ಬಸವಗುರುಪೂಜೆ, ವಚನ ಪಠಣದೊಂದಿಗೆ ಅನುಭವ ಮಂಟಪ ಉತ್ಸವ ಆರಂಭ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

೪೫ನೇ ಶರಣ ಕಮ್ಮಟ ಅನುಭವಮಂಟಪ ಉತ್ಸವ-೨೦೨೪ ಬಸವಗುರುಪೂಜೆ ಹಾಗೂ ವಚನ ಪಠಣದೊಂದಿಗೆ ಪ್ರಾರಂಭಗೊಂಡಿತು. ಷಟ್‌ಸ್ಥಲ ಧ್ವಜಾರೋಹಣ ಪ್ರೊ.ಸಿದ್ಧಣ್ಣ ಲಂಗೋಟಿ ಅವರು ನೆರವೇರಿಸಿಕೊಟ್ಟರು.

ಸಾನಿಧ್ಯ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ವಹಿಸಿಕೊಂಡಿದ್ದರು.
ಲಿಂಗಾಯತ ಧರ್ಮಿಯರಿಗೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳು ಪ್ರಮುಕವಾದ ತತ್ವಸಿದ್ಧಾಂತಗಳಿವೆ. ಅಂತಹ ತತ್ವಗಳು ಕೊಟ್ಟ ಬಸವಾದಿ ಶರಣರು ನಮಗೆಲ್ಲ ಪರಮಪೂಜ್ಯರು, ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಂತರ ಉದ್ಘಾಟನಾ ಸಮಾರಂಭ ಪೂಜ್ಯ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸನ್ನಿಧಾನದಲ್ಲಿ ಜರುಗಿತು.

ಪೂಜ್ಯ ಶ್ರೀ ಮ.ನಿ.ಪ್ರ.ಗುರುಮಹಾಂತ ಮಹಾಸ್ವಾಮಿಗಳು, ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠ, ಇಳಕಲ್, ಪೂಜ್ಯ ಶ್ರೀ ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಸಂಸ್ಥಾನ ಹಾರಕೂಡ, ಪೂಜ್ಯ ಶ್ರೀ ಡಾ.ಶಿವಾನಂದ ಮಹಾಸ್ವಾಮಿಗಳು, ಗುರುಬಸವೇಶ್ವರ ಸಂಸ್ಥಾನ ಮಠ, ಹುಲಸೂರು, ಪೂಜ್ಯ ಶ್ರೀ ಮ.ನಿ.ಪ್ರ.ಶ್ರೀ ಸಿದ್ಧಲಿಂಗ ಸ್ವಾಮಿಗಳು, ನೆಲಮಂಗಲ, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ದಿವ್ಯ ನೇತೃತ್ವ ವಹಿಸಿದ್ದರು.

ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಸದಾಶಯ ನುಡಿಗಳಲ್ಲಿ ೧೨ನೇ ಶತಮಾನದ ಬಸವಾದಿ ಶರಣರ ಗತವೈಭವ ಮತ್ತೊಮ್ಮೆ ಬಸವಕಲ್ಯಾಣದಲ್ಲಿ ಬರಬೇಕೆಂಬುದು ವಿವರಿಸುತ್ತಾ ಆ ನಿಟ್ಟಿನಲ್ಲಿ ಇಂದು ನಡೆಯುತ್ತಿರುವ ಎಲ್ಲ ಚಟುವಟಿಕೆಗಳು ಪೂರಕವಾಗಿವೆ ಎಂದರು. ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಜಗತ್ತಿನಲ್ಲಿ ಸಮಾಜೋದ್ಧಾರ್ಮಿಕ ಕ್ರಾಂತಿ ನಡೆದದ್ದು ಅದು ಬಸವಕಲ್ಯಾಣದಲ್ಲಿ ಕಾಯಕ ಸಮೃದ್ಧಿ ತಂದರೆ ದಾಸೋಹ ಸಂತೃಪ್ತಿ ನೀಡುತ್ತದೆ. ಇಷ್ಟಲಿಂಗ ಪೂಜೆಯ ಕಲ್ಪನೆ ವಿಶ್ವಶಾಂತಿಗೆ ನೆಲೆಗೊಳಿಸುತ್ತದೆ. ಆ ನಿಟ್ಟಿನಲ್ಲಿ ಈ ಉತ್ಸವ ನಮ್ಮೆಲ್ಲರಲ್ಲಿ ಅರಿವು ಮೂಡಿಸಲಿ ಎಂದರು.

