ಜಾತಿ, ಧರ್ಮದ ಸಂಘರ್ಷಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ: ಡಾ. ಎಚ್.ಸಿ. ಮಹಾದೇವಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ದೇಶದಲ್ಲಿ ಅಶಾಂತಿ, ಧರ್ಮಾಂಧತೆ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಂಘರ್ಷಗಳು ಕಂಡುಬರುತ್ತಿವೆ. ಮತ್ತು ಮೇಲು ಕೀಳು ಭಾವನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸರಿಯಾದ ಉತ್ತರ ವಚನ ಸಾಹಿತ್ಯದಲ್ಲಿದೆ, ಇಡೀ ವಿಶ್ವಕ್ಕೆ ವಚನ ಸಾಹಿತ್ಯದ ಮೂಲಕ ಮೌಲ್ಯಭರಿತ ಸಂದೇಶಗಳನ್ನು ಶರಣರು ಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ಹೇಳಿದರು.

ಇಲ್ಲಿನ ಅನುಭವ ಮಂಟಪದ ಹತ್ತಿರದ ಬಸವ ಮಹಾಮನೆ ಸಂಸ್ಥೆ ವತಿಯಿಂದ ರವಿವಾರ ಹಮ್ಮಿಕೊಂಡ “ಸಮಾನತಾ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸವನ್ನು ನಾವು ಸರಿಯಾಗಿ ತಿಳಿದುಕೊಂಡಿದ್ದರೆ ಮಾತ್ರ ಚರಿತ್ರೆ ಬರೆಯಬಹುದು. ಇತಿಹಾಸವನ್ನು ನೆನೆಸುವಂತಹ ಮಹಾ ಸಮಾವೇಶ ಇದಾಗಿದೆ.

ಎಲ್ಲರು ಪರಿವರ್ತನೆ ಕಾಣಬೇಕು, ಗೌತಮ ಬುದ್ಧರ ನಾಲ್ಕನೆ ಶತಮಾನದಲ್ಲಿನ ಜ್ಞಾನ, ಸಮತೆ, ಕರುಣೆ ಇವೆಲ್ಲ ಭಾವನೆಗಳು ಜನರಲ್ಲಿ ಬರಬೇಕು, ಬುದ್ದರು ಇಡೀ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ. ಅವರ ದಾರಿಯಲ್ಲಿ ನಾವೆಲ್ಲರು ಸಾಗಬೇಕಾಗಿದೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಮೂಲಕ ಸಮಾನತೆ ತಂದು ವಿಶೇಷವಾಗಿ ಮಹಿಳೆಯರಿಗೆ ಸ್ಥಾನಮಾನ ಕೊಟ್ಟರು. ಮೂಢನಂಬಿಕೆ ಅಲ್ಲದೆ ಸನಾತನವಾದ ವಿರುದ್ಧದ ಹೋರಾಟ ಅವರ ನಿಲುವಾಗಿತ್ತು ಎಂದು ಹೇಳಿದರು. ಅನುಭವ ಮಂಟಪದ ನಿರ್ಮಾಣ ಹೋರಾಟ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿದ್ದಾಗ ರಚನೆಯಾಗಿದೆ. ಇದಕ್ಕೆಲ್ಲ ಧರಂಸಿಂಗ್, ಖರ್ಗೆ, ಸಿದ್ರಾಮಯ್ಯ, ಯಡಿಯೂರಪ್ಪ, ಬಸವರಾಜ ಪಾಟೀಲ್ ಹುಮನಾಬಾದ, ಭೀಮಣ್ಣ ಖಂಡ್ರೆ ಅವರುಗಳ ಕೊಡುಗೆಯಿದೆ ಎಂದರು.

