವಳಬಳ್ಳಾರಿ, ಪೂಜ್ಯ ಗುರುಬಸವ ಸ್ವಾಮೀಜಿ ವಳಬಳ್ಳಾರಿ, ಪೂಜ್ಯ ಸಿದ್ದಲಿಂಗ ಸ್ವಾಮೀಜಿ ವಿಜಯಮಹಾಂತೇಶ್ವರ ಶಾಖಾಮಠ ಲಿಂಗಸುಗೂರು, ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಯದ್ದಲದೊಡ್ಡಿ, ಸಿಂಧನೂರು. ಪೂಜ್ಯ ಗುರುಬಸವ ಮಹಾಸ್ವಾಮಿಗಳು ಘನಮಠೇಶ್ವರಮಠ ಸಂತೆಕೆಲೂರು, ಪೂಜ್ಯ ನಿಜಾನಂದ ಸ್ವಾಮೀಜಿ ಮಿಟ್ಟಿಮಲ್ಕಾಪೂರ, ಪೂಜ್ಯ ಪಂಚಮ ಸಿದ್ದಲಿಂಗೇಶ್ವರ ಸ್ವಾಮೀಜಿ ನೇರಡಗಂಬಮಠ ಮಕ್ತಲ್ (ತೆಲಂಗಾಣ) ಹಾಗೂ ಜಿಲ್ಲೆಯ ಪ್ರಮುಖ ಮಠಾಧೀಶರು ಉಪಸ್ಥಿತರಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ವಚನ ಫೌಂಡೇಶನ್, ಅಕ್ಕನ ಬಳಗ ಸಂಘಟನೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಶರಣಧರ್ಮದ ಅನುಯಾಯಿಗಳು, ಸಮಾಜ ಸೇವಕರು, ಕಾಯಕ ಜೀವಿಗಳು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಸ್ಥಳೀಯ ಶಾಸಕರ ಸಹೋದರ ಸಿದ್ದನಗೌಡ ಪಾಟೀಲ, ಜೆ.ಎಲ್.ಎಂ. ಬೀದರ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ವೇದಿಕೆ ಮೇಲಿದ್ದರು.

ಜಿಲ್ಲೆಯ ಎಲ್ಲಾ ತಾಲೂಕುಗಳ 150ಕ್ಕೂ ಹೆಚ್ಚು ಜನ ಉತ್ಸಾಹದಿಂದ ಭಾಗವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ. ಸರ್ವಮಂಗಳ ಸಕ್ರಿ, ಬಸವ ಕೇಂದ್ರದ ಅಧ್ಯಕ್ಷರಾದ ರಾಚನಗೌಡ ಕೋಳೂರ, ಕಾರ್ಯದರ್ಶಿಗಳಾದ ಚನ್ನಬಸವಣ್ಣ ಮಹಾಜನಶೆಟ್ಟಿ, ತಾಲೂಕ ಅಧ್ಯಕ್ಷರಾದ ಜೆ. ಬಸವರಾಜ ಶ್ರಮವಹಿಸಿ ಸಂಘಟನೆ ಮಾಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *