ಅಡ್ಡಡ್ಡ ಎಡವಿದ ಕಾರಿಯಪ್ಪ: “ತುಲಾಭಾರ” ನಾಟಕ ಬರೆದಿರುವುದು ಸಾಣೇಹಳ್ಳಿಯ ಶ್ರೀಗಳಲ್ಲ, ಬಿ ಅರ್ ಪೋಲಿಸ್ ಪಾಟೀಲರು
ಬೆಂಗಳೂರು
ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಒಬ್ಬ “ಕಮ್ಯುನಿಸ್ಟ್” ಸ್ವಾಮೀಜಿ, ಹಿಂದೂ ಧರ್ಮವನ್ನು ಅವಮಾನಿಸುವುದು, ಅದರ ಬಗ್ಗೆ ದ್ವೇಷ ಹರಡುವುದು ಅವರ ಅಜೆಂಡಾ, ಎಂದು ಮಾಜಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆರೋಪಿಸಿದ್ದಾರೆ.
ಶ್ರೀಗಳ “ಡೋಂಗಿ” ಜಾತ್ಯಾತೀಯತೆ, ಪ್ರಗತಿಪರ ಧೋರಣೆಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದೆ ಎಂದು ಕೂಡ ಆಪಾದಿಸಿದ್ದಾರೆ.
ಏಕಾಏಕಿ ಕಾರ್ಯಪ್ಪರನ್ನು ಕೆರಳಿಸಿರುವುದು ಸಾಣೇಹಳ್ಳಿ ಮಠದ ‘ಶಿವಸಂಚಾರ’ ಸಂಸ್ಥೆ 2024ರಿಂದ ಪ್ರದರ್ಶನ ಮಾಡುತ್ತಿರುವ ‘ತುಲಾಭಾರ’ ನಾಟಕ.
‘ತುಲಾಭಾರ’ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದ ಚಳ್ಳಕೆರೆಯ ಪ್ರಶಸ್ತಿ ವಿಜೇತ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಅನುಭವ ಆಧಾರಿತ ನಾಟಕ. ಆದರೆ ಇದರಲ್ಲಿ ಬ್ರಾಹ್ಮಣ ಪಾತ್ರದಾರಿಯ ಬದಲು ಮುಸ್ಲಿಂ ಪಾತ್ರ ಇದೆ ಎಂದು ಕಾರ್ಯಪ್ಪ ಆರೋಪಿಸಿದ್ದಾರೆ.
ಬುಧವಾರ ರಾತ್ರಿ ನೀಡಿರುವ ವಿಡಿಯೋ ಹೇಳಿಕೆಯಲ್ಲಿ ತಮ್ಮ ಆಕ್ರೋಶಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ.
ಕೃಷ್ಣಶಾಸ್ತ್ರಿಗಳು ಹಲವಾರು ಶಾಲೆಗಳನ್ನು ತೆರೆದು, ಶಿಕ್ಷಣ ಕ್ರಾಂತಿ ಮಾಡಿದ ತಮ್ಮ ಅನುಭವವನ್ನು ಕ್ಯಾಸೆಟ್ ರೂಪದಲ್ಲಿ ಹಂಚಿಕೊಂಡಿದ್ದರು. ಇದನ್ನು ನಂತರ ನಾ ರವಿಕುಮಾರ್ ಅವರು ‘ಮರೆಯಲಾದೀತೆ’ ಪುಸ್ತಕ ರೂಪದಲ್ಲಿ ಬರೆದಿದ್ದರು.
“ಈ ಕಥೆಯನ್ನು ಬಳಸಿಕೊಂಡು ಸಾಣೇಹಳ್ಳಿ ಸ್ವಾಮೀಜಿ “ತುಲಾಭಾರ” ನಾಟಕ ಬರೆದಿದ್ದಾರೆ. ಆದರೆ ಅಲ್ಲಿ ಕೃಷ್ಣಶಾಸ್ತ್ರಿ ಅವರ ಜಾಗದಲ್ಲಿ ಒಬ್ಬ ಮುಸುಲ್ಮಾನನನ್ನ ತಂದಿದ್ದಾರೆ,” ಎಂದು ಕಾರ್ಯಪ್ಪ ಹೇಳಿದ್ದಾರೆ.
‘ತುಲಾಭಾರ’ ನಾಟಕದಲ್ಲಿ ಬ್ರಾಹ್ಮಣ ಪಾತ್ರದಾರಿಯ ಬದಲು ಒಬ್ಬ ಮುಸ್ಲಿಂ ಪಾತ್ರದಾರಿಯನ್ನು ಹೇರಲಾಗಿದೆ. ಇದರಲ್ಲಿ ಒಬ್ಬ ಮುಸಲ್ಮಾನ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾನೆ. ರಂಜಾನ್, ಈದ್ ಮಿಲಾದ್ ಮುಂತಾದ ಹಬ್ಬಗಳ ಪಾವಿತ್ರ್ಯತೆಯನ್ನೂ ಮಕ್ಕಳಿಗೆ ಕಲಿಸುತ್ತಾನೆ. ಎಲ್ಲರನ್ನೂ ಸಮಾನವಾಗಿ ಕೂಡ ನೋಡುತ್ತಾನೆ.