೪೫ನೇ ಶರಣ ಕಮ್ಮಟ ಮತ್ತು ಅನುಭವಮಂಟಪ ಉತ್ಸವ-೨೦೨೪ ರ ಉದ್ಘಾಟನೆ ದೀಪ ಬೆಳಗಿಸುವ ಮೂಲಕ ಮೇಘಾಲಯ ರಾಜ್ಯದ ಗೌರವಾನ್ವಿತ ರಾಜ್ಯಪಾಲ ಜಿ.ಎಚ್.ವಿಜಯಶಂಕರ ನೆರವೇರಿಸಿ, ಶುದ್ಧತೆ ಮತ್ತು ಬದ್ಧತೆ ಬಸವಾದಿ ಶರಣರಲ್ಲಿ ಗಟ್ಟಿಗೊಂಡು ಈ ಭೂಮಿ ಕಲ್ಯಾಣ ಭೂಮಿಯಾಯಿತು. ಅವರ ಅನುಭಾವ ನಮಗೆಲ್ಲ ಇಂದು ಜೀವನ ಪಾಠವಾಗಿದೆ. ಹುಟ್ಟಿನಿಂದ ಯಾರೂ ಮೇಲು-ಕೀಳು ಅಲ್ಲ, ಪ್ರತಿಭೆಯಿಂದ ಬರುತ್ತದೆ ಎಂದರು.

ಕರ್ನಾಟಕ ಸರಕಾರ ಮಾನ್ಯ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬೃಹತ್ ಅನುಭವಮಂಟಪ ಪರಮಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಸಂಕಲ್ಪವಾಗಿತ್ತು. ಆ ನಿಟ್ಟಿನಲ್ಲಿ ನಮ್ಮ ಘನಸರಕಾರ ಸಾಕಷ್ಟು ಅನುದಾನ ನೀಡಿ ಮುಂದಿನ ಅನುಭವಮಂಟಪ ಮಂಟಪ ಲೋಕಾರ್ಪಣೆ ಮಾಡುವ ಸಿದ್ಧತೆಯಲ್ಲಿದೆ ಎಂದರು.

ಸಮಾಜದ ವಿವಿದ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ ಶರಣ ಡಾ.ಕೆ.ಎಸ್.ರಾಜಣ್ಣ, ಶರಣ ನಾಗಮೋಹನ್ ದಾಸ್, ಶೃಣ ಬಿ.ಎಂ.ಪಾಟೀಲ್, ಶರಣ ಈ.ಕೃಷ್ಣಪ್ಪ ಅವರಿಗೆ ಕ್ರಮವಾಗಿ ಡಾ.ಚನ್ನಬಸವ ಪಟ್ಟದ್ದೇವರ ರಾಷ್ಟ್ರೀಯ ಪ್ರಶಸ್ತಿ, ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನಾ ಪ್ರಶಸ್ತಿ, ಬಸವಭಾಸ್ಕರ್ ರಾಷ್ಟ್ರೀಯ ಪ್ರಶಸ್ತಿ, ಅನುಭವಮಂಟಪ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಮಾರುತಿರಾವ ಮುಳೆ, ಶಶೀಲ್ ನಮೋಶಿ, ವಿಜಯಸಿಂಗ್ ಮುಂತಾದವರು ಇದ್ದರು. ಬಸವಕಲ್ಯಾಣ ಶಾಸಕ ಶರಣು ಸಲಗರ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು. ಶಶಿಧರ ಕೋಸಂಬೆ ವಂದಿಸಿದರು. ನೂಪುರ ಕಲಾತಂಡ ಬೀದರ ಅವರಿಂದ ವಚನ ನೃತ್ಯ ಗಮನ ಸೆಳೆಯಿತು. ಶರಣ ಶಿವಕುಮಾರ ಪಾಂಚಾಳ ಸಂಗಡಿಗರಿಂದ ವಚನ ಸಂಗೀತ ನಡೆಯಿತು.

https://chat.whatsapp.com/ERGi2S90sTpI5jd21WdMen
Share This Article
1 Comment
  • ಬಸವ ಬೆಳಗು ಪಸರಿಸಲಿ ಜಗದ ಕತ್ತಲು ಕಳೆಯಲಿ.
    ಕುವೆಂಪುರವರು ಹೇಳಿದಂತೆ ಬಸವಣ್ಣನವರು ಜಗದ ಕತ್ತಲ ಕಳೆಯಲು ಬಂದವರು ಆದ್ದರಿಂದ ಅನುಭವ ಮಂಟಪದ ಉತ್ಸವದ ಕಾರ್ಯಕ್ರಮದ ವಿಚಾರವನ್ನ ಬಸವಮೀಡಿಯಾ ವಿಶ್ವಕ್ಕೆ ತಲುಪಿಸಿ ಬಸವೋತ್ಸವ,ನವಯುಗೋತ್ಸವದ ಬಸವಯುಗ ಪ್ರಾರಂಭಗೊಳ್ಳಲಿ

Leave a Reply

Your email address will not be published. Required fields are marked *