ಅಕ್ಕಲಕೋಟೆಯಲ್ಲಿ ೩೧ ವಿದ್ಯಾರ್ಥಿಗಳಿಗೆ ಬಸವ ಪ್ರತಿಭಾ ಪುರಸ್ಕಾರ ಪ್ರದಾನ

ಶಿಕ್ಷಣದಿಂದಲೇ ಮಾನಸಿಕ ಗುಲಾಮಗಿರಿ ನಿವಾರಣೆ: ಕೊರಣೇಶ್ವರ ಶ್ರೀ

ಅಕ್ಕಲಕೋಟ (ಮಹಾರಾಷ್ಟ್ರ)

ಅಕ್ಕಲಕೋಟೆ ತಾಲೂಕಿನ ವಾಗದರಿ ಜಾಗತಿಕ ಲಿಂಗಾಯತ ಮಹಾಸಭಾ ಘಟಕದ ವತಿಯಿಂದ ವಿರಕ್ತಮಠದ ಸಭಾಭವನದಲ್ಲಿ ಆಯೋಜಿಸಿದ್ದ ೧೦ ನೇ ಮತ್ತು ೧೨ನೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾನುವಾರ ಬಸವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಒಟ್ಟು ೩೧ ವಿದ್ಯಾರ್ಥಿಗಳಿಗೆ ಎಸ್‌ಬಿಐ ಬ್ಯಾಂಕ್‌ನ ವಾಗದರಿ ಶಾಖೆ ಮತ್ತು ಲೊಕಮಂಗಲ ಪತ್ತಿನ ಸಂಸ್ಥೆಯವತಿಯಿಂದ ನೆನಪಿನ ಕಾಣಿಕೆ, ಪ್ರಮಾಣಪತ್ರ, ಉಡುಗೊರೆ ನೀಡಿ ಗೌರವಿಸಲಾಯಿತು.

ಸಾನಿಧ್ಯ ವಹಿಸಿದ್ದ ಧುತ್ತರಗಾವ-ಉಸ್ತುರಿ ಮಠದ ಪೂಜ್ಯ ಕೊರಣೇಶ್ವರ ಮಹಾಸ್ವಾಮಿಗಳು ಶಿಕ್ಷಣ ಮಾತ್ರವೇ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮಾರ್ಗವಾಗಿದೆ. ವಿದ್ಯಾರ್ಥಿಗಳೇ ಮಾನಸಿಕ ಗುಲಾಮಗಿರಿಯಿಂದ ಹೊರಬಂದು ಸಾಧನೆ ಮಾಡಿರಿ, ಎಂದು ಕರೆ ಕೊಟ್ಟರು.

ಅರಿವೆ ಗುರುವಾಗಿದ್ದು, ನಮ್ಮಲ್ಲಿರುವ ಅರಿವು ಅಂದರೆ ತಿಳಿವಳಿಕೆ. ಅದುವೇ ಮನುಷ್ಯನ ಆತ್ಮಾಭಿಮಾನವನ್ನು ಜಾಗೃತ ಗೊಳಿಸುತ್ತದೆ, ಅಜ್ಞಾನದಿಂದ ಜ್ಞಾನದ ಕಡೆಗೆ ಒಯ್ಯುತ್ತದೆ. ಬಸವಣ್ಣನವರು ಮೊದಲಾಗಿ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಡಾ. ಅಂಬೇಡಕರ, ಗಾಡಗೆಬಾಬಾ ಮುಂತಾದವರು ಶಿಕ್ಷಣಕ್ಕೆ ಮಹತ್ವ ಕೊಟ್ಟವರು. ಶಿಕ್ಷಣವೇ ಜ್ಞಾನದ ಮಾರ್ಗವಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಾ.ಲಿಂ.ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ, ಕಳೆದ ಒಂದು ವರ್ಷದಿಂದ ಮಹಾಸಭಾವು ಸೊಲ್ಲಾಪುರ ಜಿಲ್ಲೆಯಲ್ಲಿ ಎಲ್ಲ ರಂಗದಲ್ಲಿ ಉತ್ತಮವಾಗಿ ಕಾರ್ಯ ಮಾಡುತ್ತಿದ್ದು, ವಿದ್ಯಾರ್ಥಿಗಳಿಗಾಗಿ ಉತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ವಾಗದರಿ ಘಟಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕಾರ್ಯ ಮಾಡಿದೆ ಎಂದರು.

ವಾಗದರಿ ಎಸ್‌ಬಿಐ ಬ್ಯಾಂಕ್‌ನ ವ್ಯವಸ್ಥಾಪಕ ಕೀರ್ತಿಸಾಗರ ಮಾನೆ, ಬಸವಣ್ಣ ಮತ್ತು ಪರಮೇಶ್ವರರ ಪ್ರತಿಮೆಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸೇವಾ ನಿವೃತ್ತಿ ಹೊಂದಿದ ಎಎಸ್‌ಐ ಶಿವಶರಣ ಪೋಮಾಜಿ, ಚಾಲಕ ಚಂದ್ರಾಮ ಪೋಮಾಜಿಯವರನ್ನು, ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ ಯುವ ಉದ್ಯಮಿ ಸಂತೋಷ ಹರಕಾರೆ ಮತ್ತು ಸಾಫ್ಟವೇರ್ ಎಂಜಿನಿಯರ್ ರಾಜಕುಮಾರ ಪೋಮಾಜಿಯವರನ್ನು ಸತ್ಕರಿಸಲಾಯಿತು.

