ಕೂಡಲಸಂಗಮದಲ್ಲಿ ಅಡ್ಡ ಪಲ್ಲಕ್ಕಿ ನಡೆಯಲು ಬಿಡುವುದಿಲ್ಲ: ಬಸವರಾಜ ಧನ್ನೂರ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ನಡೆಸಿ ಕೂಡಲಸಂಗಮ ಕ್ಷೇತ್ರವನ್ನು ಪವಿತ್ರಗೊಳಿಸುವುದಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ನೀಡಿರುವ ಹೇಳಿಕೆಗೆ ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಶಪ್ಪನವರ್ ಹೇಳಿಕೆ ಮೂರ್ಖತನದ್ದು, ಕೂಡಲಸಂಗಮದಲ್ಲಿ ಅಡ್ಡಪಲ್ಲಕ್ಕಿ ನಡೆಸಲು ಬಿಡುವುದಿಲ್ಲ. ಪಂಚ ಪರುಷ ಮೂರ್ತಿಯಾದ ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ ಅಪವಿತ್ರವಾಗಲು ಸಾಧ್ಯವಿಲ್ಲ.

ಕಾಶಪ್ಪನವರ್ ಮೊದಲು ತಮ್ಮ ಬುದ್ಧಿ ಪವಿತ್ರಗೊಳಿಸಿಕೊಳ್ಳಲಿ. ಕೂಡಲಸಂಗಮದ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಇದನ್ನು ಮುಂದುವರಿಸಿದರೆ ಬಸವ ಭಕ್ತರ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ, ಎಂದು ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.

ರಂಭಾಪುರಿ ಶ್ರೀ ಬಸವಣ್ಣನವರ ಕುರಿತು ಮಾತನಾಡುವುದು ನಿಲ್ಲಿಸಲಿ

ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದರೆಂದು ತಮ್ಮ ಜೀವನ ಪರ್ಯಂತ ಸುಳ್ಳು ಹೇಳುತ್ತಾ, ಇತಿಹಾಸ ತಿರುಚಲು ಪ್ರಯತ್ನಿಸುತ್ತಿರುವ ರಂಭಾಪುರಿ ಶ್ರೀಗಳು ಬಸವಣ್ಣನವರ ಕುರಿತು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಧನ್ನೂರ ಒತ್ತಾಯಿಸಿದ್ದಾರೆ.

ಅನುಭವ ಮಂಟಪದ ಪ್ರಮಥ ಗಣಂಗಳೆಲ್ಲರ ವಚನ ಸಾಹಿತ್ಯವೇ ಬಸವಣ್ಣನವರು ಲಿಂಗವಂತ ಧರ್ಮದ ಸ್ಥಾಪಕರೆಂದು ಸಾರುತ್ತಿರುವಾಗ, ಇಡೀ ನಾಡಿಗೆ ನಾಡೇ ಅದನ್ನು ಒಪ್ಪುತ್ತಿರುವಾಗ, ಇವರು ದಾರಿ ತಪ್ಪಿಸುವ ವಿಫಲ ಪ್ರಯತ್ನ ಮಾಡುತ್ತಿರುವುದೇಕೆ, ಇದೇ ಶ್ರಮವನ್ನು ಪಂಚಾಚಾರ್ಯರ ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳಲಿ. ಬಸಣ್ಣನವರ ಹೆಸರಿಗೆ ಬರುವುದಾದರೆ ಸರಿಯಾಗಿ ಅಧ್ಯಯನ ಮಾಡಿ ಹೇಳಿಕೆ ಕೊಡಲಿ ಎಂದು ಹೇಳಿದ್ದಾರೆ.

ಬಸವಣ್ಣ ವೀರಶೈವ ಧರ್ಮ ಸ್ವೀಕಾರ ಮಾಡಿರಲೇ ಇಲ್ಲ. ಹೀಗಾಗಿ ಯಾರೇ ನೂರು ಬಾರಿ ಹೇಳಿದರೂ, ಡಂಗೂರ ಸಾರಿದರೂ ಅದನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಬಸವ ತತ್ವದ ಮಠಗಳು ಬಸವ ತತ್ವ ಬಿಟ್ಟು ಬೇರೆ ತತ್ವಗಳ ಪ್ರಚಾರ ಮಾಡಲು ಸಾಧ್ಯವೇ, ಬೇರೆ ತತ್ವಗಳನ್ನು ಯಾಕೆ ಪ್ರಚಾರ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಬಸವ ತತ್ವದ ಮಠಗಳಲ್ಲಿ ಗೊಂದಲ ಇಲ್ಲ. ಗೊಂದಲ ಇರುವುದು ಪಂಚಾಚಾರ್ಯರಲ್ಲಿ. ನೀವು ಬಸವಣ್ಣ ಅಥವಾ ರೇಣುಕಾಚಾರ್ಯರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಜನಗಣತಿಯಲ್ಲಿ ಲಿಂಗಾಯತ ಎಂದೇ ಬರೆಸಿ