ಶಿಕ್ಷಣ ಕ್ರಾಂತಿ ಮಾಡಿದ್ದು ಬ್ರಾಹ್ಮಣ ಅಂತ ನಾಟಕದಲ್ಲಿ ತೋರಿಸಿದರೆ ಅದು ಹಿಂದೂ ಧರ್ಮದ ಭಾಗವಾಗುತ್ತದೆ, ನಿಮ್ಮ ಜಾತ್ಯಾತೀಯತೆ ಪ್ರಗತಿಪರ ಧೋರಣೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಮುಸುಲ್ಮಾನ ಶ್ರೇಷ್ಠ ಎಂದು ತೋರಿಸಲು ಇದನ್ನು ಮಾಡಿದ್ದೀರಿ, ಎಂದು ಕಾರ್ಯಪ್ಪ ಸಾಣೇಹಳ್ಳಿ ಶ್ರೀಗಳನ್ನು ಉದ್ದೇಶಿಸಿ ಹೇಳಿದ್ದಾರೆ.
“ಇದು ಸಾಣೇಹಳ್ಳಿ ಸ್ವಾಮೀಜಿಯ ಕುತಂತ್ರ. ತಾವು ಕಾಪಿ ಮಾಡಿದ್ದು ಯಾರಿಗೂ ಗೊತ್ತಾಗುವುದಿಲ್ಲ ಅಂದರೆ ಅದು ದಡ್ಡತನ. ‘ಓಂ’ ಕೂಡ ಹೇಳಬೇಡಿ ಅಂತ ಹೇಳಿದ ಈ ಸಂಕುಚಿತ ಸ್ವಾಮೀಜಿಯ ಡೋಂಗಿ ಜಾತ್ಯಾತೀಯತೆ ಮತ್ತು ಪ್ರಗತಿಪರ ಧೋರಣೆಯನ್ನು ಖಂಡಿಸುತ್ತೇನೆ,” ಎಂದು ಕಾರ್ಯಪ್ಪ ಹೇಳಿದ್ದಾರೆ.
ಈ ತರಹ ಕಮ್ಯುನಿಸ್ಟ್ ನಾಟಕಕಾರರು ಮಾಡುವ ಕುತಂತ್ರ, ಚೇಷ್ಟೆಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದೆ. ಇದು ಕಳೆದ 60 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಅದಕ್ಕೆ ರಾಷ್ಟ್ರೀಯವಾದಿ ಚಿಂತನೆಯ ನಾಟಕಗಳ ಅವಶ್ಯಕತೆ ಇದೆ.
ಸಾಣೇಹಳ್ಳಿ ಶ್ರೀಗಳ ಪ್ರತಿಕ್ರಿಯೆ
“ತುಲಾಭಾರ” ನಾಟಕದ ಪೂರ್ಣ ಮಾಹಿತಿ ತಿಳಿಯದೆ, ನಾಟಕ ನೋಡದೆ ಅಡ್ಡಂಡ ಕಾರಿಯಪ್ಪ ಮಾತನಾಡಿದ್ದಾರೆ. ಈ ನಾಟಕದ ಲೇಖಕರು ನಾವಲ್ಲ ಎನ್ನುವ ಪ್ರಾಥಮಿಕ ಜ್ಞಾನವೇ ಅವರಿಗಿಲ್ಲ. ನಾಟಕದ ಲೇಖಕರು ಉತ್ತರ ಕರ್ನಾಟಕದ ಬಿ ಅರ್ ಪೋಲಿಸ್ ಪಾಟೀಲರು, ಎಂದು ಸಾಣೇಹಳ್ಳಿ ಶ್ರೀಗಳ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀಗಳ ಪೂರ್ಣ ಪ್ರತಿಕ್ರಿಯೆಯನ್ನು ಸದ್ಯದಲ್ಲೇ ಪ್ರಕಟಿಸುತ್ತಿದ್ದೇವೆ.
Hai….Addadda shree gala bagge mathanadu vaga be carefull
ಪಾತ್ರ ಕೇವಲ ಅಭಿನಯವಷ್ಟೇ ಈ ಅವಿವೇಕಿ ಕಾರ್ಯಪ್ಪನಿಗೆ ಗೋತ್ತಿಲ್ಲವೇ. ಪಾತ್ರವನ್ನ ಮುಸ್ಲಿಮರು ಮಾಡಿದರೇನು ಬ್ರಾಹ್ಮಣ,ಲಿಂಗಾಯತ,ಒಕ್ಕಲಿಗ ಯಾರು ಮಾಡಿದರೇನಂತೆ. ಹಿಂದೂ ಧರ್ಮದ ಶುದ್ಧೀಕರಣವನ್ನ ಸಾಣೇಹಳ್ಳಿ ಶ್ರೀಗಳು ಮಾಡುತಿದ್ದಾರೆ ಮತ್ತು ದೇಶವನ್ನ ಮೌಡ್ಯ ಮುಕ್ತಕ್ಕಾಗಿ ಶ್ರೀಗಳು ಶ್ರಮಿಸುತಿದ್ದಾರೆ. ಈ ಕಾರ್ಯಪ್ಪನಿಗೆ ಅರಿವಿಲ್ಲವಷ್ಟೇ.
ಅಡಡ್ಡ ಕಾರಿಕೊಳಪ್ಪನಿಗೆ ಅವರ ಮಾರ್ಗದರ್ಶಕ ದಿ ಉಡುಪಿ ಸ್ವಾಮಿಗೋಳ ಹಿಂದೂ ಧರ್ಮದ ಬಗ್ಗೆ ಒಂದು ವೀಡಿಯೊ ಇದೆ ತೋರಿಸಬೇಕು,,,