ವಾಗದರಿ ವಿರಕ್ತಮಠದ ಶಿವಲಿಂಗೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಪರಮೇಶ್ವರ ಆರಾಧನಾ ಪಂಚಕಮೀಟಿಯ ಅಧ್ಯಕ್ಷ ಎಎಸ್‌ಐ ರಾಜಕುಮಾರ ನಿಂಬಾಳೆ ಅಧ್ಯಕ್ಷತೆ ವಹಿಸಿದ್ದರು.

ಜಾ.ಲಿಂ.ಮದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗೋಗಾವ, ವಾಗದರಿ ಘಟಕದ ಶರಣಪ್ಪ ಮಂಗಾಣೆ, ವಾಗದರಿ ಗ್ರಾಪಂ ಅಧ್ಯಕ್ಷ ಶಿವಾನಂದ ಘೊಳಸಗಾವ, ಶೇಳಕೆ ಶಿಕ್ಷಣ ಸಂಸ್ಥೆಯ ಮಾಜಿ ಚೆರಮನ್ ಮಲ್ಲಿನಾಥ ಶೇಳಕೆ, ಶೇಳಕೆ ಪ್ರೌಢಶಾಲೆಯ ಮುಖ್ಯಗುರು ಅನಿಲ ದೇಶಮುಖ, ಬಾಲರೋಗ ತಜ್ಞ ಡಾ. ಶಿವರಾಜ ಸಂಗಶೆಟ್ಟಿ, ಮಾಜಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಭೈರಾಮಡಗಿ, ಧೋಂಡಪ್ಪ ಯಮಾಜಿ, ನಾಮದೇವ ಫುಲಾರಿ, ಕಾರ್ಯದರ್ಶಿ ಶಾಂತೇಶ್ವರ ಕೋಟೆ, ಕೊಶಾಧ್ಯಕ್ಷ ಅಶೋಕ ಪೋಮಾಜಿ, ಸಂತೋಷ ಪೋಮಾಜಿ, ಶಿವರಾಜ ಪೋಮಾಜಿ, ಮಲಕಪ್ಪ ಪೋಮಾಜಿ, ಪ್ರಶಾಂತ ಪ್ರಸಾದ, ಸಿದ್ದು ಲಾಳಸಿರೆ, ಸುಭಾಷ ಪಾಟೀಲ, ನಾಗಪ್ಪ ಬಿರಾದಾರ, ಪಂಡಿತ ಡ್ರೈವ್ಹರ್, ಶಿವಶರಣ ಗೌಂಡಿ, ಮಲ್ಲಯ್ಯ ಮಠಪತಿ, ಪರಮೇಶ್ವರ ಮುನೋಳಿ, ಚಂದ್ರಕಾಂತ ಯಮಾಜಿ, ಮಹಾದೇವ ಸೊನಕಾವಡೆ ಸೇರಿದಂತೆ ಹಲವರು ಇದ್ದರು.

ಕೋಶಾಧ್ಯಕ್ಷ ಅಶೋಕ ಪೋಮಾಜಿ ಸ್ವಾಗತಿಸಿದರು, ಬಾಲಕಿ ಬನಶಂಕರ ಸ್ವಾಮಿ ವಚನ ಗಾಯನ ಮಾಡಿದಳು, ಘಟಕದ ಉಪಾಧ್ಯಕ್ಷ ಘಾಳಯ್ಯ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರೆ, ಶಿವಾನಂದ ಗೋಗಾವ ವಂದಿಸಿದರು.

ಪ್ರಶಸ್ತಿ ಪಡೆದವರು

ಕರುಣ ನಡಗೇರಿ, ವೇದಿಕಾ ಕಲಬುರಗಿ, ಶೀತಲ ಪೋಮಾಜಿ, ಪ್ರತಿಕ್ಷಾ ನಂದೆ, ಸಮೃದ್ಧಿ ಸಿರಗಾಪುರೆ, ಶುಭಂ ಫುಲಮಾಳಿ, ಅಬ್ದುಲ್ ಬಾಗವಾನ, ಲಕ್ಷ್ಮಿ ವಾಗದರಗಿ, ಸೃಷ್ಟಿ ಮೈಂದರ್ಗಿ, ಸಮರ್ಥ ಫುಲಮಾಳಿ, ಕೀರ್ತಿ ಸಂಗಶೆಟ್ಟಿ, ಅಸ್ಮಿತ ಬಿರಾಜದಾರ, ಶ್ವೇತಾ ಹಿರಾಪುರೆ, ಗಾಯತ್ರಿ ಬಿರಾಜದಾರ, ಲಕ್ಷ್ಮಿ ಮಾಳಿ, ರತ್ನಬಾಯಿ ಸಾವಳೇಶ್ವರ, ಮಲ್ಲಿಕಾರ್ಜುನ ಚಲಗೇರಿ, ಮನಿಷಾ ಆಲೂರೆ, ಸುಚಿತ ಹಡಪದ, ಶಂಸುದ್ದಿನ್ ಮುಲ್ಲಾ, ಭವ್ಯಾ ಧವಣೆ, ಸಮರ್ಥ ಸ್ವಾಮಿ, ಸಂಕೇತ ಅಷ್ಠಗಿ, ಪ್ರದೀಪ ಸಲಗರೆ, ಶ್ರೇಯಾ ಶಿರಗಣ, ಲಕ್ಷ್ಮಿ ಚೊಳ್ಳೆ, ಸೃಷ್ಟಿ ಬರ‍್ಹಾಣಪುರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *