ಅಡ್ಡಂಡ ಕಾರ್ಯಪ್ಪ: ಕೊಳಕು ಮನಸ್ಸಿನ ಅಪ್ರಬುದ್ಧ ಮಾತುಗಳು

ಈ ನಾಟಕದ ಲೇಖಕರು ನಾವಲ್ಲ ಎನ್ನುವ ಪ್ರಾಥಮಿಕ ಜ್ಞಾನವೇ ಅವರಿಗಿಲ್ಲ.

ಸಾಣೇಹಳ್ಳಿ

(ಬೆಳಗೆರೆ ಕೃಷ್ಣಶಾಸ್ತ್ರಿಅವರ ಕಥೆಯನ್ನು ತಿರುಚಿ ನಾಟಕ ಬರೆದಿದ್ದಾರೆ ಎಂಬ ಅಡ್ಡಂಡ ಕಾರ್ಯಪ್ಪ ಅವರ ಆರೋಪಕ್ಕೆ ಸಾಣೇಹಳ್ಳಿ ಶ್ರೀಗಳ ಪ್ರತಿಕ್ರಿಯೆ)

ಅಡ್ಡಂಡ ಕರಿಯಪ್ಪ ಎನ್ನುವ ವ್ಯಕ್ತಿ 2024ರ ‘ಶಿವಸಂಚಾರ’ದ ನಾಟಕಗಳಲ್ಲಿ ಒಂದಾದ “ತುಲಾಭಾರ” ನಾಟಕದ ಪೂರ್ಣ ಮಾಹಿತಿ ತಿಳಿಯದೆ, ನಾಟಕ ನೋಡದೆ ಆಡಿರುವ ಅಪ್ರಬುದ್ಧ ಮಾತುಗಳು ಅವರ ಕೊಳಕು ಮನಸ್ಸಿಗೆ ಹಿಡಿದ ಕನ್ನಡಿಯಾಗಿವೆ.

ಈ ನಾಟಕದ ಲೇಖಕರು ನಾವಲ್ಲ ಎನ್ನುವ ಪ್ರಾಥಮಿಕ ಜ್ಞಾನವೇ ಅವರಿಗಿಲ್ಲ. ನಾಟಕದ ಲೇಖಕರು ಉತ್ತರ ಕರ್ನಾಟಕದ ಬಿ ಅರ್ ಪೋಲಿಸ್ ಪಾಟೀಲರು. ನಿವೃತ್ತ ಪ್ರಾಚಾರ್ಯರು. ಕವಿ, ನಾಟಕಕಾರ, ಲಾವಣಿಕಾರ.

ಅವರು ೨೦೦೫ರಲ್ಲಿ ಧಾರವಾಡ ಆಕಾಶವಾಣಿ ಏರ್ಪಡಿಸಿದ್ದ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಗೆ ಬರೆದದ್ದು. ಸ್ಪರ್ಧೆಗೆ ಬಂದ ೮೧೭ ನಾಟಕಗಳಲ್ಲಿ ಪ್ರಥಮ ಬಹುಮಾನ ಪಡೆದದ್ದು. ಅದನ್ನು ಆಕಾಶವಾಣಿಗಾಗಿ ನಿರ್ದೇಶನ ಮಾಡಿದವರು ಡಾ. ಬಸವರಾಜ ಸಾದರ್ ಅವರು. ಆ ನಾಟಕವನ್ನು ರಂಗಭೂಮಿಗೆ ಈಗ ನಿರ್ದೇಶನ ಮಾಡಿರುವವರು ವಿಶ್ವೇಶ್ವರಿ ಹಿರೇಮಠ ಅವರು.

ನಾಟಕವನ್ನು ನಾಟಕವನ್ನಾಗಿ ನೋಡಬೇಕೇ ಹೊರತು ಕಾಮಾಲೆ ಕಣ್ಣುಗಳಿಂದ, ಜಾತಿಯ ಭೂತಗನ್ನಡಿಯಿಂದ ನೋಡಬಾರದು ಎನ್ನುವ ವಿವೇಕ ರಂಗಾಯಣದ ನಿರ್ದೇಶಕರಾಗಿದ್ದ ವ್ಯಕ್ತಿಗೆ ಗೊತ್ತಿಲ್ಲ ಎಂದರೆ ಇವರು ಯಾವ ಅರ್ಹತೆಯ ಮೇಲೆ ರಂಗಾಯಣದ ನಿರ್ದೇಶಕರಾಗಿರಬಹುದು?

ಆತ್ಮಾವಲೋಕನ ಮಾಡಿಕೊಂಡು ಬೆಳಕಿನತ್ತ ನಡೆಯುವ ಸಂಕಲ್ಪ ಮಾಡಲಿ. ಪೂರ್ವಗ್ರಹ ಪೀಡಿತರಾಗಿ ಯಾರನ್ನೂ ಅವಹೇಳನ ಮಾಡಬಾರದು. ಆಕಾಶಕ್ಕೆ ಉಗುಳಿದರೆ ಏನಾಗುತ್ತದೆ ಎಂದು ಹೇಳಬೇಕಿಲ್ಲ.

Share This Article
1 Comment

Leave a Reply

Your email address will not be published. Required fields are marked *