ಮುಂಬರುವ ಜನಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ತಪ್ಪದೇ ಲಿಂಗಾಯತ ಎಂದೇ ಬರೆಸಬೇಕು.

ದಾವಣಗೆರೆಯಲ್ಲಿ ಈಚೆಗೆ ನಡೆದ ವೀರಶೈವ ಪೀಠಾಚಾರ್ಯ ಹಾಗೂ ಶಿವಾಚಾರ್ಯ ಶೃಂಗವು ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕೆಂದು ಕರೆ ಕೊಟ್ಟು ಲಿಂಗಾಯತ ಸಮುದಾಯದ ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ.

ವೀರಶೈವ ಲಿಂಗಾಯತ ಪದ ಅವೈಜ್ಞಾನಿಕವಾದದ್ದು. ತಾತ್ವಿಕ ಹಾಗೂ ಸೈದ್ಧಾಂತಿಕವಾಗಿಯೂ ಸರಿಯಾದುದ್ದಲ್ಲ. ಹೀಗಾಗಿಯೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಲಿಂಗಾಯತ ಹೆಸರಲ್ಲಿ ಮೂರು ಬಾರಿ ಸಲ್ಲಿಸಲಾಗಿದ್ದ ಪ್ರತ್ಯೇಕ ಧರ್ಮ ಮಾನ್ಯತೆ ಪ್ರಸ್ತಾವ ತಿರಸ್ಕಾರಗೊಂಡಿದೆ.

ಲಿಂಗಾಯತ ಎಂದು ಬರೆಸುವುದರಿಂದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲಿದೆ. ಧರ್ಮದ ಎಲ್ಲ ಒಳ ಪಂಗಡಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ದೊರಕಲಿದೆ. ವೀರಶೈವ ಲಿಂಗಾಯತ ಎಂದು ಬರೆಸಿದರೆ ದೊಡ್ಡ ಹಿನ್ನೆಡೆ ಆಗಲಿದೆ. ಕಾರಣ, ಲಿಂಗಾಯತರು ಶೃಂಗದ ಕರೆಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

