ಗದಗ
೨೦೨೫ ನೇ ಸಾಲಿನ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ೦೫-೦೪-೨೦೨೫ ರಂದು ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪ ಗದಗ ಇಲ್ಲಿ ಶನಿವಾರ ಬೆಳಿಗ್ಗೆ ೯-೦೦ ಗಂಟೆಗೆ ಯೋಗ ಶಿಬಿರ, ಬೆಳಿಗ್ಗೆ ೧೦-೩೦ ಗಂಟೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೯-೦೦ ಗಂಟೆಗೆ ತೋಂಟದಾರ್ಯ ಮಠದ ಪಕ್ಕದ ಆವರಣದಲ್ಲಿ ಪುರುಷರ ಕಬಡ್ಡಿ ಪಂದ್ಯಾವಳಿ ಜರುಗುವುದು.
ಪ್ರವಚನ ಕಾರ್ಯಕ್ರಮ
೨೦೨೫ ನೇ ಸಾಲಿನ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ೦೫-೦೪-೨೦೨೫ ರಿಂದ ೧೧-೦೪-೨೦೨೫ ರವರೆಗೆ ಶ್ರೀಮಠದಲ್ಲಿ ಪ್ರತಿದಿನ ೭-೩೦ ಗಂಟೆಗೆ ಪೂಜ್ಯ ಶ್ರೀ ಡಾ. ಮಹಾಂತಪ್ರಭು ಮಹಾಸ್ವಾಮಿಗಳು, ವಿರಕ್ತಮಠ, ಶೇಗುಣಸಿ ಇವರಿಂದ ಪ್ರವಚನ ಜರುಗಲಿದೆ.
ಷಟಸ್ಥಲ ಧ್ವಜಾರೋಹಣ
ಜಾತ್ರಾ ಮಹೋತ್ಸವದ ಅಂಗವಾಗಿ ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮವು ದಿನಾಂಕ : ೦೫/೦೪/೨೦೨೫ ರಂದು ಶನಿವಾರ ಮುಂಜಾನೆ ೮-೩೦ ಗಂಟೆಗೆ ಪರಮಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಜರುಗಲಿದೆ.
ಈ ಕಾರ್ಯಕ್ರಮಗಳಲ್ಲಿ ಶ್ರೀ ಮಠದ ಸದ್ಭಕ್ತರು, ಬಸವಾಭಿಮಾನಿಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು, ಲಿಂಗಾಯತ ಪ್ರಗತಿಶೀಲ ಸಂಘ, ಜಾಗತಿಕ ಲಿಂಗಾಯತ ಮಹಾಸಭಾ, ಬಸವದಳ-ಬಸವಕೇಂದ್ರದ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.