ರಾಜ್ಯದಲ್ಲಿ ಸಿದ್ರಾಮಯ್ಯನವರ ಸರ್ಕಾರ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ರಾಜ್ಯದ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಓದುವಂತೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಬಸವ ಮಹಾಮನೆ ಸಂಸ್ಥೆ ಅಧ್ಯಕ್ಷ ಡಾ. ಬೆಲ್ದಾಳ ಶರಣರು ನೇತೃತ್ವ ವಹಿಸಿ ಮಾತನಾಡಿ, ಭಾರತ ದೇಶದಲ್ಲಿ ಹೆಣ್ಣು ಗಂಡು ಮೇಲು ಕೀಳು ಎನ್ನುವ ಭೇದವಿಲ್ಲದೆ ಸಮಾನತೆ ತರುವದು ಮತ್ತು ಮನುಷ್ಯರಾಗಿ ಹುಟ್ಟಿದವರು ಸಮಾನರು, ಎಲ್ಲರಲ್ಲಿ ಸೌಹಾರ್ದತೆ ಭಾವನೆ ತರುವದು ಇಂದು ಬಹಳ ಅವಶ್ಯಕವಾಗಿದೆ ಅದುವೆ ನಮ್ಮ ಮೂಲ ಗುರಿಯಾಗಿದೆ ಎಂದು ಹೇಳಿದರು.

ಪೂಜ್ಯ ಚನ್ನಬಸವಾನಂದ ಸ್ವಾಮಿ, ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮಿ, ಬೀದರ ಗುರುನಾನಕ ಝೀರಾ ಗ್ಯಾನಿ ದರಬಾರಸಿಂಗ್ ಮಾತನಾಡಿ, ಶರಣರ ನುಡಿ ಮತ್ತು ನಡೆ ಮತ್ತು ಮನುಕುಲಕ್ಕೆ ನೀಡಿದ ಅವರ ಕೊಡುಗೆ ಬಗ್ಗೆ ಹೇಳಿದರು.

ಕಲಬುರಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ, ಶರಣರ ಆಚಾರ ವಿಚಾರಗಳು ಮನುಷ್ಯನ ಜೀವನದಲ್ಲಿ ಅಲ್ಲದೆ ಸಮಾಜ ಸುಧಾರಣೆಗಾಗೆ ಶ್ರಮಿಸಿದವರು ಎಂದರು. ನನ್ನ ಅನುದಾನದಲ್ಲಿ ಹತ್ತು ಲಕ್ಷ ರೂ. ದೇಣಿಗೆ ನೀಡುವುದಾಗಿ ತಿಳಿಸಿದರು.

ಕರ್ನಾಟಕ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಬೆಲ್ದಾಳ ಶರಣರ ಸಾಧನೆ ಕುರಿತು ವಿವರಿಸಿದರು.ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು.

ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ ಖಂಡ್ರೆ, ಹುಮನಬಾದ ಶಾಸಕ ಸಿದ್ದು ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ, ಮೀನು ಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಾಲಾ ನಾರಾಯಣ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ರಾಜಶ್ರೀ ಶ್ರೀಕಾಂತಸ್ವಾಮಿ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಧನರಾಜ ತಾಳಂಪಳ್ಳಿ, ಬಾಬು ಹೊನ್ನಾನಾಯಕ, ದಿಲೀಪ ಸಿಂಧ್ಯೆ, ಅಬ್ದುಲ್ ಮನ್ನಾನ್, ರವಿ ಬೋರಾಳೆ, ರವಿ ಗಾಯುಕವಾಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಎಸ್.ಎಂ. ಭಕ್ತ ಕುಂಬಾರ ನಿರೂಪಿಸಿದರು. ಲಕ್ಷ್ಮಣ ದಸ್ತಿ, ಪಿಂಟು ಕಾಂಬಳೆ, ದಿಗಂಬರ್ ಜಲ್ದೆ, ಸಂಜು ಗಾಯಕವಾಡ ಪಾಲ್ಗೊಂಡಿದ್ದರು.

ಇದೆ ಸಂದರ್ಬಧಲ್ಲಿ ಶಾಹಿನ್ ಗ್ರೂಫ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ. ಅಬ್ದುಲ್ ಖಾದಿರಸಾಬ ಇವರಿಗೆ ‘ಸೌಹಾರ್ದರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಸಮಗ್ರ ವಚನಗಳ ಪುಸ್ತಕ ಬಿಡುಗಡೆಗೊಂಡಿತು.

Share This Article
Leave a comment

Leave a Reply

Your email address will not be published. Required fields are marked *