a

Share This Article
4 Comments
  • ಇಂಥ ಹೇಳಿಕೆಗಳು ಇನ್ನೂ ಹೊರ ಬರಬೇಕು

    • [08/05, 8:25 am] C B IJARE: You are at liberty to take account of per person,per head, occupational categories scenes/ statistics for consolidation total persons,& their occupational data. Which is more convenient and scientific. Birth cannot be classified on the basis of occupation. Occupationa cannot become the breeding cost. Hence you may take care of yourself so seriously the sencess of indian people. Which may lead to cummunal problems.
      [08/05, 8:33 am] C B IJARE: ಜಾ ಅಂದರೆ ಹುಟ್ಟು, ಎಲ್ಲರೂ ಗರ್ಭದಿಂದಲೇ ಹುಟ್ಟುವದು. ಪದ್ಮ ನಭ, ಕಮಲಪ್ತ್ರ , ಮೂಲ ಮಾತೆ, ಮಹಾದೇವಿ,ದುರ್ಗಾ,ಕೆಲವರೂ ವೃತ್ತಿಗಳಿಗೆ,ಕಸಬುಗಳಿಗೆ, ಉದ್ಯೋಗಗಳಿಗೆ ಜಾತಿಯೆನ್ನುತ್ತಾರೆ. ನೀವೂ ಯಾವಜಾತಿಯ ಗಣತಿ ಕಾರ್ಯವನ್ನು ಇದರಲ್ಲಿ ತಿಳಿಸಿದ್ದೀರಿ? ಸರಕಾರ ಈ ನಿಟ್ಟಿನಲ್ಲಿ ಸರಿಯಾಗಿ ವಿಚಾರ ಮಾಡಿ ಕಾರ್ಯ ಜರುಗಿಸಿದರೆ ಉತ್ತಮ. ಇಲ್ಲವಾದರೆ ದೊಡ್ಡ ಅನಾಹುತ ಸಂವವಿಸುವದು.👏👏🌼🌼
      [08/05, 8:55 am] C B IJARE: ಮೊದಲು ಕೇವಲ ಅರಮನೆ, ಗುರುಮನ ಮಾತ್ರ ವಿದ್ದೂ, ಅವರ ಸೇವೆಗಾಗಿ ವರ್ಗ,ವರ್ಣ,ಜಾತಿ,ಗಂಡು, ಹೆಣ್ಣು, ಮತ್ತು ಕಸಬುಗಳನ್ನು, ಮಾಡುವವರ ವರ್ಗಕ್ಕೆ ಜಾತಿಯೆಂದು ಕರೆಯುತ್ತಿದ್ದರು. ಆದರೆ ಕಸಬುಗಳು ಜಾತಿಯೆಲ್ಲ. ಜಾ ಅಂದರೆ ಹುಟ್ಟು. ಹುಟ್ಟು ತಾಯಿಯ ಗರ್ಭದಿಂದಲೆ ಆಗುತ್ತದೆ. ಅದಲ್ಲದೆ ಬೇರೆ ಜಾತಿಯಾಗುವದಿಲ್ಲ. ದೇವಕಣಕ್ಕೆ ,ತಾಯಿತಗರ್ಭಕ್ಕೆ,ಜಾತಿ ಮತ ಧರ್ಮ ಪಂಥಿಗಳಿಲ್ಲ .ಗುರುಮನೆಯವರು ತಮ್ಮ ಸ್ವಾರ್ಥಕ್ಕಾಗಿ ಜಾತಿ ಹುಟ್ಟುಹಾಕಿದ್ದಾರೆ. ತಾವು ಬಸವ ತತ್ವದ ಅಡಿಯೆಲ್ಲಿ ವಿಚರಿಶಿ ನೋಡಿ ಕೇವಲ ಜನಗಣತಿ,ಕಸಭುಗಳ ಗಣತಿ ಕಾರ್ಯ ಮಾಡಿದರೆ ಉತ್ತಮ.👏👏👍 ಶರಣು ಶರಣಾರ್ಥಿ

    • ನನ್ನೂರು ಶರಣರಿಗೆ ೧೨ನೇ ಶತಮಾನದಲ್ಲಿ ವೀರಶೈವ ಶಬ್ದದ ಜನನವಾಗಿರಲಿಲ್ಲ ಇದು ಜನನವಾದದ್ದು ೧೫ ನೇ ಶತಮಾನದಲ್ಲಿ.೧೨ ನೇ ಶತಮಾನದಲ್ಲಿ ವೈಧಿಕ ಶೈವಗಳಿದ್ದವು.ವೀರಶೈವ ಒಂದು ಪ್ರಭೇದ ಅಂತ ಅಷ್ಟೆ.ಅದು ಧರ್ಮ ವಾಗಲು ಸಾಧ್ಯವಿಲ್ಲ ಧರ್ಮವು ಅಲ್ಲಿ ವೈಧಿಕ ಆಚರಣೆಗಳು ಭಾಗವಷ್ಟೆ.ಇವರ ಬುಡಬುಡಿಕೆ ಆಟ ನಡೆಯುವುದಿಲ್ಲ.ಜೆ ಎಲ ಎಮ.ಇವರಿಗೆ ಪಾಠ ಕಲಿಸಬೇಕು.

  • ಎಲ್ಲರಿಗೂ ಶರಣು ಶರಣಾರ್ಥಿಗಳು. ಸೋದರ ಬಸವರಾಜ ಧನ್ನೂರ್ ರವರು ತುಂಬಾ ಚೆನ್ನಾಗಿ ಹೇಳಿದ್ದಾರೆ. ಶ್ರೀ ಧನ್ನೋರವರು ಲಿಂಗಾಯತ ಧರ್ಮದ ರಕ್ಷಕರಾಗಿ ನಮಗೆ ಕಾಣುತ್ತಿದ್ದಾರೆ. ಶ್ರೀ ದನ್ನೂರ್ ಸೋದರರಿಗೆ ಮತ್ತೊಮ್ಮೆ ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *