“ನೆಲ ಆಳ್ವನ ಹೆಣ ಎಂದರೆ ಒಂದೆಡಕೆಗೆ ಕೊಂಬವರಿಲ್ಲ”

ಪ್ರೇಮಕ್ಕ ಅಂಗಡಿ
ಪ್ರೇಮಕ್ಕ ಅಂಗಡಿ

ಬೈಲಹೊಂಗಲ:

ಸತ್ತ ಪ್ರಾಣಿ, ಪಕ್ಷಿಗಳ ಶರೀರದ ಭಾಗಗಳು ಮರಣದ ನಂತರ ಹಲವಾರು ವಸ್ತುಗಳಾಗಿ ಉಪಯೋಗವಾಗುತ್ತವೆ. ಮಾನವನ ಆತ್ಮ ಪಂಚಭೂತಗಳಲ್ಲಿ ಲೀನವಾಗಿ ಶರೀರ ನಶಿಸಿಹೋಗುತ್ತದೆ.

ಬಸವಣ್ಣನವರು ವ್ಯಾದನೊಂದು ಮೊಲವ ತಂದು ಸಲುವ ಹಾಗಕ್ಕೆ ಬೆಲೆಗೈವರಯ್ಯ ನೆಲ ಆಳುವವನ ಹೆಣವಾದರೂ ಒಂದು ಅಡಿಕೆಗೆ ಕೊಂಬವರಿಲ್ಲ ಎಂದು ಮಾನವ ಶರೀರದ ನಶ್ವರತೆಯನ್ನು ಸಾರುವ ವಚನ ವಿವರಿಸಿ ದೇಹದಾಸೋಹ ಪವಿತ್ರ ಕಾರ್ಯ ಎಂದು ಡಾ. ಮಹಾಂತೇಶ ರಾಮಣ್ಣವರ ಹೇಳಿದರು.

ಸ್ಥಳೀಯ ಪತ್ರಿ ಬಸವೇಶ್ವರ ಅನುಭವ ಮಂಟಪದ 39ನೇ ಮಾಸಿಕ ಅನುಭಾವ ಗೋಷ್ಟಿಯಲ್ಲಿ ಪ್ರಸಾದ ಕಾಯ ಕೆಡಿಸಲಾಗದು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

18ನೆಯ ಶತಮಾನದ ವೈದ್ಯಕೀಯ ಕ್ಷೇತ್ರ ವೈಜ್ಞಾನಿಕವಾಗಿ ಸಂಶೋಧಿಸಿ ಮಾನವ ಶರೀರದ ಭಾಗಗಳನ್ನು ಇನ್ನೊಂದು ಜೀವಕ್ಕೆ ಕಸಿಗೈಯುವ ವಿಧಾನ ಕಂಡುಹಿಡಿದು ಇವತ್ತು ಆಧುನಿಕ ಸ್ಪರ್ಶನೀಡಿ ಮಾನವ ಶರೀರದ ಸದ್ಬಳಕೆ ನಡೆದಿದೆ.

ಮಾನವನಿಗೆ ಇರುವಾಗಲೂ ಸತ್ತಾಗಲೂ ಬೆಲೆ ಇದೆ ಎನ್ನುವುದನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದೇಹದಾಸೋಹ ಗೈದು ಸಾವಿರಾರು ಜನರಿಗೆ ಮರು ಹುಟ್ಟು ನೀಡುವ ಸಾಮರ್ಥ್ಯ ಒಂದು ದೇಹ ದಾನಕ್ಕಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಪ್ರೇರಣೆಗೊಂಡು ಹಲವಾರು ಜನರು ದೇಹದಾಸೋಹದ ವಾಗ್ದಾನ ಮಾಡಿದರು.

ಅಧ್ಯಕ್ಷತೆ ವಹಿಸಿದ ಶಿವಲೀಲಾ ಹುಲಿಕಟ್ಟಿ ವೈದ್ಯ ಸಂಗಣ್ಣನ ವಚನಗಳನ್ನು ಕುರಿತು ವಿವರಿಸಿ ಮಾತನಾಡಿದರು.

ನೇತೃತ್ವ ವಹಿಸಿದ್ದ ಪ್ರೇಮಕ್ಕ ಅಂಗಡಿ ಮಾತನಾಡಿ, ಒತ್ತಡದ ಜೀವನದಲ್ಲಿ ಧರ್ಮ ದೇವರು ಸತ್ಸಂಗ ಗುರು ನಾಮಸ್ಮರಣೆಗಳು ನೆಮ್ಮದಿಯ ಬದುಕಿಗೆ ಸಹಕಾರಿ ಆಗಿವೆ ಎಂದರು.

ಉದ್ಯಮಿ, ದಾಸೋಹಿ ಕಸ್ತೂರಿ ಮತ್ತು ಸಿದ್ದರಾಮ ಲಿಂಗಶೆಟ್ಟಿ ಶರಣ ದಂಪತಿಗಳನ್ನು ಸನ್ಮಾನಿಸಲಾಯಿತು.

ದುಂಡಯ್ಯ ಕುಲಕರ್ಣಿ, ತಾಳಿಕೋಟಿಮಠ ಮಂಗಲಾ, ಅಕ್ಕಿ ಗಿರಿಜಕ್ಕ, ಪಾಟೀಲ ಕಲಾವತಿ, ಕಡಕೋಳ ನಿರ್ಮಲ, ಕಲ್ಬುರ್ಗಿ ಗೀತಾ, ಅರಳಿಕಟ್ಟಿ ಅನುರಾಧ, ಕರಡಿಗುದ್ದಿ ವೀರಭದ್ರಪ್ಪಾ, ಕಾಪಸೆ ಮೋಹನ, ಬೇವಿನಗಿಡದ ಗಂಗಣ್ಣ, ಅಂಗಡಿ ನಾಗನಗೌಡ, ಪಾಟೀಲ ಬಸವರಾಜ, ಮಾಟೊಳ್ಳಿ ಅಶೋಕ, ಸಾಲಿ ವೀರಪ್ಪ, ಹವಳಪ್ಪನವರ ವೀರಣ್ಣ, ಸನ್ಮನಿ ನಗರದ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾಡಪ್ಪ ರಾಮಗುಂಡಿ ಸ್ವಾಗತಿಸಿದರು ಸಂತೋಷ್ ಕೊಳವಿ ವಂದಿಸಿದರು. ಮುಕ್ತಾಯಕ್ಕ ಬಳಗ ಪ್ರಾರ್ಥಿಸಿದರು ರಾಜೇಶ್ವರಿ ದ್ಯಾಮನಗೌಡ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *