ನಿಜಾಚರಣೆ: ಗುಂಡ್ಲುಪೇಟೆಯಲ್ಲಿ ಬಸವತತ್ವದ ಆರತಿ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಗುಂಡ್ಲುಪೇಟೆ:

ತಾಲೂಕಿನ ಚೆನ್ನವಡೆಯನಪುರ ಗ್ರಾಮದ ದೇವಮಣಿ ಮತ್ತು ಜಗದೀಶ ಶರಣ ದಂಪತಿಗಳ ಪುತ್ರಿ ‘ಜಯಶ್ರೀ’ ಅವರ ಆರತಿ ಶುಭಕಾರ್ಯವು ಶರಣ ತತ್ವದಂತೆ ಇತ್ತೀಚೆಗೆ ನಡೆಯಿತು.

ಮೂಡಗೂರು ವಿರಕ್ತಮಠದ ಪೂಜ್ಯ ಇಮ್ಮಡಿ ಉದ್ದಾನಸ್ವಾಮಿಗಳವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಇಷ್ಟಲಿಂಗ ಪೂಜೆ ನೆರವೇರಿಸಿಕೊಟ್ಟರು. ಮೊದಲು ಜಯಶ್ರೀ ಅವರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು. ಮನೆಯ ದಂಪತಿಗಳು ಮತ್ತು ಜಯಶ್ರೀ ಅವರು ಇಷ್ಟಲಿಂಗ ಪೂಜೆ ಮಾಡಿಕೊಂಡರು.

ಸಂಬಂಧಿಕರು ಪಾಲ್ಗೊಂಡಿದ್ದ ಕಾರ್ಯಕ್ರಮವು ಸರಳವಾಗಿ, ಅರ್ಥಪೂರ್ಣವಾಗಿ ನಡೆದು, ಎಲ್ಲರಿಗೂ ಇಷ್ಟಲಿಂಗ ಯೋಗ, ವಿಭೂತಿ, ರುದ್ರಾಕ್ಷಿಯ ಮಹತ್ವವನ್ನು ತಿಳಿಸಿಕೊಡಲಾಯಿತು.

ನಂತರ ಹಾಜರಿದ್ದವರು ಕೂಡ ಇಷ್ಟಲಿಂಗ ಪೂಜೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಅನುಭಾವ ನೀಡಿದ ಶ್ರೀಗಳು, ಲಿಂಗಾಯತ ಧರ್ಮದಲ್ಲಿ ಕಾಯಕವೇ ಪ್ರಧಾನವಾದುದು. ಆದ್ದರಿಂದ ಪ್ರತಿಯೊಬ್ಬರೂ ಕಾಯಕದಲ್ಲಿ ನಿರತರಾಗಿ, ಸಂಪಾದಿಸಿದ ಹಣವನ್ನು ದುಂದುವೆಚ್ಚ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ದಾಸೋಹ ಮನೋಭಾವ ರೂಢಿಸಿಕೊಳ್ಳಬೇಕು.

ನಿತ್ಯ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿಕೊಂಡು ತಮ್ಮ ತಮ್ಮ ಕಾಯಕಕ್ಕೆ ತೆರಳಬೇಕು. ಇಷ್ಟಲ್ಲದೆ ಅನ್ಯ ದೈವಂಗಳಿಗೆ ಹಣ ಖರ್ಚುಮಾಡಿ ವ್ಯರ್ಥ ಮಾಡಿಕೊಳ್ಳಬಾರದು ಎಂದರು.

ಪ್ರಸ್ತುತ ದಿನಮಾನಗಳಲ್ಲಿ ನಾವು ಮಠಾಧೀಶರು ಗ್ರಾಮಗಳಿಗೆ ತೆರಳಿ ಶರಣತತ್ವವು ಸರಳತತ್ವವಾಗಿದೆ ಇದನ್ನು ಅನುಸರಿಸುವಂತೆ ಕೇಳಿಕೊಂಡರೂ ಜನ ಜಾಗೃತರಾಗುತ್ತಿಲ್ಲ. ಇದು ಬೇಸರ ತರುತ್ತದೆ ಜೊತೆಗೆ ನಮಗೂ ಮುಜುಗರ ಆಗುತ್ತದೆ.

ಶರಣತತ್ವ ನಿತ್ಯ ನಿರಂತರ ಸತ್ಯವಾಗಿದೆ, ಇದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರಮಯವಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಯುವಕರು, ಮಹಿಳೆಯರು ಇನ್ನಾದರೂ ತತ್ವವನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಲಘು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ವಿಶ್ವ ಬಸವಸೇನೆಯ ಅಧ್ಯಕ್ಷರಾದ ಬಸವ ಯೋಗೇಶ ಮತ್ತು ಕಾಯಕಯೋಗಿ ಸಂಘಟನೆಯ ಮುದ್ದಹಳ್ಳಿ ಅಶೋಕ ಹಾಗೂ ಬಸವ ಬಸವಭಕ್ತರಾದ ಕಸುವಿನಹಳ್ಳಿ ಗುರುಸ್ವಾಮಿಗಳು ಹಾಗೂ ದೊಡ್ಡಹುಂಡಿ ಕುಮಾರಣ್ಣ ಹಾಜರಿದ್ದು ಕುಟುಂಬಸ್ಥರು, ಸಂಬಂಧಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಬಂದವರು ಜಯಶ್ರೀ ಅವರಿಗೆ ಪುಷ್ಪ ಹಾಕಿ ಶುಭ ಹಾರೈಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ಇಂತಹ ಕಾರ್ಯಕ್ರಮಗಳನ್ನ ಸರಳವಾಗಿ ನೇರವೇರಿಸಿ ಇತರರಿಗೆ ಮಾದರಿಯಾಗಿರುವುದು ಉತ್ತಮವಾಗಿದೆ. ದುಂದುವೆಚ್ಚ ಮಾಡದೆ ಸರಳವಾಗಿ ಇಂತಹ ಕಾರ್ಯಕ್ರಮಗಳನ್ನ ಮಾಡುವ ಮುಖಾಂತರ ಸಾಲದ ಸುಳಿಯಲ್ಲಿ ಸಿಲುಕದೆ ಬದುಕು ನಡೆಸಬೇಕಾಗಿದೆ.

Leave a Reply

Your email address will not be published. Required fields are marked *