ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ರಚನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಬಸವಕಲ್ಯಾಣ ವತಿಯಿಂದ ಪ್ರತಿವರ್ಷ ನಡೆಯುವ ಶರಣ ಕಮ್ಮಟ ಅನುಭವ ಮಂಟಪ ಉತ್ಸವದ ಪೂರ್ವಭಾವಿ ಸಭೆ  ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯದಲ್ಲಿ ನಡೆಯಿತು.

ಸಭೆಯಲ್ಲಿ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಹುಲಸೂರು, ಪೂಜ್ಯ ಗುರುಬಸವ ಪಟ್ಟದ್ದೇವರು ಭಾಲ್ಕಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಬೀದರ, ಪೂಜ್ಯ ಪ್ರಭುದೇವ ಸ್ವಾಮಿಗಳು ಗೋರ್ಟಾ, ಪೂಜ್ಯ  ಶಿವಾನಂದ ಸ್ವಾಮಿಗಳು, ಬಸವಕಲ್ಯಾಣ ಮುಂತಾದ ಪೂಜ್ಯರು ಸಮ್ಮುಖ ವಹಿಸಿದ್ದರು.

ಬರುವ ೨೯ ಮತ್ತು ೩೦, ೨೦೨೫ ರಂದು ೪೬ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ ಅತ್ಯಂತ ವೈಭವದಿಂದ ನೆರವೇರಿಸುವ ದಿಶೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿ, ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಹಾಗೂ ಕಾರ್ಯಾಧ್ಯಕ್ಷರಾಗಿ ಶಾಸಕರಾದ ಶರಣು ಸಲಗರ ಅವರಿಗೆ ಆಯ್ಕೆ ಮಾಡಿ ಆಶೀರ್ವದಿಸಿದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಅವರು ಕಳೆದ ೪೫ ವರ್ಷಗಳಿಂದ ಬಸವಾದಿ ಶರಣರ ಚಿಂತನೆಗಳು ಜನರಲ್ಲಿ ಪ್ರಸಾರ ಮಾಡುವ ಉದ್ದೇಶದಿಂದ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಈ ಭಾಗದ ನಡೆದಾಡುವ ದೇವರಾದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಶರಣ ಕಮ್ಮಟ ಆರಂಭಿಸಿದರು. ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಶರಣ ಕಮ್ಮಟ ಕಾರ್ಯಕ್ರಮವೆ ಕಾರಣಿಭೂತವಾಗಿದೆ. ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ನೇತೃತ್ವದಲ್ಲಿ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಅತ್ಯಂತ ವೈಭವದಿಂದ ಸಾಗುತ್ತಿದೆ. ಈ ವರ್ಷವೂ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡೋಣವೆಂದು ನುಡಿದರು.

ಸ್ವಾಗತ ಸಮಿತಿ ಕಾಯಾಧ್ಯಕ್ಷರಾದ ಶರಣು ಸಲಗರ, ವಿಜಯಸಿಂಗ್, ವಿಧಾನ ಪರಿಷತ್ತು ಸದಸ್ಯರಾದ ತಿಪ್ಪಣ್ಣ ಕಮಕನೂರು, ಬಾಬು ಹೊನ್ನಾ ನಾಯಕ, ಭಾರತೀಯ ಬಸವ ಬಳಗ ರಾಜ್ಯಾಧ್ಯಕ್ಷರಾದ ಬಾಬು ವಾಲಿ, ಜೈರಾಜ ಖಂಡ್ರೆ, ಬಸವರಾಜ ಬುಳ್ಳಾ, ಶಶಿಕಾಂತ ದುರ್ಗೆ, ಡಾ.ಎಸ್.ಬಿ. ದುರ್ಗೆ, ಕುಪೇಂದ್ರ ಪಾಟೀಲ, ಶಿವರಾಜ ಪಾಟೀಲ, ಡಾ. ಸೋಮನಾಥ ಯಾಳವಾರ, ಸಿದ್ಧಯ್ಯ ಕಾವಡಿಮಠ, ವಿಶ್ವನಾಥಪ್ಪ ಬಿರಾದಾರ, ಗುರುನಾಥ ಗಡ್ಡೆ, ರವಿ ಕೋಳಕೂರ, ಶಿವಕುಮಾರ ಬಿರಾದಾರ, ವಿಜಯಪ್ರಕಾಶ ಸದಾನಂದೆ, ಜಗನ್ನಾಥ ಬಿರಾದಾರ, ನಿರ್ಮಲಾ ಶಿವಣಕರ, ಮೀನಾಕ್ಷಿ ಬಿರಾದಾರ, ಲಕ್ಷ್ಮೀಬಾಯಿ ಪಾಟೀಲ, ಸುಲೋಚನಾ ಗುದಗೆ, ಸುಮಿತ್ರಾ ದಾವಣಗಾವೆ ಕವಿತಾ ಸಜ್ಜನ, ಕವಿತಾ ರಾಜೋಳೆ, ಸವಿತಾ ಅಲಗುಡ, ಸೋನಾಲಿ ನೀಲಕಂಠೆ ಹಾಗೂ ಜಿಲ್ಲೆಯ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದರು. ನವಲಿಂಗ ನಿರೂಪಿಸಿದರು. ದೀಪಕ ಠಮಕೆ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
1 Comment
  • ಲಿಂಗಾತಕ್ಕೆ ವಿರುದ್ದವಶಗಿರುವ ಈಶ್ವರ ಖಂಡ್ರೆ ಸ್ವಾಗತ ಸಮಿಯ ಅಧ್ಯಕ್ಷ ವಾರ್ಹೆ ವಾಹ್, ಶರಣು ಸಲಗಾರ ಕಾರ್ಯ ಅದ್ಯಕ್ಷ ಭಲೇ ಭೇಷ, ಬಸವ ಸಂಸ್ಕೃತಿಕ ಅಭಿಯಾನ ಇದಗದಾಗಲೇ ದಸರಾ ದರ್ಬಾರ ನಡೆಸಿದವನು ಭಾಲ್ಕಿ ಅಪ್ಪಗಳು ಕೆಂಡ ಕಟ್ಟಿ ಕೊಂಡು ಜೀವನ ನಡೆಸುತ್ತಿದ್ದಾರೆ , ಸದಾ ಲಿಂಗಾಯತ ವಿರುದ್ದ ಹೇಳಿಕೆ ಕೊಡುವ ಈಶ್ವರ ಖಂಡ್ರೆಯ ಕಿವಿ ಹಿಂಡುವ ತಾಕತ್ತು ಭಾಲ್ಕಿ ಅಪ್ಪಗಳಲ್ಲಿ ಇಲ್ಲ. ಇದರಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಹಿನ್ನಡೆ ಆಗುತ್ತಿದೆ.

Leave a Reply

Your email address will not be published. Required fields are marked *