ಚಾಮರಾಜನಗರದಲ್ಲಿ ಪ್ರಭುಲಿಂಗಲೀಲೆ ನಾಟಕ ತರಬೇತಿಗೆ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಜಯಂತಿಗೆ ಸಿದ್ಧತೆ

ಚಾಮರಾಜನಗರ:

ನಗರದ ಅನುಭವ ಮಂಟಪದಲ್ಲಿ ‘ಪ್ರಭುಲಿಂಗಲೀಲೆ’ನಾಟಕದ ತರಬೇತಿಗೆ ಈಚೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಅವರು, ಇಂದಿನ ಸಮಾಜದಲ್ಲಿ ದ್ವೇಷ, ಅಸೂಯೆ ಹಾಗೂ ಪ್ರತಿಷ್ಠೆಯ ಹೋರಾಟಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ 12ನೇ ಶತಮಾನದ ಶರಣರ ತತ್ವಗಳು ಮತ್ತು ಅವರ ಮಾರ್ಗದರ್ಶನ ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ತಾವು ಸಿದ್ದಮಲ್ಲೇಶ್ವರ ಕಲಾ ಬಳಗದ ಗೌರವ ಅಧ್ಯಕ್ಷರಾಗಿದ್ದು, ಮಠದ ವತಿಯಿಂದ ಮೇ 21 ಮತ್ತು 22ರಂದು ಗ್ರಾಮಾಂತರ ಬಸವ ಜಯಂತಿ ಹಾಗೂ ಸ್ಮರಣೋತ್ಸವವನ್ನು ಆಯೋಜಿಸಲಾಗುತ್ತಿದೆ. ಅದರ ಅಂಗವಾಗಿ ಹೊಂಡರಬಾಳು ಲಿಂಗರಾಜ ಅರಸ ಅವರು ರಚಿಸಿರುವ ‘ಪ್ರಭುಲಿಂಗಲೀಲೆ’ನಾಟಕವನ್ನು ಬೀರಿಹುಂಡಿ ಗೋವಿಂದರಾಜು ಅವರು ನಿರ್ದೇಶಿಸುತ್ತಿದ್ದು, ಅದರ ತರಬೇತಿಗೆ ಅನುಭವ ಮಂಟಪದಲ್ಲಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಈ ನಾಟಕವು ಅಲ್ಲಮಪ್ರಭು ಅವರ ಲೀಲೆಗಳು, ಶರಣರ ಆದರ್ಶ ಜೀವನ, ಇಷ್ಟಲಿಂಗ ಪೂಜೆಯ ಮಹತ್ವ ಹಾಗೂ ನಿರಹಂಕಾರದ ತತ್ವಗಳನ್ನು ಮನಮುಟ್ಟುವ ರೀತಿಯಲ್ಲಿ ನಿರೂಪಿಸುತ್ತದೆ. ಇದು ಕೇವಲ ಮನರಂಜನೆಗಾಗಿ ಸೀಮಿತವಾಗದೆ, ಜ್ಞಾನ ಮತ್ತು ಭಕ್ತಿಯ ಸಮ್ಮಿಲನವಾಗಿರುವ ಒಂದು ಆಧ್ಯಾತ್ಮಿಕ ನಾಟಕವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಾಟಕದ ನಿರ್ದೇಶಕ ಬೀರಿಹುಂಡಿ ಗೋವಿಂದರಾಜು, ಮಂಗಳ ಶಿವಣ್ಣ ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. ಕೋಡಿಮೋಳೆ ರಾಜಶೇಖರ, ಮೂಡುಪುರ ನಂದೀಶ, ಎನ್.ಆರ್. ಮಹದೇವಸ್ವಾಮಿ, ಸಿ.ಎಂ. ನರಸಿಂಹಮೂರ್ತಿ, ಅರುಣಕುಮಾರ, ಬಸವರಾಜು, ತೊರವಳ್ಳಿ ಕುಮಾರ, ಟಿ.ಎಂ. ಸ್ವಾಮಿ, ತುಮ್ಮನೇರಳೆ ನಾಗೇಂದ್ರ, ದಳಪತಿ ವೀರತಪ್ಪ, ಸುಂದ್ರಪ್ಪ, ಜೆ. ದೊರೆಸ್ವಾಮಿ, ಆರ್.ವಿ. ಮಹದೇವಸ್ವಾಮಿ, ಗುರು, ಬಿಸಲವಾಡಿ ಉಮೇಶ, ರಾಮಸಮುದ್ರ ಬಾಬು, ಜನ್ನೂರು ರೇವಣ್ಣ, ಎಂ.ಪಿ. ರಾಜಣ್ಣ, ಶೇಖರಪ್ಪ, ಎನ್.ಜೆ. ಬಸವರಾಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *